Get Even More Visitors To Your Blog, Upgrade To A Business Listing >>

ದ.ಕ. ಜಿಲ್ಲೆಯಲ್ಲಿ ಮಳೆಯ ಅಬ್ಬರ-ಆರಂಜ್ ಅಲರ್ಟ್ ಘೋಷಣೆ

ದ.ಕ. ಜಿಲ್ಲೆಯಲ್ಲಿ ಮಳೆಯಬ್ಬರ ಮುಂದುವರಿದಿದ್ದು, ಶುಕ್ರವಾರ ಮಧ್ಯಾಹ್ನದವರೆಗೆ ಬಿಡುವು ನೀಡಿದ್ದ ಮಳೆ ಬಳಿಕ ಬಿರುಸುಗೊಂಡಿದೆ. ಜಿಲ್ಲಾದ್ಯಂತ ಭಾರಿ ಮಳೆ ಸುರಿಯುತ್ತಿದೆ. ಬೆಳಗ್ಗೆ ಸ್ವಲ್ಪ ಮೋಡಕವಿದ ವಾತಾವರಣವಿತ್ತಾದರೂ, ಸಂಜೆಯಾಗುತ್ತಿದ್ದಂತೆ ಮಳೆಯ ತೀವ್ರತೆ ಹೆಚ್ಚಾಗಿದೆ. ಮಂಗಳೂರು ನಗರ, ಹೊರವಲಯ, ಬೆಳ್ತಂಗಡಿ, ಸುಬ್ರಹ್ಮಣ್ಯ, ಸುಳ್ಯ, ಬಂಟ್ವಾಳ, ವಿಟ್ಲ, ಮೂಡುಬಿದಿರೆ ಸೇರಿದಂತೆ ಜಿಲ್ಲಾದ್ಯಂತ ಮಳೆ ಸುರಿದಿದೆ. ಕೆಲವಡೆ ಗಾಳಿಯ ಅಬ್ಬರವೂ ಹೆಚ್ಚಿತ್ತು. ಹವಾಮಾನ ಇಲಾಖೆ ಕರಾವಳಿಗೆ ಆರೆಂಜ್ ಅಲರ್ಟ್ ಪೋಷಿಸಿದ್ದು, ಜುಲೈ 7ರ ವರೆಗೂ ಉತ್ತಮ ಮಳೆಯಾಗುವ ಸಾಧ್ಯತೆಯಿದೆ. ಶುಕ್ರವಾರ ಬೆಳಗ್ಗೆ ಅಂತ್ಯಗೊಂಡ ಹಿಂದಿನ 24 ಗಂಟೆಯಲ್ಲಿ ಜಿಲ್ಲೆಯಲ್ಲಿ ಸರಾಸರಿ 100.6 ಮಿ.ಮೀ. ಮಳೆ ಸುರಿದಿದೆ. ಮುಂಗಾರು ಆರಂಭದ ಬಳಿಕ ಜಿಲ್ಲೆಯಲ್ಲಿ ಇಷ್ಟು ಪ್ರಮಾಣದಲ್ಲಿ ಮಳೆಯಾಗಿರುವುದು ಇದೇ ಮೊದಲು.



This post first appeared on V4news, please read the originial post: here

Share the post

ದ.ಕ. ಜಿಲ್ಲೆಯಲ್ಲಿ ಮಳೆಯ ಅಬ್ಬರ-ಆರಂಜ್ ಅಲರ್ಟ್ ಘೋಷಣೆ

×

Subscribe to V4news

Get updates delivered right to your inbox!

Thank you for your subscription

×