Get Even More Visitors To Your Blog, Upgrade To A Business Listing >>

ಅನಧಿಕೃತ ಹೂವಿನ ಅಂಗಡಿಗಳ ತೆರವು :ಕೊಲ್ಲೂರು ರಥಬೀದಿಯಲ್ಲಿ ಕಾರ್ಯಚರಣೆ

Tags: agravesup

83691536-a577-44c8-a692-7ac21a7ca944

ಕೊಲ್ಲೂರು: ಶ್ರೀ ಮೂಕಾಂಬಿಕಾ ದೇವಸ್ಥಾನದ ರಥಬೀದಿಯಲ್ಲಿರುವ ಅನಧೀಕೃತ ಹೂವಿನ ಅಂಗಡಿಗಳ ತೆರವುಗೊಳಿಸಲಾಯಿತು. ಎಲ್ಲಾ ಹೂವಿನ ಅಂಗಡಿ(ಫ್ಲವರ್ ಸ್ಟಾಲ್ಸ್)ಯವರಿಗೆ ತೆರವುಗೊಳಿಸುವಂತೆ ಗಡುವು ನೀಡಲಾಗಿತ್ತು. ಆದರೆ ತೆರವಿಗೆ ಸಮಯ ಮೀರಿರುವುದನ್ನು ಕಂಡು ಸ್ವತಃ ದೇವಳದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಎಚ್. ಕೃಷ್ಣಮೂರ್ತಿ ರಸ್ತೆಗಿಳಿದು ಒತ್ತಾಯದಿಂದ ತೆರವುಗೊಳಿಸಿದರು.

bc49a533-ba53-42e8-82fb-2e060eb345ba

ಹೂವು ಮಾರುವ ಅಸಹಾಯಕ ಹೆಂಗಸರು ಅತ್ತೂ ಕರೆದರೂ ಯಾರೂ ಇವರ ಸಹಾಯಕ್ಕೆ ಬರಲಿಲ್ಲ. ವೃತ್ತ ನಿರೀಕ್ಷಕ ರಾಘವ ಎಸ್. ಪಡೀಲ್, ಠಾಣಾಧಿಕಾರಿ ಶೇಖರ್ ಅಹಿತಕರ ಘಟನೆ ನಡೆಯದಂತೆ ಬಿಗು ಪೋಲಿಸ್ ಬಂದೋಬಸ್ತ್ ಮಾಡಿದ್ದರು. ತಮಗಾದ ಅನ್ಯಾಯವನ್ನು ಪೋಲಿಸ್ ಅಧಿಕಾರಿಗಳಿಗೆ ವಿವರಿಸುತ್ತಿರುವ ಹೂವಾಡಗಿತ್ತಿ.
ದೇವಾಲಯಕ್ಕೆ ಬರುವ ಭಕ್ತರಿಗೆ ಇವತ್ತಿನವರೆಗೂ ಸರಿಯಾದ ವ್ಯವಸ್ಥೆಯಿಲ್ಲ. ಅಷ್ಟೊಂದು ಸಬ್ಬಂದಿಗಳಿದ್ದರೂ ಈ ಬಗ್ಗೆ ಯಾರಿಗೂ ಕಾಳಜಿಯಿಲ್ಲ. ದೇವಾಲಯದ ಹಣ, ಚಿನ್ನ, ಬೆಳ್ಳಿ ಕದ್ದವರಿಗೂ ಯಾವ ಶಿಕ್ಷೆಯಾಗದೇ ಬಚಾವಾಗುತ್ತಿದ್ದಾರೆ. ಅಂತಹುದರಲ್ಲಿ ನಾವು ಬಡವರು. ಜೀವನಕ್ಕೋಸ್ಕರ ರಥಬೀದಿಯಲ್ಲಿ ಹೂವಿನ ವ್ಯಾಪಾರ ಮಾಡುತ್ತಿದ್ದೇವೆ. ಕೇವಲ ಒಂದು ಟೇಬಲ್ ಹಾಗೂ ಒಂದು ಕುರ್ಚಿಯ ಸಹಾಯದಿಂದಷ್ಟೇ ನಮ್ಮ ವ್ಯವಹಾರ ನಡೆಯುತ್ತಿದೆ. ನಮ್ಮಿಂದ ಯಾರಿಗೂ ಏನೂ ತೊಂದರೆಯಾಗದಿದ್ದರೂ ಕೂಡಾ ಯಾವುದೋ ನೆಪಹೇಳಿ ನಮ್ಮ ಹೊಟ್ಟೆ ಮೆಲೆ ಹೊಡೆಯುತ್ತಿದ್ದಾರೆ. ಈ ಸ್ಥಳದ ಬಾಡಿಗೆ ಕೊಡಲೂ ನಾವೆಲ್ಲರೂ ಸಿದ್ದರಿದ್ದೇವೆ. ನಮಗೊಂದು ಪರ್ಯಾಯ ವ್ಯವಸ್ಥೆಯೇ ಇಲ್ಲದೇ ದಿಕ್ಕು ಕಾಣದಾಗಿದೆ. ಊರಿನ ನೂರಾರು ಜನ ಹೂಗಳನ್ನು ಬೆಳೆದು ಮಾಲೆಮಾಡಿ ನಮಗೆ ತಂದುಕೊಡುತ್ತಾರೆ. ಇದರಿಂದ ಅವರು ಬೆಳೆಸಿದ ಹೂವುಗಳಿಗೆ ಬೆಲೆಯೂ ಸಿಗುವುದರಿಂದ ಅವರ ಜೀವನಕ್ಕೂ ಅಲ್ಪ-ಸ್ವಲ್ಪ ಅನುಕೂಲವಾಗುತ್ತಿತ್ತು. ಈಗ ಎಲ್ಲಾ ದಿಕ್ಕುಗಳು ಮುಚ್ಚಿವೆ ಎಂದು ಸಂತ್ರಸ್ಥರು ಅವಲತ್ತುಕೊಂಡರು.

ಈ ಬಗ್ಗೆ ಎ‌ಇ‌ಒರಲ್ಲಿ ಕೇಳಿದಾಗ ಅವರು, ನಮಗೆ ಯಾರ ಮೇಲೆಯೂ ದ್ವೇಶವಿಲ್ಲ. ಜನದಟ್ಟಣಿ ಸಮಯದಲ್ಲಿ ಭಕ್ತಾದಿಗಳು ಬಿಸಿಲು, ಮಳೆಯಲ್ಲಿ ನಿಲ್ಲಬಾರದೆಂಬ ಕಾರಣಕ್ಕಾಗಿ ಭಕ್ತರ ಅನುಕೂಲತೆಗಾಗಿ ಈ ಸ್ಥಳದಲ್ಲಿ ಸುಸಜ್ಜಿತವಾದ ಕ್ಯೂಗೇಟ್(ಸರತಿ ಸಾಲಿಗಾಗಿ) ನಿರ್ಮಾಣ ಮಾಡಲಿದ್ದೇವೆ. ಈ ಕುರಿತು ಮೇಲಾಧಿಕಾರಿಗಳು ಪರಿಶೀಲಿಸಿ ತರಗೆದುಕೊಂಡ ನಿರ್ಧಾರದಂತೆ ಅವರ ಆದೇಶದ ಪ್ರಕಾರ ನಾವು ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಅಷ್ಟೆ ಹೊರತು ಬೇರಾವ ದುರುದ್ದೇಶದಿಂದಲ್ಲ ಎಂದ ಸಮರ್ಥಿಸಿಕೊಂಡರು.
ವರದಿ: ಸುಶಾಂತ್ ಬೈಂದೂರುThis post first appeared on V4news, please read the originial post: here

Share the post

ಅನಧಿಕೃತ ಹೂವಿನ ಅಂಗಡಿಗಳ ತೆರವು :ಕೊಲ್ಲೂರು ರಥಬೀದಿಯಲ್ಲಿ ಕಾರ್ಯಚರಣೆ

×

Subscribe to V4news

Get updates delivered right to your inbox!

Thank you for your subscription

×