Get Even More Visitors To Your Blog, Upgrade To A Business Listing >>

ಗ್ರಾಮ ದೇವಾಲಯ ಧರ್ಮ ಜಾಗೃತಿಯ ಕೇಂದ್ರವಾಗಲೀ: ಉಚ್ಚಿಲದಲ್ಲಿ ಕೋಟ ಶ್ರೀನಿವಾಸ್ ಪೂಜಾರಿ

ಮನೆಮನಗಳಿಂದ ಭಜನೆಗಳೂ ದೂರವಾಗುತ್ತಿರುವ ಕಾಲಘಟ್ಟಗಳಲ್ಲಿ ಮುಂದಿನ ಪೀಳಿಗೆಗೆ ಧಾರ್ಮಿಕ ವಿಚಾರವನ್ನು ತಿಳಿಸುವ ಕೆಲಸ ಕಾರ್ಯ ಬ್ರಹ್ಮಕಲಶೋತ್ಸವದಂತಹ ಧಾರ್ಮಿಕ ಕಾಯಕದಿಂದ ಆಗಬೇಕಿದೆ. ಧಾರ್ಮಿಕ ಉತ್ಸವಗಳಿಂದಲಾದರೂ ಮುಂದಕ್ಕೆ ಜನಜಾಗೃತಿಯಾಗಬೇಕು. ಭಗವಂತನಿಂದ ಭಕ್ತರಿಗೆ ಅನುಗ್ರಹವೇ ಹೊರತು ಅನ್ಯಾಯ ಆಗುವುದಿಲ್ಲ. ದೇವಾಲಯಗಳು ಧರ್ಮ ಜಾಗೃತಿಯ ಕೇಂದ್ರವಾಗಿದೆ. ಮನೆಮನೆಯಲ್ಲೂ ಮರೆಯಾದ ಭಾರತೀಯ ಜೀವನ ಪದ್ಧತಿ ಮರುಕಳಿಸಿದರೆ ಧರ್ಮ ಜಾಗೃತಗೊಳ್ಳುತ್ತದೆ ಎಂದು ರಾಜ್ಯ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಭಾನುವಾರ ರಾತ್ರಿ ಉಚ್ಚಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶ ಸಂಪನ್ನಗೊಂಡ ನಂತರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಡಾ. ವ್ಯಾಸ ಭಟ್ ಹುಬ್ಬಳ್ಳಿ ಧಾರ್ಮಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಸನ್ಮಾನ:  ಡೆಪ್ಯುಟಿ ಸುಪರಿಂಟೆಂಡೆಂಟ್ ಆಫ್ ಪೊಲೀಸ್, ಅನುಪಮಾ ಶೆಣೈ ಉಚ್ಚಿಲ, ಪಡುಬಿದ್ರಿ ಠಾಣಾ ಎಸ್ಸೈ ಅಜ್ಮತಾಲಿ ಜಿ.,  ಶ್ರೀ ದೇವಳದ ಆಡಳಿತಾಧಿಕಾರಿ ರಾಮಕೃಷ್ಣ ನಾಯ್ಕ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಸುರೇಶ್ ಶೆಟ್ಟಿ ಗುರ್ಮೆ, ಶ್ರೀ ದೇವಳದ ಪ್ರಧಾನ ಅರ್ಚಕ ಯು. ಸೀತಾರಾಮ ಭಟ್,  ಅಷ್ಟಬಂಧ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜಯಕರ ಶೆಟ್ಟಿ ಪೊಲ್ಯ ಬಾಂಜಗುತ್ತು, ಬಡಾಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಇಂದಿರಾ ಶೆಟ್ಟಿ,  ಕ.ಸಾ.ಪ. ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಹೊಟೇಲು ಉದ್ಯಮಿಗಳಾದ ಸುಧಾಕರ ಹೆಗ್ಡೆ, ಕೃಷ್ಣ ಶೆಟ್ಟಿ, ನಾರಾಯಣ ಶೆಟ್ಟಿ, ಸುರೇಶ್ ಶೆಟ್ಟಿ, ಕುರ್ಕಾಲು ಜಿ.ಪಂ. ಕ್ಷೇತ್ರದ ಸದಸ್ಯೆ ಗೀತಾಂಜಲಿ, ಎಲ್ಲೂರು ಜಿ.ಪಂ. ಸದಸ್ಯೆ ಶಿಲ್ಪಾ, ಪೊಲ್ಯ ಲಕ್ಷ್ಮೀ ನಾರಾಯಣ ಶೆಟ್ಟಿ, ದಾನಿಗಳಾದ ಅಣ್ಣಾವರ ಶಂಕರ ಶೆಟ್ಟಿ, ರತ್ನಾಕರ ಶೆಟ್ಟಿ,  ವೇದಿಕೆಯಲ್ಲಿದ್ದರು.

ಶಿಕ್ಷಕ ಪಿ. ಶಶಿಶೇಖರ ಭಟ್ ಸ್ವಾಗತಿಸಿದರು. ಅಷ್ಟಬಂಧ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ ಪೊಲ್ಯ ವಂದಿಸಿದರು. ಸತೀಶ್ ಶೆಟ್ಟಿ ಗುಡ್ಡೆಚ್ಚಿ ಕಾರ್ಯಕ್ರಮ ನಿರ್ವಹಿಸಿದರು.

ವರದಿ -ಸುರೇಶ್ ಎರ್ಮಾಳ್

The post ಗ್ರಾಮ ದೇವಾಲಯ ಧರ್ಮ ಜಾಗೃತಿಯ ಕೇಂದ್ರವಾಗಲೀ: ಉಚ್ಚಿಲದಲ್ಲಿ ಕೋಟ ಶ್ರೀನಿವಾಸ್ ಪೂಜಾರಿ appeared first on V4News.



This post first appeared on V4news, please read the originial post: here

Share the post

ಗ್ರಾಮ ದೇವಾಲಯ ಧರ್ಮ ಜಾಗೃತಿಯ ಕೇಂದ್ರವಾಗಲೀ: ಉಚ್ಚಿಲದಲ್ಲಿ ಕೋಟ ಶ್ರೀನಿವಾಸ್ ಪೂಜಾರಿ

×

Subscribe to V4news

Get updates delivered right to your inbox!

Thank you for your subscription

×