Get Even More Visitors To Your Blog, Upgrade To A Business Listing >>

ಫೆ.15 ಮತ್ತು 16ರಂದು ನಡೆಯಲಿರುವ ವನಸುಮ ವೇದಿಕೆ ನಾಟಕೋತ್ಸವ

ವನಸುಮ ವೇದಿಕೆ ಕಟಪಾಡಿ ಈ ಬಾರಿಯ ನಾಟಕೋತ್ಸವ 2020 ಫೆಬ್ರವರಿ 15 ಮತ್ತು 16ರಂದು ಕಟಪಾಡಿಯ ಎಸ್ ವಿ ಎಸ್ ಶಾಲಾ ಆವರಣದಲ್ಲಿ ನಡೆಯಲಿದ್ದು, ಇದನ್ನು ಕಾಪು ಶಾಸಕರಾದ ಲಾಲಾಜಿ ಮೆಂಡನ್ ಉದ್ಘಾಟಿಸಲಿದ್ದಾರೆ ಎಂಬುದಾಗಿ ವನಸುಮ ವೇದಿಕೆಯ ಪ್ರಮುಖರಾದ ಬಾಸುಮಾ ಕೊಡಗು ಹೇಳಿದ್ದಾರೆ.

ಅವರು ಕಟಪಾಡಿಯಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷ ಜೆ. ಲೋಕೇಶ್ , ಹಿರಿಯ ರಂಗಕರ್ಮಿ ಪೆರ್ಡೂರು ರತ್ನಾಕರ ಕಲ್ಯಾಣಿ, ತುಳು ಸಾಹಿತ್ಯ ಅಕಾಡೆಮಿಯ ಸದಸ್ಯೆ ತಾರಾ ಆಚಾರ್ಯ ಭಾಗವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಬಿ.ಜಿ. ಮೋಹನ್‍ದಾಸ್, ಟಿ. ರವೀಂದ್ರ ಪೂಜಾರಿ, ಕನ್ನಡ & ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ, ಪ್ರಗತಿಪರ ಕೃಷಿಕ ಎನ್.ವಿ. ಕೃಷ್ಣಪ್ಪ ಬಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಉದ್ಯಾವರ ಮಾಧವ ಆಚಾರ್ಯರಿಗೆ ‘ವನಸುಮ ರಂಗ ಸಮ್ಮಾನ್’ ಹಾಗೂ ಪುರ್ಣಿಮಾ ಸುರೇಶ್ ಇವರಿಗೆ ‘ವನಸುಮ ಪುರಸ್ಕಾರ’ ಪ್ರಧಾನ ಮಾಡಲಾಗುವುದು. ಸಾಂಸ್ಕøತಿಕ ಸೇವೆಗಾಗಿ ಸ್ವಸ್ತಿಕ್ ಕಲಾ ಸಂಘದ ರಮೇಶ್ ಕೋಟ್ಯಾನ್ ಹಾಗೂ ವೃತ್ತಿ ರಂಗ ಹಾಗೂ ಸಿನಿಮಾ ನಟ ರಘು ಪಾಂಡೇಶ್ವರ ಇವರನ್ನು ಸಮ್ಮಾನಿಸಲಾಗುವುದು. ಪಾದುವ ರಂಗ ಅಧ್ಯಯನ ಕೇಂದ್ರದ ‘ಕೆಂಡೋನಿಯನ್ಸ್’ ಹಾಗೂ ವನಸುಮ ವೇದಿಕೆಯ ‘ಇಲ್ಲ್ ಇಲ್ಲ್‍ದ ಕಥೆ’ ನಾಟಕ ಪ್ರದರ್ಶನ ಗೊಳ್ಳಲಿದೆ ಎಂದರು. ಸುದ್ಧಿಗೋಷ್ಠಿಯಲ್ಲಿ ಕಾವ್ಯವಾಣಿ ಕೊಡಗು ಹಾಗೂ ಭಾಸ್ಕರ್ ಯು.ಕೆ. ಉಪಸ್ಥಿತರಿದ್ದರು.



This post first appeared on V4news, please read the originial post: here

Share the post

ಫೆ.15 ಮತ್ತು 16ರಂದು ನಡೆಯಲಿರುವ ವನಸುಮ ವೇದಿಕೆ ನಾಟಕೋತ್ಸವ

×

Subscribe to V4news

Get updates delivered right to your inbox!

Thank you for your subscription

×