Get Even More Visitors To Your Blog, Upgrade To A Business Listing >>

ವಿಶ್ವದಲ್ಲೇ ಪ್ರಥಮ ಎನ್ನಲಾದ ಸಂಚಾರಿ ರೈಲ್ವೆ ಆಸ್ಪತ್ರೆ ಲೈಫ್‌ಲೈನ್ ಎಕ್ಸೆಪ್ರೆಸ್ ಆ.೧ರಿಂದ ಪ್ರಾರಂಭ ಭಟ್ಕಳ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ಲೈಫ್‌ಲೈನ್ ಎಕ್ಸೆಪ್ರೆಸ್

hospital train4

 
ವಿಶ್ವದಲ್ಲೇ ಪ್ರಥಮ ಎನ್ನಲಾದ ಸಂಚಾರಿ ರೈಲ್ವೆ ಆಸ್ಪತ್ರೆ ‘ಲೈಫ್‌ಲೈನ್ ಎಕ್ಸಪ್ರೆಸ್’ ಆಗಸ್ಟ್ ೧ ಸೋಮವಾರದಿಂದ ಆಗಸ್ಟ್ ೨೧ ರವರೆಗೆ ಶಸ್ತ್ರಚಿಕಿತ್ಸೆ ಸೇರಿದಂತೆ ಆರೋಗ್ಯ ಸೇವೆಗಳನ್ನು ಉಚಿತವಾಗಿ ಒದಗಿಸಲಿದೆ. ಈ ಹಿನ್ನೆಲೆಯಲ್ಲಿ ೨೭ ಜುಲೈ ಬುಧವಾರದಂದು ಭಟ್ಕಳದ ರೈಲ್ವೆ ನಿಲ್ದಾಣಕ್ಕೆ ಬಂದು ನಿಂತಿದೆ. ‘ಲೈಫ್‌ಲೈನ್ ಎಕ್ಸಪ್ರೆಸ್’ ಎನ್ನುವುದು ಸಂಚಾರಿ ರೈಲ್ವೆ ಆಸ್ಪತ್ರೆಯಾಗಿದ್ದು, ರೈಲ್ವೆ ಒಳಗಿನ ಸಂಪೂರ್ಣ ಚಿತ್ರಣ ಹೇಗಿದೆ ಎನ್ನುವುದು ಕುತೂಹಲವಿದ್ದರೆ? ಹಾಗಿದ್ದರೆ ಈ ಬಗ್ಗೆ ಇಲ್ಲಿದೆ ನೋಡಿ ಒಂದು ವಿಶೇಷ ವರದಿ.
ಯಸ್, ಜಗತ್ತಿನಲ್ಲಿಯೇ ಪ್ರಥಮ ಬಾರಿಗೆ ರೈಲ್ವೆಯಲ್ಲಿಯೇ ಆಸ್ಪತ್ರೆಯೊಂದು ನಿರ್ಮಾಣವಾಗಿದ್ದು, ‘ಲೈಫ್‌ಲೈನ್ ಎಕ್ಸಪ್ರೆಸ್’ ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ. ದೇಶದ ಪ್ರಸಿದ್ಧ ತಜ್ಞ ವೈದ್ಯರು ಆರೋಗ್ಯ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆಗಳನ್ನು ಇದರಲ್ಲಿ ನಡೆಸಲಿದ್ದು, ಜಿಲ್ಲೆಯ ಎಲ್ಲಾ ಅರ್ಹ ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಮನವಿ ಮಾಡಿದ್ದಾರೆ.

hospital train1
ಈ ಸುಸಜ್ಜಿತ ರೈಲಿನಲ್ಲಿ ಎರಡು ಆಪರೇಶನ್ ಥಿಯೇಟರ್ ಹಾಗೂ ಐದು ಆಪರೇಶನ್ ಟೇಬಲ್‌ಗಳಿವೆ. ರೋಗಿಗಳಿಗೆ ಸಂಪೂರ್ಣ ಉಚಿತವಾಗಿ ಆರೋಗ್ಯ ಸೇವೆ ಮಾತ್ರವಲ್ಲದೆ ಊಟ, ಉಪಹಾರ ಒದಗಿಸಲಾಗುವುದು. ದಾಖಲಾಗುವ ರೋಗಿಗಳಿಗೆ ಉಚಿತ ಔಷಧ, ವಸತಿ ಸೌಕರ್ಯವನ್ನು ಸಹ ಕಲ್ಪಿಸಲಾಗುವುದು. ಇದರ ಸೌಲಭ್ಯವನ್ನು ಪಡೆಯಲು ಬಯಸುವವರು ನಿಗದಿತ ನಮೂನೆಯ ಅರ್ಜಿಯನ್ನು ತುಂಬಬೇಕು. ಈ ಅರ್ಜಿ ನಮೂನೆ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಲಭ್ಯವಿದೆ. ವಿವಿಧ ರೋಗಗಳ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆಯನ್ನು ದೇಶದ ಖ್ಯಾತ ವೈದ್ಯರು ನಡೆಸಲಿದ್ದು, ಕಿವಿ ರೋಗ, ಮೂರ್ಚೆ ರೋಗ, ದಂತ ಚಿಕಿತ್ಸೆ, ಹರಿದ ಅಥವಾ ಸೀಳು ತುಟಿ, ಸುಟ್ಟ ಗಾಯಗಳಿಗೆ ಶಸ್ತ್ರಚಿಕಿತ್ಸೆ, ಪೋಲೀಯೊ ರೋಗಿಗಳಿಗೆ ಸಲಕರಣೆ, ಕಣ್ಣಿನ ತಪಾಸಣೆ ಕಾರ್ಯಗಳನ್ನು ಈ ಅವಧಿಯಲ್ಲಿ ನಡೆಸಲಾಗುವುದು. ಪ್ರತಿಯೊಂದು ಚಿಕಿತ್ಸೆಗಳಿಗೆ ದಿನಾಂಕ ನಿಗದಿಪಡಿಸಲಾಗಿದ್ದು, ಸದರಿ ದಿನಾಂಕಗಳಂದು ಸಾರ್ವಜನಿಕರು ಭೇಟಿ ನೀಡಿ ಉಚಿತ ಚಿಕಿತ್ಸೆ ಪಡೆಯಬೇಕಾಗಿದೆ. ಚಿಕಿತ್ಸೆ ದಿನಾಂಕ ವಿವರ: ಭಟ್ಕಳ ತಾಲೂಕು ಆಸ್ಪತ್ರೆಯಲ್ಲಿ ಈ ಕೆಳಕಂಡ ದಿನಗಳಂದು ಪೂರ್ವಭಾವಿ ತಪಾಸಣೆ ಕಾರ್ಯ ನಡೆಯಲಿದೆ. ಆಗಸ್ಟ್ ೨ ರಿಂದ ೪ ರವರೆಗೆ ಕಣ್ಣಿನ ತಪಾಸಣೆ (ಕ್ಯಾಟರಾಕ್ಟ್ ಸೇರಿದಂತೆ), ಆಗಸ್ಟ ೨ ರಿಂದ ೯ ರವರೆಗೆ ‘ಲೈಫ್‌ಲೈನ್ ಎಕ್ಸಪ್ರೆಸ್’ನಲ್ಲಿ ಶಸ್ತ್ರಚಿಕಿತ್ಸೆ ನಡೆಯಲಿದೆ. ಸೀಳು ತುಟಿ ಪರಿಶೀಲನೆ ಆಗಸ್ಟ ೧೦ ಮತ್ತು ೧೧ ರಂದು ನಡೆಯಲಿದೆ. ಶಸ್ತ್ರಚಿಕಿತ್ಸೆ ಅಗಸ್ಟ ೧೧ ರಿಂದ ೧೩ ರವರೆಗೆ ನಡೆಯಲಿದೆ. ಆರ್ಥೋಪೆಡಿಕ್ ತಪಾಸಣೆ ಅಗಸ್ಟ ೧೦ ಮತ್ತು ೧೧ ರಂದು, ಶಸ್ತ್ರಚಿಕಿತ್ಸೆ ಅಗಸ್ಟ ೧೧ ರಿಂದ ೧೩ ರವರೆಗೆ ನಡೆಯಲಿದೆ. ಕಿವಿ ತಪಾಸಣೆ ಅಗಸ್ಟ ೧೪ ರಿಂದ ೧೬ ರವರೆಗೆ ಹಾಗೂ ಶಸ್ತ್ರಚಿಕಿತ್ಸೆ ಅಗಸ್ಟ ೧೫ ರಿಂದ ೨೧ ರವರೆಗೆ ನಡೆಯಲಿದೆ. ದಂತ ಚಿಕಿತ್ಸೆ ಅಗಸ್ಟ ೮ ರಿಂದ ೧೪ ರವರೆಗೆ ಹಾಗೂ ಮೂರ್ಚೆ ರೋಗಕ್ಕೆ ಚಿಕಿತ್ಸೆ ಅಗಸ್ಟ ೧೯ ರಿಂದ ೨೧ ರವರೆಗೆ ನಡೆಯಲಿದೆ.

hospital train3

hospital train2
ದಂತ ರೋಗಿಗಳ ಹಲ್ಲುಗಳ ಸ್ವಚ್ಛತೆ, ಭರ್ತಿ, ಕೆಟ್ಟ ಮತ್ತು ಕೊಳೆತ ಹಲ್ಲುಗಳ ಕೀಳುವಿಕೆ ಕ್ಯಾಂಪ್‌ನಲ್ಲಿ ಮಾಡಲಾಗುವುದು. ಮೂರ್ಚೆ ರೋಗಿಗಳ ಪರೀಕ್ಷೆ ನಂತರ ತಜ್ಞ ಸಲಹೆ, ಅಗತ್ಯ ಔಷಧಗಳನ್ನು ನೀಡಲಾಗುವುದು. ಕಣ್ಣು ತಪಾಸಣೆ ಬಳಿಕ ಅಗತ್ಯವಿರುವವರಿಗೆ ಕ್ಯಾಟರ್ಯಾಕ್ಟ್ ಚಿಕಿತ್ಸೆಯನ್ನು ನಿಗದಿತ ದಿನಾಂಕಗಳಂದು ಬೆಳಿಗ್ಗೆ ೯ ರಿಂದ ಸಂಜೆ ೫ ರ ತನಕ ನಡೆಸಲಾಗುವುದು. ಮೂರ್ಚೆ ರೋಗ ಚಿಕಿತ್ಸೆ ಕುರಿತು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಿಗೆ ತರಬೇತಿಯನ್ನು ಸಹ ನೀಡಲಾಗುವುದು. ಇದೇ ರೀತಿ ಸುತ್ತಲಿನ ಗ್ರಾಮಗಳ ಶಾಲೆಗಳಲ್ಲಿ ದಂತ ಸುರಕ್ಷೆ ಬಗ್ಗೆ ಉಪನ್ಯಾಸ ಏರ್ಪಡಿಸಲಾಗುವುದು. ಜಿಲ್ಲೆಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳುಬೇಕು. ‘ಲೈಫ್‌ಲೈನ್ ಎಕ್ಸಪ್ರೆಸ್’ ಯೋಜನೆಯ ಯೋಜನಾ ನಿರ್ದೇಶಕ ಡಾ. ವೈಭವ್ ದಾಡ್ಕರ್, ದಾಮೋದರ್ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

ರಾಘವೇಂದ್ರ ಮಲ್ಯ ಭಟ್ಕಳ



This post first appeared on V4news, please read the originial post: here

Share the post

ವಿಶ್ವದಲ್ಲೇ ಪ್ರಥಮ ಎನ್ನಲಾದ ಸಂಚಾರಿ ರೈಲ್ವೆ ಆಸ್ಪತ್ರೆ ಲೈಫ್‌ಲೈನ್ ಎಕ್ಸೆಪ್ರೆಸ್ ಆ.೧ರಿಂದ ಪ್ರಾರಂಭ ಭಟ್ಕಳ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ಲೈಫ್‌ಲೈನ್ ಎಕ್ಸೆಪ್ರೆಸ್

×

Subscribe to V4news

Get updates delivered right to your inbox!

Thank you for your subscription

×