Get Even More Visitors To Your Blog, Upgrade To A Business Listing >>

ಬಾಳೆಪುಣಿ ಗ್ರಾಮ ಪಂಚಾಯತ್ ಆವರಣದಲ್ಲಿ ಹಸಿರುಕ್ರಾಂತಿ: 1000 ಕ್ಕೂ ಅಧಿಕ ಗಿಡಗಳಿಗೆ ಜೀವ ಕೊಡುವ ಪ್ರಯತ್ನ

Tags: agravesup

balepuni (1)

ಬಾಳೆಪುಣಿ ಗ್ರಾಮ ಪಂಚಾಯತ್ ವತಿಯಿಂದ 1000 ಗಿಡಗಳನ್ನು ಬರಡು ಭೂಮಿಯಲ್ಲಿ ನಡುವ ಮೂಲಕ ಹಸಿರು ಕ್ರಾಂತಿಯನ್ನು ನಡೆಸಲಾಯಿತು.

balepuni (2)

balepuni (3)

balepuni (4)

ಅದು ಕೃಷಿ ಪ್ರಧಾನ ಗ್ರಾಮ. ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ  ಕೃಷಿಕರ ಸಂಖ್ಯೆಯೂ ಅಲ್ಲೇ ಜಾಸ್ತಿ.  ಆದರೆ   ಪಂಚಾಯಿತಿ ಕಟ್ಟಡ ಇರುವ 4ರಿಂದ 5ಎಕರೆ ಪ್ರದೇಶ ಖಾಲಿ ಬರಡು ಭೂಮಿಯಾಗಿತ್ತು. ಆದರೆ  ಸದ್ಯ  1000 ಕ್ಕಿಂತಲೂ ಅಧಿಕ ಗಿಡಗಳನ್ನು  ಬರಡು ಭೂಮಿಯಲ್ಲಿ ನೆಡುವ ಮೂಲಕ ಪಂಚಾಯಿತಿ ಆವರಣದಲ್ಲಿ ಹಸಿರು ಕ್ರಾಂತಿಯನ್ನು  ಮಾಡಲು  ಬಾಳೆಪುಣಿ ಗ್ರಾಮ ಪಂಚಾಯಿತಿ ಆಡಳಿತ    ಉಳ್ಳಾಲದ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಸಹಕಾರದ ಜತೆಗೆ ಹೊರಟಿದೆ.

ಹೀಗಿದೆ ಗ್ರಾಮ: ಬಂಟ್ವಾಳ ತಾಲೂಕಿನ ಗ್ರಾಮ ಪಂಚಾಯತ್‌ಗಳಲ್ಲಿ 3550.81ಹೆಕ್ಟರ್ ಭೌಗೋಳಿಕ ವಿಸ್ತಿರ್ಣ ಹೊಂದಿರುವ ಎರಡು ಗ್ರಾಮ(ಬಾಳೆಪುಣಿ ಮತ್ತು ಕೈರಂಗಳ)ಗಳನ್ನು ಒಳಗೊಂಡ ಗ್ರಾಮ ಪಂಚಾಯತ್ .ಪ್ರಧಾನವಾಗಿ ಕೃಷಿಭೂಮಿಯನ್ನೊಳಗೊಂಡ ಪ್ರದೇಶವಾಗಿದೆ. ಸಂಪೂರ್ಣ ಸ್ವಚ್ಚತಾ ಅಂದೋಲನದಡಿ “ರಾಷ್ಟ್ರ ಮಟ್ಟದ ನಿರ್ಮಲ ಗ್ರಾಮ ಪುರಸ್ಕಾರ” ಪಡೆದಿದ್ದು ಗ್ರಾಮದ 2,022ಕುಟುಂಬಗಳು ಶೌಚಾಲಯಗಳನ್ನು ಹೊಂದಿದೆ. 3 ಹಿರಿಯ ಪ್ರಾಥಮಿಕ ಶಾಲೆ , 2 ಕಿರಿಯ ಪ್ರಾಥಮಿಕ ಶಾಲೆ , ಪ್ರೌಢಶಾಲೆ, ಜವಾಹರ ನವೋದಯ ವಿದ್ಯಾಲಯ , ಇಂಜಿನಿಯರ್ ಕಾಲೇಜು ನಡುಪದವು ಮುಂತಾದ ಶೈಕ್ಷಣಿಕ ಕೇಂದ್ರಗಳನ್ನೊಳಗೊಂಡ  ಪಂಚಾಯಿತಿ ಮಾಹಿತಿ ತಂತ್ರಜ್ಞಾನದ ಪ್ರಸಿದ್ದ ಕಂಪೆನಿಯಾದ ಇನ್ಫೋಸಿಸ್  ಕೂಡಾ ಪಂಚಾಯತ್ ವ್ಯಾಪ್ತಿಯ ಕೈರಂಗಳ ಗ್ರಾಮದಲ್ಲಿದೆ.  ಕೃಷಿ, ಕೃಷಿ ಕೂಲಿ ಹಾಗೂ ಕೃಷಿಯೇತರ ಕೂಲಿ ಇಲ್ಲಿನ ಜನರ ಮುಖ್ಯ ಉದ್ಯೋಗವಾಗಿದೆ. ಮಹಿಳೆಯರು ಬೀಡಿ ಉದ್ಯಮವನ್ನೇ ಆಶ್ರಯಿಸಿದ್ದಾರೆ.

4-5 ಎಕರೆ ಸ್ಥಳ ಬಾಳೆಪುಣಿ  ಗ್ರಾಮ ಪಂಚಾಯಿತಿ ಕಟ್ಟಡ ಇರುವ ಪ್ರದೇಶದಲ್ಲಿದೆ.  ಆದರೆ ಕಟ್ಟಡ ಆರಂಭವಾಗಿನಿಂದಲೂ ಈವರೆಗೂ ಯಾವುದೇ ಗಿಡಮರಗಳು ಇಲ್ಲದೇ ಬರಡು ಭೂಮಿಯಂತಿತ್ತು.  ಈ ಬಗ್ಗೆ  ಸರ್ವತೃ ಆಡಳಿತ ನಡೆಸಿದ ಯಾರೂ ಗೋಜಿಗೆ ಹೋಗಿರಲಿಲ್ಲ.  ೨೦೧೫-೧೬ ನೇ ಸಾಲಿನಲ್ಲಿ ಉಳ್ಳಾಲದ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ  ಪಂಚಾಯಿತಿಯನ್ನು   ದತ್ತು ಪಡೆದುಕೊಂಡ ಹಿನ್ನೆಲೆಯಲ್ಲಿ  ಕೃಷಿಕರಿಗೆ ಪ್ರೋತ್ಸಾಹಿಸುವ ಕಾರ್ಯಕ್ರಮಗಳನ್ನು ಆರಂಭಿಸಿತು.   ಪಂಚಾಯಿತಿ ವಠಾರದಲ್ಲಿ  ನೆಡಲು ೫೦೦ ಒಳ್ಳೆಮೆಣಸು, ೧೩೦ ಚಿಕ್ಕು , ೫೦ ತೆಂಗಿನಕಾಯಿ ಗಿಡ,  180 ಲಿಂಬು, 100 ಗೇರು, 100 ನೀರುಗುಜ್ಜೆ  ಹಾಗೂ 50 ಜಾಕ್  ಗಿಡಗಳನ್ನು  ನೀಡಲಾಯಿತು.  ಅದರಂತೆ  ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಡಿ.ಯಸ್.ಗಟ್ಟಿ ಇವರ ಚಾಲನೆಯೊಂದಿಗೆ  ಸಾಮೂಹಿಕ 1000 ದಷ್ಟು ಗಿಡಗಳನ್ನು ನೆಡಲಾಯಿತು.  ಶಾಲಾ ವಿದ್ಯಾರ್ಥಿಗಳು, ಅಧ್ಯಾಪಕರು , ಪಂಚಾಯಿತಿ ಸಿಬ್ಬಂದಿ, ಗ್ರಾಮಸ್ಥರು, ಗ್ರಾಮದ ಕೃಷಿಕರು  ಸೇರಿಕೊಂಡು ಮುರಕಲ್ಲಿನಲ್ಲಿ ಹೊಂಡ ಅಗೆದು  ಗಿಡಗಳನ್ನು ನೆಟ್ಟರು.

ಆದರೆ ನೆಟ್ಟ ಗಿಡಗಳಿಗೆ ರಕ್ಷಣೆ ಒದಗಿಸಲು  ರಾಜೀವ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ  ಬೇಲಿಯನ್ನು ಹಾಕಲು ಪಂಚಾಯಿತಿ ತೀರ್ಮಾನ ಕೈಗೊಂಡಿದೆ.

ಕೃಷಿಕರು ಹೆಚ್ಚಿರುವ ಗ್ರಾಮದಲ್ಲಿ ಈ ಬಾರಿ ಬರಗಾಲ ಗಂಭೀರ ಪರಿಣಾಮ ಬೀರಿತ್ತು.  ಕೃಷಿ ಚಟುವಟಿಕೆಗಳಿಗೂ ನೀರಿನ ಅಭಾವ ಎದುರಾಗಿದ್ದರಿಂದ ರೈತರು ಸಾಕಷ್ಟು ನಷ್ಟಗಳನ್ನು ಅನುಭವಿಸಬೇಕಾಯಿತು.  ಟ್ಯಾಂಕರ್ ಮೂಲಕ  ಗ್ರಾಮಕ್ಕೆ ನೀರು ಹಾಕಲಾಗಿತ್ತು.  ಆದರೆ ಈ ವರ್ಷ ಅಂತಹ ಸ್ಥಿತಿ ಎದುರಾಗಬಾರದು ಅನ್ನುವ ದೃಷ್ಟಿಯಿಂದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾದ ರವಿ ಕುಮಾರ್.ಸಿ ಅವರ ಮುಂದಾಳತ್ವ ಹಾಗೂ ಮುಂಜಾಗ್ರತಾ ಕ್ರಮದಿಂದ ಪಂಚಾಯಿತಿ ಆವರಣದಲ್ಲಿ ಗಿಡ ನೆಟ್ಟಲ್ಲಿ ಗ್ರಾಮಕ್ಕೆ ಮಾದರಿಯಾಗುವ  ದೃಷ್ಟಿಯಿಂದ 1000 ದಷ್ಟು ಗಿಡಗಳನ್ನು ನೆಡಲಾಯಿತು.  ಗ್ರಾಮದ ಜನರು  ಮರ ಗಿಡಗಳನ್ನು ಕಡಿಯುವುದನ್ನು ಬಿಟ್ಟು, ಬೆಳೆಸುವ ಪ್ರಯತ್ನವನ್ನು ಪಂಚಾಯಿತಿ ವಠಾರವನ್ನು ನೋಡಿ ಮಾಡಲಿ ಅನ್ನುವ ದೃಷ್ಟಿಯಿಂದ ಸಂಶೋಧನೆ ಕೇಂದ್ರದ ವತಿಯಿಂದ  130 ರೈತರಿಗೆ ಗಿಡಗಳನ್ನು ವಿತರಿಸಲಾಯಿತು.

ವರದಿ: ಆರೀಫ್ ಕಲ್ಕಟ್ಟThis post first appeared on V4news, please read the originial post: here

Share the post

ಬಾಳೆಪುಣಿ ಗ್ರಾಮ ಪಂಚಾಯತ್ ಆವರಣದಲ್ಲಿ ಹಸಿರುಕ್ರಾಂತಿ: 1000 ಕ್ಕೂ ಅಧಿಕ ಗಿಡಗಳಿಗೆ ಜೀವ ಕೊಡುವ ಪ್ರಯತ್ನ

×

Subscribe to V4news

Get updates delivered right to your inbox!

Thank you for your subscription

×