Get Even More Visitors To Your Blog, Upgrade To A Business Listing >>

ಕನ್ಯಪ್ಪಾಡಿ ಬಾಡಿಗೆ ಮನೆಯಿಂದ ಕಳವು ಪ್ರಕರಣ: ಓರ್ವ ಆರೋಪಿ ಪೊಲೀಸ್ ವಶಕ್ಕೆ

ಮಂಜೇಶ್ವರ: ಕನ್ಯಪ್ಪಾಡಿ ಬಾಡಿಗೆ ಮನೆಯೊಂದರಿಂದ 50 ಸಾವಿರ ರೂ. ಕಳವುಗೈದ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ತಳಂಗರೆ ಬಾಂಗೋಡ್ ನಿವಾಸಿ ಮೊಹಮ್ಮದ್ ಅರ್ಫಾಸ್ (22) ಎಂಬಾತ ಸೆರೆಗೀಡಾದ ಆರೋಪಿ. ಈ ತಿಂಗಳ 11ರಂದು ಕನ್ಯಪ್ಪಾಡಿಯಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸಿಸುತಿದ್ದ ತಿಮೋತಿ ಡಿ ಸೋಜ ಎಂಬವರ ಬಾಡಿಗೆ ಮನೆಯಿಂದ ೫೦ ಸಾವಿರ ರೂ. ಕಳವಿಗೀದಾಗಿತ್ತು. ಬಾಡಿಗೆ ಮನೆಯ ಹಿಂಬಾಗದ ಬಾಗಿಲಿನ ಬೀಗ ಮುರಿದು ಒಳನುಗ್ಗಿದ ಆರೋಪಿ ಕಪಾಟಿನಲ್ಲಿರಿಸಲಾಗಿದ್ದ ಹಣ ಕಳವು ನಡೆಸಿದ್ದನು. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಈ ಕಳವು ನಡೆದಿತ್ತು. ಆರೋಪಿಯ ಪತ್ನಿಯ ಮನೆ ಕನ್ಯಪ್ಪಾಡಿಯಲ್ಲಿದ್ದು, ಆರೋಪಿ ಅರ್ಫಾಸ್ ಕಳವು ನಡೆದ ದಿನ ಅಲ್ಲಿ ತಿರುಗಾಡುತ್ತಿರುವುದನ್ನು ಸ್ಥಳೀಯರು ಕಂಡಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿರುವ ಮಧ್ಯೆ ಆರೋಪಿ ಮುಂಬೈಗೆ ಪರಾರಿಯಾಗಿರುವುದು ಇನ್ನಷ್ಟು ಶಂಕೆಗೆ ಕಾರಣವಾಯಿತು. ಈ ಮಧ್ಯೆ ಆರೋಪಿ ಪತ್ನಿಯ ಮನೆಯಿರುವ ಕನ್ಯಪ್ಪಾಡಿಗೆ ಬಂದಾಗ ಪೊಲೀಸರು ಬಂಧಿಸಿ ಬಳಿಕ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ವರದಿ: ರೆಹಮಾನ್ ಉದ್ಯಾವರ

The post ಕನ್ಯಪ್ಪಾಡಿ ಬಾಡಿಗೆ ಮನೆಯಿಂದ ಕಳವು ಪ್ರಕರಣ: ಓರ್ವ ಆರೋಪಿ ಪೊಲೀಸ್ ವಶಕ್ಕೆ appeared first on V4News.



This post first appeared on V4news, please read the originial post: here

Share the post

ಕನ್ಯಪ್ಪಾಡಿ ಬಾಡಿಗೆ ಮನೆಯಿಂದ ಕಳವು ಪ್ರಕರಣ: ಓರ್ವ ಆರೋಪಿ ಪೊಲೀಸ್ ವಶಕ್ಕೆ

×

Subscribe to V4news

Get updates delivered right to your inbox!

Thank you for your subscription

×