Get Even More Visitors To Your Blog, Upgrade To A Business Listing >>

ಹಾಸನ-ಮಂಗಳೂರು ರೈಲು ಮಾರ್ಗದಲ್ಲಿ ಅತ್ಯಾಧುನಿಕ ಸಿಗ್ನಲ್ ಕಾರ್ಯಾರಂಭ

Tags: agravesup

ಮಂಗಳೂರು-ಹಾಸನ ರೈಲು ಮಾರ್ಗದ ಎಡಕುಮೇರಿ ಹಾಗೂ ಕಡಗರವಳ್ಳಿ ನಿಲ್ದಾಣ ಮಧ್ಯೆ ಕೈಗೊಂಡಿದ್ದ ಅತ್ಯಾಧುನಿಕ ವ್ಯವಸ್ಥೆಗಳನ್ನು ಒಳಗೊಂಡ ಸಿಗ್ನಲ್ ವ್ಯವಸ್ಥೆ ಅಳವಡಿಕೆ ಕಾಮಗಾರಿ ಪೂರ್ಣಗೊಂಡು ಕಾರ್ಯಾರಂಭಿಸಿದೆ. ಸಿಗ್ನಲ್ ವ್ಯವಸ್ಥೆ ಉನ್ನತೀಕರಣದಿಂದಾಗಿ ಈ ಮಾರ್ಗದಲ್ಲಿ ರೈಲು ಸಂಚಾರ ಸಾಮರ್ಥ್ಯ ಶೇ.35ರಷ್ಟು ವೃದ್ಧಿಯಾಗಿದ್ದು, ಹೆಚ್ಚು ಪ್ರಯಾಣಿಕರ ಹಾಗೂ ಸರಕು ಸಾಗಾಟ ರೈಲುಗಳ ಸಂಚಾರ ಸಾಧ್ಯವಾಗಲಿದೆ. ಹಾಸನ-ಮಂಗಳೂರು ರೈಲ್ವೇ ಅಭಿವೃದ್ಧಿ ನಿಗಮ ಇದರ 4.4 ಕೋ.ರೂ. ವೆಚ್ಚವನ್ನು ಭರಿಸಿದೆ. ಇದರಿಂದ ಕಡಗರವಳ್ಳಿ ಹಾಗೂ ಎಡಕುಮೇರಿ ನಿಲ್ದಾಣಗಳಲ್ಲಿ ರೈಲುಗಳ ಕ್ರಾಸಿಂಗ್ ಸೌಲಭ್ಯಗಳು ಲಭ್ಯವಾಗಲಿದ್ದು ರೈಲುಗಳ ಸಂಚಾರ ಸಂಖ್ಯೆ ಗಳನ್ನು ಹೆಚ್ಚಿಸಲು ಸಾಧ್ಯವಾಗಲಿದೆ. ಈ ಮಾರ್ಗದಲ್ಲಿ 24 ತಾಸುಗಳಲ್ಲಿ ರೈಲುಗಳ ಸಂಚಾರ ಸಾಮರ್ಥ್ಯ 20ಕ್ಕೇರಲಿದೆ. ಪ್ರಸ್ತುತ 13 ರೈಲುಗಳು ಈ ಮೂಲಕ ಸಂಚರಿಸುತ್ತಿವೆ.This post first appeared on V4news, please read the originial post: here

Share the post

ಹಾಸನ-ಮಂಗಳೂರು ರೈಲು ಮಾರ್ಗದಲ್ಲಿ ಅತ್ಯಾಧುನಿಕ ಸಿಗ್ನಲ್ ಕಾರ್ಯಾರಂಭ

×

Subscribe to V4news

Get updates delivered right to your inbox!

Thank you for your subscription

×