Get Even More Visitors To Your Blog, Upgrade To A Business Listing >>

ಬ್ಯಾಂಕಿಂಗ್ ಸೇವೆಯ ಖಾಸಗೀಕರಣಕ್ಕೆ ವಿರೋಧ: ಮಂಜೇಶ್ವರದಲ್ಲಿ ಬ್ಯಾಂಕ್ ನೌಕರರ ಸಾಂಕೇತಿಕ ಪ್ರತಿಭಟನೆ

ಮಂಜೇಶ್ವರ: ಬ್ಯಾಂಕಿಂಗ್ ಸೇವೆಗಳು ಜಗತ್ತಿಗೆ ಮಾದರಿಯಾದ ಭಾರತದ ಪ್ರಾದೇಶಿಕ ಬ್ಯಾಂಕಿಂಗ್ ಸೇವೆಗಳನ್ನು ಖಾಸಗೀಕರಣ ಗೊಳಿಸುವ ಹುನ್ನಾರವನ್ನು ಪ್ರತಿಭಟಿಸಿ ಜಿಲ್ಲೆಯಲ್ಲಿ ಬ್ಯಾಂಕ್ ನೌಕರರು ಸೂಚನಾ ಪ್ರತಿಭಟನೆಯನ್ನು ನಡೆಸಿದರು.

ಅಸೋಸಿಯೇಟ್ ಬ್ಯಾಂಕ್ ಸಿಬ್ಬಂದಿಗಳು ಸ್ಟೇಟ್ ಬ್ಯಾಂಕ್ ಆಫ್ ಟ್ರಾವೆಂಕೂರು ಕಚೇರಿಯ ಮುಂಬಾಗದಲ್ಲಿ ಪ್ರತಿಭಟಿಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ರಷ್ಟ್ರ ಮಟ್ತದಲ್ಲಿ ನಡೆದ ಮುಷ್ಕರದ ಭಾಗವಾಗಿ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿಕೊಂಡು ಕಾಸರಗೋಡು ಜಿಲೆಯ ಅಸೋಸಿಯೇಟ್ ಬ್ಯಾಂಕ್ ಸಿಬಂದಿಗಳನ್ನು ಕೆಲಸಕ್ಕೆ ಹಾಜರಾಗದೆ ಮುಷ್ಕರಕ್ಕೆ ಸಾಥ್ ನೀಡಿದರು. ಮೋಹನ್ ಚೆಂಗಳ, ಪಿ ಶಶಿಧರ, ಶ್ರೀಕೇಶ್ ಕುಮಾರ್, ಶಿವ ನಾಯ್ಕ್ ಹಾಗೂ ಚಂದ್ರಲೇಖ ಪ್ರತಿಭಟನೆಗೆ ನೇತೃತ್ವ ನೀಡಿದರು.

ಎಸ್ ಬಿ ಟಿ ರೀತಿಯ ಅತೀ ಹೆಚ್ಚಿನ ಬ್ಯಾಂಕುಗಳು ರಾಜ್ಯದಲ್ಲಿ ಅತೀ ಹೆಚ್ಚಿನ ವಹಿವಾಟುಗಳನ್ನು ನಡೆಸುತ್ತಾ ಬಂದಿದೆ. ಗ್ರಾಹಕರಿಗಾಗಿ ಉತ್ತಮ ಸೇವೆಯನ್ನು ನೀಡುತ್ತಿರುವ ಇಂತಹ ಪ್ರಾದೇಶಿಕ ಬ್ಯಾಂಕ್ ಗಳನ್ನು ಖಾಸಗೀಕರಣ ಗೊಳಿಸಿದರೆ ಮುಂದಿನ ದಿನಗಳಲ್ಲಿ ಗ್ರಾಹಕರಿಗೆ ಸೇವೆಯನ್ನು ನೀಡುತ್ತಿರುವ ಶಾಖೆಗಳನ್ನು ಮುಚ್ಚಲಾಗುತ್ತದೆ ಮಾತ್ರವಲ್ಲದೆ ಸಿಬ್ಬಂದಿಗಳನ್ನು ಕೂಡಾ ಕಮ್ಮಿ ಮಾಡಲಾಗುತ್ತದೆ. ಇದನ್ನು ಪ್ರತಿಭಟಿಸಿ ಪ್ರತಿಭಟನೆ ನಡೆಸಲಾಯಿತು. ಇದೊಂದು ಸೂಚನಾ ಪ್ರತಿಭಟನೆಯಾಗಿದ್ದು, ಇದಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಟ್ರಾವೆಂಕೂರು ನಂತಹ ಬ್ಯಾಂಕ್ ಆಡಳಿತ ಸ್ಪಂಧಿಸದೇ ಇದ್ದರೆ ಮುಂದಿನ ದಿನಗಳಲ್ಲಿ ಅನಿರ್ಧಿಷ್ಟಾವಧಿ ಸತ್ಯಾಗ್ರಹಕ್ಕೆ ಮುಂದಾಗುವುದಾಗಿ ಪ್ರತಿಭಟನಾ ನಿರತರು ಎಚ್ಚರಿಸಿದರು.

ವರದಿ: ರಹಿಮಾನ್ ಉದ್ಯಾವರ

The post ಬ್ಯಾಂಕಿಂಗ್ ಸೇವೆಯ ಖಾಸಗೀಕರಣಕ್ಕೆ ವಿರೋಧ: ಮಂಜೇಶ್ವರದಲ್ಲಿ ಬ್ಯಾಂಕ್ ನೌಕರರ ಸಾಂಕೇತಿಕ ಪ್ರತಿಭಟನೆ appeared first on V4News.This post first appeared on V4news, please read the originial post: here

Share the post

ಬ್ಯಾಂಕಿಂಗ್ ಸೇವೆಯ ಖಾಸಗೀಕರಣಕ್ಕೆ ವಿರೋಧ: ಮಂಜೇಶ್ವರದಲ್ಲಿ ಬ್ಯಾಂಕ್ ನೌಕರರ ಸಾಂಕೇತಿಕ ಪ್ರತಿಭಟನೆ

×

Subscribe to V4news

Get updates delivered right to your inbox!

Thank you for your subscription

×