Get Even More Visitors To Your Blog, Upgrade To A Business Listing >>

ವೃದ್ಧೆಯ ಯಾತನಾಮಯ ಬದುಕು : ಚಿಂತಾಜನಕ ಸ್ಥಿತಿಯಲ್ಲಿ ಕುಟುಂಬ

Tags: agravesup

ಮೂಡುಬಿದಿರೆ: ತೀವ್ರ ತೆರನಾದ ಹೊಟ್ಟೆ ನೋವಿನಿಂದ ಬಳಲುತ್ತಾ ಮೇಲೇಳಲೂ ಸಾಧ್ಯವಾಗದೆ ಮಲಗಿದಲ್ಲೇ ಯಾತನೆ ಪಡುತ್ತಾ ಕೊರಗುತ್ತಿರುವ ವೃದ್ದೆಯ ಯಾತನಾಮಯ ಬದುಕು ಹಾಗೂ ಆ ವೃದ್ಧೆಯ ಪಕ್ಕದಲ್ಲೇ ಇದ್ಯಾವುದರ ಬಗ್ಗೆ ಒಂದಿನಿತೂ ಗೊಡವೆಯೇ ಇಲ್ಲದೆ ತಾಯಿಯನ್ನು ನೋಡುತ್ತಿರುವ ವಿಶೇಷ ಚೇತನನಾದ ಮಗ… ಈ ದಾರುಣ ಸ್ಥಿತಿಯ ಮೂಕ ರೋಧನ ಕರುಳು ಮಿಡಿಯುವಂತಿದೆ.

ಈ ಚಿಂತಾಜನಕ ಸ್ಥಿತಿ ಕಂಡು ಬಂದದ್ದು ಮೂಡುಬಿದಿರೆಗೆ ಸಮೀಪವಿರುವ ಪಾಲಡ್ಕದ ಪೂಪಾಡಿಕಲ್ಲು 5ಸೆನ್ಸ್ ಕಾಲನಿಯಲ್ಲಿ. ಜಾನಕಿ (70 ವ.) ಹೊಟ್ಟೆನೋವಿನಿಂದ ಸತತ ಮೂರು ತಿಂಗಳಿನಿಂದ ಬಳಲುತ್ತಿರುವ ವೃದ್ಧೆ. ಇವರಿಗೆ ಇಬ್ಬರು ಗಂಡು ಮಕ್ಕಳಿದ್ದರೂ ಅವರೀರ್ವರೂ ವಿಶೇಷ ಚೇತನರಾಗಿದ್ದಾರೆ.

ಸಹಾಯ ಹಸ್ತ: ಮೂಡುಬಿದಿರೆಯ ಸ್ಪೂರ್ತಿ ವಿಶೇಷ ಶಾಲೆಯ ಸಂಸ್ಥಾಪಕ ಪ್ರಕಾಶ್ ಶೆಟ್ಟಿಗಾರ್ ಲಾಕ್ ಡೌನ್ ಸಂದರ್ಭದಲ್ಲಿ ಬಡ ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳನ್ನು ವಿತರಿಸಲು ತೆರಳಿದಂತಹ ಸಂದರ್ಭ ಈ ವೃದ್ಧೆಯ ಸಮಸ್ಯೆಯು ಬೆಳಕಿಗೆ ಬಂದದ್ದಲ್ಲದೆ ಈ ವಿಷಯದ ಕುರಿತಾಗಿ ವಿಶೇಷ ಗಮನ ಹರಿಸಿ ಸಿ.ಎಚ್ ಮೆಡಿಕಲ್ ಮೂಡುಬಿದಿರೆ ಇದರ ಮಾಲಿಕ ಮೂಡುಬಿದಿರೆ ರೋಟರಿ ಕ್ಲಬ್ ಇದರ ಅಧ್ಯಕ್ಷ ರೊ. ಸಿ.ಎಚ್.ಅಬ್ದುಲ್ ಗಫೂರ್ ಇವರನ್ನು ಸಂಪರ್ಕಿಸಿ ಅವರಿಗೆ ವಿಷಯ ತಿಳಿಸಿದರು. ಅವರು ಕೂಡಲೇ ಆ ವೃದ್ದೆಯ ಮನೆಗೆ ಭೇಟಿ ನೀಡಿ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮೂಡುಬಿದಿರೆಯ ವೈದ್ಯಾಧಿಕಾರಿ ಡಾ. ಶಶಿಕಲಾ ಅವರಿಗೆ ತಿಳಿಸಿದರು. ಸಕರಾತ್ಮಕವಾಗಿ ಸ್ಪಂದಿಸಿದ ವೈದ್ಯರು ಪ್ರಸಕ್ತ ಸ್ಥಿತಿ ಗಂಭೀರವಾಗಿರುವುದರಿಂದ ಪಾಲಡ್ಕದ ವೈದ್ಯರಾದ ಡಾ? ಮನಿಷ ಅವರನ್ನು ಸಂಪರ್ಕಿಸಲು ಕೋರಿದರು. ಈ ಬಗ್ಗೆ ಡಾ. ಮನಿಷ ಅವರನ್ನು ಸಂಪರ್ಕಿಸಿದಾಗ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದ್ದಾರೆ. ಹೀಗಿದ್ದರೂ ಇವರ ಈ ಚಿಂತಾಜನಕ ಪರಿಸ್ಥಿತಿಯನ್ನು ನೆರೆಹೊರೆಯ ಜನತೆ ವಿಚಾರಿಸದೆ ಇರುವುದು ದುಃಖಕರವಾಗಿದೆ. ಈ ಬಗ್ಗೆ ಜನಪ್ರತಿನಿಧಿಗಳಿಗೂ ತಿಳಿಸಿದರೂ ಯಾವುದೇ ಸಕರಾತ್ಮಕ ಪ್ರತಿಕ್ರಿಯೆ ಈವರೆಗೆ ದೊರೆಯದೇ ಇರುವುದು ಖೇದ ಉಂಟುಮಾಡಿದೆ. ಇನ್ನಾದರೂ ನೆರೆಹೊರೆಯವರು ಈ ಕುಟುಂಬದ ಬಗ್ಗೆ ವಿಶೇಷ ಕಾಳಜಿಯನ್ನು ತೋರಿಸಲಿ. ವೃದ್ಧೆಯ ಮನೆಗೆ ಬೆಳಕನ್ನು ನೀಡಲಿ.This post first appeared on V4news, please read the originial post: here

Share the post

ವೃದ್ಧೆಯ ಯಾತನಾಮಯ ಬದುಕು : ಚಿಂತಾಜನಕ ಸ್ಥಿತಿಯಲ್ಲಿ ಕುಟುಂಬ

×

Subscribe to V4news

Get updates delivered right to your inbox!

Thank you for your subscription

×