Get Even More Visitors To Your Blog, Upgrade To A Business Listing >>

ಶಾಲಾ ಪ್ರಾರಂಭೋತ್ಸವ: ಅಮ್ಮನ ತೊಟ್ಟಿಲಿನಿಂದ ಶಾಲೆಯ ಮೆಟ್ಟಿಲಿಗೆ: ಮಕ್ಕಳನ್ನು ವಿಶೇಷ ರೀತಿಯಲ್ಲಿ ಸ್ವಾಗತಿಸಿದ ಶಿಕ್ಷಕ ವೃಂದ

ಅನುದಾನಿತ ಶ್ರೀ ವೆಂಕಟ್ರಮಣ ಹಿರಿಯ ಪ್ರಾಥಮಿಕ ಶಾಲೆ ಪ್ರಾರಂಭಗೊಂಡಿದ್ದು, ಅಮ್ಮನ ತೊಟ್ಟಿಲಿನಿಂದ ಶಾಲೆಯ ಮೆಟ್ಟಿಲಿಗೆ ಎಂದು ವಿಶೇಷ ರೀತಿಯಲ್ಲಿ ಶಾಲಾ ಮಕ್ಕಳನ್ನು ಸ್ವಾಗತಿಸಲಾಯಿತು.

ಮಂಗಳೂರಿನ ಕುಳಾಯಿಯಲ್ಲಿರುವ ಅನುದಾನಿತ ಶ್ರೀ ವೆಂಕಟ್ರಮಣ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2016-17ನೇ ಸಾಲಿನ ಶಾಲಾ ಪ್ರಾರಂಭೋತ್ಸವವನ್ನು ವಿಶೇಷ ರೀತಿಯಲ್ಲಿ ಆಚರಿಸಿಕೊಂಡರು. ಅಮ್ಮನ ತೊಟ್ಟಿಲಿನಿಂದ ಶಾಲೆಯ ಮೆಟ್ಟಿಲಿಗೆ ಎನ್ನುವ ರೀತಿಯಲ್ಲಿ ವಿದ್ಯಾರ್ಥಿಗಳನ್ನು ಮತ್ತೆ ಶಾಲೆಗೆ ಬರಮಾಡಿಕೊಂಡರು.

ಶಾಲೆಯನ್ನು ಮದುವಣಗಿತ್ತಿಯಂತೆ ಶೃಂಗರಿಸಲಾಗಿತ್ತು ,ಶಾಲಾ ಮಕ್ಕಳನ್ನು ಮೊದಲಿಗೆ ವಾದ್ಯ ಘೋಷಗಳೊಂದಿಗೆ ಬರಮಾಡಿಕೊಳ್ಳಲಾಯಿತು. ಮೈಮ್ ರಾಮ್‌ದಾಸ್‌ರವರ ಹಾಡು ಮಕ್ಕಳನ್ನು ಇನ್ನೂ ಹುರುಪುಗೊಳಿಸುವಂತಿತ್ತು, ಬಳಿಕ ಕುದ್ರೋಳಿ ಗಣೇಶ್ ರವರು ಮ್ಯಾಜಿಕ್ ಮೂಲಕ ಶಾಲಾ ಪ್ರಾರಂಭೋತ್ಸವವನ್ನು ವಿವರಿಸುತ್ತಾ ಹೋದರು.

ಇನ್ನೋಂದು ವಿಶೇಷತೆ ಎಂದರೆ, ಮಗುವನ್ನು ತೊಟ್ಟಿಲಲ್ಲಿ ತೂಗಿ ಬಳಿಕ ಶಿಕ್ಷಕ ವೃಂದವರಿಗೆ ಹಸ್ತಾಂತರಿಸಿದ್ದು ವಿಶೇಷತೆಯಾಗಿತ್ತು. ಅಂತೂ ಬಹಳ ವಿಭಿನ್ನ ರೀತಿಯಲ್ಲಿ ಮಕ್ಕಳನ್ನು ಶಾಲೆಗೆ ಆಕರ್ಷಿಸುವ ರೀತಿಯಲ್ಲಿ ಅನುದಾನಿತ ಶ್ರೀ ವೆಂಕಟ್ರಮಣ ಹಿರಿಯ ಪ್ರಾಥಮಿಕ ಶಾಲೆಯವರು ಶಾಲಾ‌ಅ ಪ್ರಾರಂಭೋತ್ಸವವನ್ನು ನಡೆಸಿಕೊಟ್ಟರು.

ಈ ಸಂದರ್ಭ ರಾಘವೇಂದ್ರ ಅಗರಿ, ದಿನೇಶ್ ಕುಳಾಯಿ, ಶ್ರೀಧರ್ ಎಚ್, ಜಯರಾಮ್ ಸುಮನ್, ಶಾಲಾ ಅಧ್ಯಾಪಕ ವೃಂದ ಮತ್ತು ಶಾಲಾ ಸಂಚಾಲಕರು ಉಪಸ್ಥಿತರಿದ್ದರು.

ವರದಿ: ಶರತ್

The post ಶಾಲಾ ಪ್ರಾರಂಭೋತ್ಸವ: ಅಮ್ಮನ ತೊಟ್ಟಿಲಿನಿಂದ ಶಾಲೆಯ ಮೆಟ್ಟಿಲಿಗೆ: ಮಕ್ಕಳನ್ನು ವಿಶೇಷ ರೀತಿಯಲ್ಲಿ ಸ್ವಾಗತಿಸಿದ ಶಿಕ್ಷಕ ವೃಂದ appeared first on V4News.



This post first appeared on V4news, please read the originial post: here

Share the post

ಶಾಲಾ ಪ್ರಾರಂಭೋತ್ಸವ: ಅಮ್ಮನ ತೊಟ್ಟಿಲಿನಿಂದ ಶಾಲೆಯ ಮೆಟ್ಟಿಲಿಗೆ: ಮಕ್ಕಳನ್ನು ವಿಶೇಷ ರೀತಿಯಲ್ಲಿ ಸ್ವಾಗತಿಸಿದ ಶಿಕ್ಷಕ ವೃಂದ

×

Subscribe to V4news

Get updates delivered right to your inbox!

Thank you for your subscription

×