Get Even More Visitors To Your Blog, Upgrade To A Business Listing >>

ಕಾಸರಗೋಡು ಬಸ್ ನಿಲ್ದಾಣ ಶೋಚನೀಯಾವಸ್ಥೆ: ವಾಗ್ದಾನದ ಬಳಿಕ ಖಾಸಗಿ ಬಸ್ ಮುಷ್ಕರ ಹಿಂತೆಗೆತ

ಮಂಜೇಶ್ವರ: ಕಾಸರಗೋಡು ಬಸ್ ನಿಲ್ದಾಣ ಸಂಪೂರ್ಣವಾಗಿ ಶೋಚನೀಯಾವಸ್ಥೆ ತಲುಪಿದ ಹಿನ್ನೆಲೆಯಲ್ಲಿ ಕೇರಳ ಬಸ್ ಓನರ್ಸ್ ಅಸೋಸಿಯೇಶನ್ ಅನಿರ್ಧಿಷ್ಟಾವಧಿಕಾಲ ಮುಷ್ಕರಕ್ಕೆ ಆಹ್ವಾನ ನೀಡಿತ್ತು.

ಈ ಹಿನ್ನೆಲೆಯಲ್ಲಿ ಇದರಿಂದ ಎಚ್ಚೆತ್ತುಗೊಂಡ ಮುನ್ಸಿಪಲ್ ಸೆಕ್ರಟರಿ ಹಾಗೂ ಅಧಿಕಾರಿಗಳು ಬಸ್ ಓನರ್ಸ್ ಅಸೋಸಿಯೇಶನ್ ರವರ ಜತೆಯಾಗಿ ಬಸ್ ನಿಲ್ದಾಣವನ್ನು ಸಂದರ್ಶಿಸಿ ಶೋಚನೀಯಾವಸ್ಥೆಯನ್ನು ನೇರವಾಗಿ ವೀಕ್ಷಿಸಿದ್ದರು. ಬಳಿಕ ಮುನ್ಸಿಪಲ್ ಕಾರ್ಯದರ್ಶಿಯವರು ಬಸ್ ಓನರ್ಸ್ ರವರೊಂದಿಗೆ ಚರ್ಚೆ ನಡೆಸಿ ಕಾಮಗಾರಿಯನ್ನು ಆರಂಭಿಸಿ ಶೀಘ್ರವೇ ಪರಿಹಾರವನ್ನು ಕಂಡು ಕೊಳ್ಳುವುದಾಗಿ ನೀಡಿದ ಭರವಸೆಯ ಹಿನ್ನೆಲೆಯಲ್ಲಿ ಖಾಸಗಿ ಬಸ್ಸುಗಳ ಅನಿರ್ಧಿಷ್ಟಾವಧಿ ಮುಷ್ಕರವನ್ನು ತಾತ್ಕಾಲಿಕವಾಗಿ ರದ್ದು ಗೊಳಿಸಿರುವುದಾಗಿ ಬಸ್ ಓನರ್ಸ್ ನೇತಾರರು ತಿಳಿಸಿದ್ದಾರೆ. ಜೂನ್ 15 ಕ್ಕೆ ಬಸ್ ನಿಲ್ದಾಣ ಪುನರ್ ನವೀಕರಣಕ್ಕಾಗಿ ಇಂತರ್ ಲಾಕ್ ಸೇರಿದಂತೆ ಇತರ ಸಾಮಾಗ್ರಿಗಳನ್ನು ತರಲಾಗುವುದು. ಜ್ನ್ 20ಕ್ಕೆ ಕಾಮಗಾರಿಗೆ ಚಾಲನ್ ನೀಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಮುನ್ಸಿಪಲ್ ಸೆಕ್ರಟರಿ ಜತೆಯಾಗಿ ಮುನ್ಸಿಪಲ್ ಚೇರ್ ಮ್ಯಾನ್ ಅಬ್ದುಲ್ ರಹ್ಮಾನ್, ಬಸ್ ಆನರ್ಸ್ ಜಿಲ್ಲಾಧ್ಯಕ್ಷ, ತಾಲೂಕು ಅಧ್ಯಕ್ಷ ಮೊದಲಾದವರು ಉಪಸ್ಥಿತರಿದ್ದರು.



This post first appeared on V4news, please read the originial post: here

Share the post

ಕಾಸರಗೋಡು ಬಸ್ ನಿಲ್ದಾಣ ಶೋಚನೀಯಾವಸ್ಥೆ: ವಾಗ್ದಾನದ ಬಳಿಕ ಖಾಸಗಿ ಬಸ್ ಮುಷ್ಕರ ಹಿಂತೆಗೆತ

×

Subscribe to V4news

Get updates delivered right to your inbox!

Thank you for your subscription

×