Get Even More Visitors To Your Blog, Upgrade To A Business Listing >>

ನ.ಪಂ ವಿರುದ್ದ ಕಾಂಗ್ರೆಸ್ ಪ್ರತಿಭಟನೆ ರಾಜಕೀಯ ಪ್ರೇರಿತ: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಪ್ರಮಾಣಕ್ಕೆ ಬರಲಿ: ಸುದ್ದಿಗೋಷ್ಟಿಯಲ್ಲಿ ನ.ಪಂ ಅಧ್ಯಕ್ಷ ಪ್ರಕಾಶ್ ಹೆಗ್ಡೆ ಸವಾಲ್

ಸುಳ್ಯ ನಗರ ಪಂಚಾಯಿತಿಯಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರವಾಗಲೀ, ಸ್ವಜನ ಪಕ್ಷಪಾತವಾಗಲೀ ನಡೆಯುತ್ತಿಲ್ಲ. ನಗರ ಪಂಚಾಯಿತಿಯ ವತಿಯಿಂದ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಸಹಿಸಲಾಗದೆ ರಾಜಕೀಯ ದುರುದ್ದೇಶದಿಂದ ಕಾಂಗ್ರೆಸ್‌ನವರು ಇಲ್ಲ ಸಲ್ಲದ ಆರೋಪ ಮಾಡಿ ನಗರ ಪಂಚಾಯಿತಿಯ ಎದುರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ತನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿದ ವೆಂಕಪ್ಪ ಗೌಡರು ಸುಳ್ಯ ನಗರದ ಕಲ್ಕುಡ ದೈವಸ್ಥಾನದಲ್ಲಿ ಬಂದು ಪ್ರಮಾಣ ಮಾಡಬೇಕು ಎಂದು ಸುಳ್ಯ ನಗರ ಪಂಚಾಯಿತಿ ಅಧ್ಯಕ್ಷ ಪ್ರಕಾಶ್ ಹೆಗ್ಡೆ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಎಂಟು ತಿಂಗಳಲ್ಲಿ ನಗರ ಪಂಚಾಯಿತಿಯಲ್ಲಿ ಉತ್ತಮ ಅಭಿವೃದ್ಧಿ ಕೆಲಸಗಳು ನಡೆಯುತಿದೆ. ಒಂದೇ ಒಂದು ಭ್ರಷ್ಟಾಚಾರದ ದೂರುಗಳು ಬಂದಿಲ್ಲ. ಟೆಂಡರ್ ಮಾಡದೆ ಯಾವುದೇ ಕಾಮಗಾರಿ ನಡೆಸಲು ಅಥವಾ ಬಿಲ್ ಪಾವತಿಸಲು ಸಾಧ್ಯವಿಲ್ಲ. ಎಲ್ಲಾ ಕಾಮಗಾರಿಗಳನ್ನೂ ಸಮರ್ಪಕವಾಗಿ ಮತ್ತು ವ್ಯವಸ್ಥಿತವಾಗಿ ನಡೆಸಲಾಗುತಿದೆ. ಕಳೆದ ವರ್ಷ 1.31 ಕೋಟಿ ತೆರಿಗೆ ಸಂಗ್ರಹಿಸಲಾಗಿದೆ, ನೀರಿನ ಬಿಲ್ ಸಂಗ್ರಹ ಒಂದು ಕೋಟಿ ರೂ ದಾಟಿದೆ. ಈ ಹಿಂದಿನ ವರ್ಷಗಳಿಗಿಂತ ಇದು ಸಾಕಷ್ಟು ಹೆಚ್ಚಳ ಕಂಡಿದೆ ಎಂದರು.

ಸ್ವಚ್ಛ ನಗರ ರೂಪಿಸುವ ಕುರಿತು ಎಲ್ಲಾ ಪ್ರಯತ್ನಗಳನ್ನೂ ನಡೆಸಲಾಗುತಿದೆ. ಜೂ. ಐದರಂದು ಸುಮಾರು 60 ಸಂಘ ಸಂಸ್ಥೆಗಳ ಸಹಕಾರದಲ್ಲಿ ಸುಳ್ಯ ನಗರದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅಲ್ಲದೆ ಸುಳ್ಯವನ್ನು ಸ್ವಚ್ಛ ನಗರವನ್ನಾಗಿಸುವ ಸ್ವಚ್ಛತಾ ಅಭಿಯಾನವನ್ನು ವರ್ಷ ಪೂರ್ತಿ ಹಮ್ಮಿಕೊಳ್ಳಲಾಗುತಿದೆ. ಅಕಾಡೆಮಿ ಆಫ್ ಲಿಬರರಲ್ ಎಜ್ಯುಕೇಶನ್‌ನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಅವರನ್ನು ಸ್ವಚ್ಛ ಸುಳ್ಯ ಅಭಿಯಾನದ ರಾಯಭಾರಿಯನ್ನಾಗಿಸಲು ನಿರ್ಧರಿಸಲಾಗಿದೆ.  ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಎಲ್ಲಾ ವಾರ್ಡ್‌ಗಳಿಗೂ ಸ್ವಚ್ಛತಾ ಕಾರ್ಯಕ್ಕಾಗಿ 75 ಸಾವಿರ ರೂ ಅನುದಾನವನ್ನು ನೀಡಲಾಗುವುದು. ಪ್ರತಿ ವಾರ್ಡ್ ಸದಸ್ಯರನ್ನು ಸ್ವಚ್ಛತಾ ಅಭಿಯಾನದ ಉಸ್ತುವಾರಿಗಳನ್ನಾಗಿ ನೇಮಕ ಮಾಡಲಾಗುವುದು. ಅಲ್ಲದೆ ಪ್ರತಿ ವಾರ್ಡ್‌ಗೆ ರಸ್ತೆ ಮತ್ತಿತರ ಕಾಮಗಾರಿಗಾಗಿ ನಗರ ಪಂಚಾಯಿತಿ ನಿಧಿಯಿಂದ ಐದು ಲಕ್ಷ ರೂವನ್ನು ನೀಡಲಾಗುವುದು. ಕಲ್ಚರ್ಪೆಯ ಕಸ ವಿಲೇವಾರಿ ಘಟಕದಲ್ಲಿ ಕಸ ವಿಲೇವಾರಿ ಮಾಡಲು ಸ್ಥಳ ಸಾಕಾಗುವುದಿಲ್ಲ. ಆದುದರಿಂದ ಕಸ ವಿಲೇವಾರಿ ಘಟಕದ ಸ್ಥಾಪನೆಗೆ ಬೇರೆ ಸ್ಥಳ ಗುರುತಿಸುವ ಪ್ರಯತ್ನ ನಡೆಸಲಾಗುತಿದೆ ಎಂದು ಅವರು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ನಗರ ಪಂಚಾಯಿತಿ ಮುಖ್ಯಾಧಿಕಾರಿ ಎಂ.ಆರ್.ಸ್ವಾಮಿ ಮಾತನಾಡಿ ‘ಅಂಗವಿಕಲರ ಪುನರ್‌ವಸತಿ ಕೇಂದ್ರಕ್ಕೆ ಪೀಠೋಪಕರಣ ಖರೀದಿಯಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ. ಕುಡಿಯುವ ನೀರಿನ ಘಟಕದ ದುರಸ್ಥಿಗೆ ಒಟ್ಟು 20 ಸಾವಿರ ರೂ ಖರ್ಚಾಗಿದೆ. ಅದರಲ್ಲಿ ಆರು ಸಾವಿರ ರೂವನ್ನು ಸಾರ್ವಜನಿಕರು ದೇಣಿಗೆ ನೀಡಿದ್ದಾರೆ. ಉಳಿದ 14 ಸಾವಿರ ರೂಗಳನ್ನು ನಗರ ಪಂಚಾಯಿತಿ ವತಿಯಿಂದ ಪಾವತಿಸಲಾಗಿದೆ ಎಂದು ವಿವರಿಸಿ ಬಿಲ್‌ಗಳನ್ನು ಹಾಜರು ಪಡಿಸಿದರು

ತಾನು ನಗಗರ ಪಂಚಾಯಿತಿ ಸಿಬ್ಬಂದಿಗಳನ್ನು ಬಳಸಿ ಹಣ ಸಂಗ್ರಹಿಸಿ ಭ್ರಷ್ಟಾಚಾರ ಮಡುವುದಾಗಿ ಆರೋಪ ಮಾಡಿರುವ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವೆಂಕಪ್ಪ ಗೌಡ ಅವರನ್ನು ಸತ್ಯ ಪ್ರಮಾಣಕ್ಕೆ ಕರೆಯುವುದಾಗಿ ಪ್ರಕಾಶ್ ಹೆಗ್ಡೆ ಹೇಳಿದರು. ಮುಂದಿನ ಸೋಮವಾರ ಅವರನ್ನು ದೈವಸ್ಥಾನಕ್ಕೆ ಸತ್ಯ ಪ್ರಮಾಣಕ್ಕೆ ಕರೆಯುವುದಾಗಿ ಪ್ರಕಾಶ್ ಹೆಗ್ಡೆ ಹೇಳಿದ್ದಾರೆ.

The post ನ.ಪಂ ವಿರುದ್ದ ಕಾಂಗ್ರೆಸ್ ಪ್ರತಿಭಟನೆ ರಾಜಕೀಯ ಪ್ರೇರಿತ: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಪ್ರಮಾಣಕ್ಕೆ ಬರಲಿ: ಸುದ್ದಿಗೋಷ್ಟಿಯಲ್ಲಿ ನ.ಪಂ ಅಧ್ಯಕ್ಷ ಪ್ರಕಾಶ್ ಹೆಗ್ಡೆ ಸವಾಲ್ appeared first on V4News.This post first appeared on V4news, please read the originial post: here

Share the post

ನ.ಪಂ ವಿರುದ್ದ ಕಾಂಗ್ರೆಸ್ ಪ್ರತಿಭಟನೆ ರಾಜಕೀಯ ಪ್ರೇರಿತ: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಪ್ರಮಾಣಕ್ಕೆ ಬರಲಿ: ಸುದ್ದಿಗೋಷ್ಟಿಯಲ್ಲಿ ನ.ಪಂ ಅಧ್ಯಕ್ಷ ಪ್ರಕಾಶ್ ಹೆಗ್ಡೆ ಸವಾಲ್

×

Subscribe to V4news

Get updates delivered right to your inbox!

Thank you for your subscription

×