ರಾಜ್ಯದ ಮಾಜಿ ಸಚಿವ, ಮೂಡುಬಿದಿರೆಯ ಮಾಜಿ ಶಾಸಕ ಕೆ.ಅಮರನಾಥ ಶೆಟ್ಟಿ ಸೋಮವಾರ ಬೆಳಗ್ಗೆ ವಿಧಿವಶರಾಗಿದ್ದು, ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊೈಲಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಹಿತ ಗಣ್ಯರು ಅಂತಿಮದರ್ಶನ ಮಾಡಿದರು. ತನ್ನ ಆಪ್ತ, ರಾಜಕೀಯ ರಂಗದಲ್ಲಿ ಜೆಡಿಎಸ್ ಪಕ್ಷದಲ್ಲಿಮೂರುವರೆ ದಶಕದಿಂದ ತನ್ನೊಡನೆ ಇದ್ದ ಕೆ.ಅಮರನಾಥ ಶೆಟ್ಟಿ ಅವರ ಒಡನಾಟವನ್ನು ನೆನಪಿಸಿದ ದೇವೇಗೌಡ ಅವರು ಕಂಬನಿ ಮಿಡಿದರು. ಅಮರನಾಥ ಶೆಟ್ಟಿ ಅವರು ರಾಜಕೀಯ ಪ್ರಾಮಾಣಿಕತೆ, ಕಾಳಜಿ ಮತ್ತು ನಿಷ್ಠೆಯಿಂದ ಕೆಲಸ ನಿರ್ವಹಿಸಿದ ಸಂಭಾವಿತ ರಾಜಕಾರಣಿ. ಆರೋಗ್ಯವನ್ನು ಲೆಕ್ಕಿಸದೆ ಈ ಜಿಲ್ಲೆಯ ರಾಜಕೀಯ ಶಕ್ತಿಯಾಗಿ ಪಕ್ಷ ನಿಷ್ಠೆ ಮರೆದವರು ಅವರ ಅಗಲುವಿಕೆಯಿಂದ ಜಿಲ್ಲೆಯ ರಾಜಕಾರಣಕ್ಕೆ ತುಂಬಲಾಗದ ನಷ್ಟವಾಗಿದೆ. ಅವರೇನಿದ್ದರೂ ಇನ್ನು ನೆನಪು ಮಾತ್ರ ಎನ್ನುವುದನ್ನು ಯೋಚಿಸಿ ಆಘಾತವಾಗಿದೆ ಸುದ್ದಿಗಾರರಿಗೆ ತಿಳಿಸಿದರು.
Related Articles
ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್, ಬಂಟ್ವಾಳ ಶಾಸಕ ರಾಜೇಶ್ ನಾಯಕ್, ವಿಧಾನ ಪರಿಷತ್ ಸಭಾಪತಿ ಪ್ರತಾಪ್ ಚಂದ್ರಶೆಟ್ಟಿ, ಸದಸ್ಯರಾದ ಐವನ್ ಡಿಸೋಜ, ಎಸ್.ಎಲ್ ಬೋಜೇಗೌಡ ಮಾಜಿ ಸಚಿವರಾದ ಬಿ.ರಮಾನಾಥ ರೈ, ಬಿ.ನಾಗರಾಜ ಶೆಟ್ಟಿ, ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಮತ್ತಿತರರು ಅಂತಿಮ ನಮನ ಸಲ್ಲಿಸಿದರುa