Get Even More Visitors To Your Blog, Upgrade To A Business Listing >>

’ಶಿವದೂತೆ ಗುಳಿಗೆ’ ಎಂಬ ಅದ್ಧೂರಿ ತುಳು ನಾಟಕ ಪ್ರದರ್ಶನ : ’ಕಲಾಸಂಗಮ ನಾಟಕ’ ತಂಡದಿಂದ ಆಯೋಜನೆ

ಕಲಾಸಂಗಮ ನಾಟಕ ತಂಡದಿಂದ ಜನವರಿ 2ರಂದು ಸಂಜೆ ಶಿವಧೂತೆ ಗುಳಿಗ ಎಂಬ ಅದ್ಧೂರಿ ತುಳು ವಿಭಿನ್ನ ಶೈಲಿಯ ನಾಟಕದ ಪ್ರಥಮ ಪ್ರದರ್ಶನ ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ ಎಂದು ಕಲಾಸಂಗಮದ ಕಲಾವಿದರು ಮತ್ತು ತಂತ್ರಜ್ಞರಾದ ವಿಜಯ್ ಕುಮಾರ್ ಕೊಡಿಯಾಲ್‌ಬೈಲ್ ಹೇಳಿದ್ರು.

ಅವರು ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಶಿವದೂತೆ ಗುಳಿಗೆ ನಾಟಕವು ಪ್ರಥಮ ಪ್ರದರ್ಶನಕ್ಕಿಂತಲೂ ಮೊದಲೇ ೨೭ಪ್ರದರ್ಶನಗಳನ್ನು ತುಳುನಾಡಿನಾದ್ಯಂತ ಪ್ರದರ್ಶಿಸಲು ತಯಾರಾದ ಪ್ರಥಮ ಪೌರಾಣಿಕ ನಾಟಕವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ನಾಟಕವು ಈಗಾಗಲೇ ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸಿದ್ದು, ಧರ್ಮರಕ್ಷಣೆಗಾಗಿ ತುಳುನಾಡಿನಲ್ಲಿ ನೆಲೆನಿಂತ ಗುಳಿಗ ಸ್ವಾಮಿಯ ಮಹಿಮೆ ಬಗ್ಗೆ ಎರಡುವರೆ ಗಂಟೆ ಅವಧಿಯ ಪರಿಕಲ್ಪನೆ ಇದೆ ಎಂದು ಹೇಳಿದ್ರು.
ಕಲಾವಿದರಾದ ಸ್ವರಾಜ್ ಶೆಟ್ಟಿಯವರು ಮಾತನಾಡಿ, ವಿಭಿನ್ನ ಶೈಲಿಯ ನಾಟಕವನ್ನು ಮಾಡುವ ಉದ್ದೇಶದಿಂದ ಪೌರಾಣಿಕ ನಾಟಕವನ್ನು ಮಾಡಿದ್ದೇವೆ. ನಾಟಕದಲ್ಲಿ ಸೆಟ್ಟಿಂಗ್‌ಗಳಿಂದ ಹಿಡಿದು ಎಲ್ಲವೂ ಪೌರಾಣಿಕವಾಗಿರುತ್ತದೆ ಎಂದು ಹೇಳಿದ್ರು. ಸುದ್ದಿಗೋಷ್ಟಿಯಲ್ಲಿ ಸಂಗೀತ ನಿದೇಶಕರಾದ ವಿ,ಕೆ ವಿಜಯ್ ಉಪಸ್ಥಿತರಿದ್ರು.



This post first appeared on V4news, please read the originial post: here

Share the post

’ಶಿವದೂತೆ ಗುಳಿಗೆ’ ಎಂಬ ಅದ್ಧೂರಿ ತುಳು ನಾಟಕ ಪ್ರದರ್ಶನ : ’ಕಲಾಸಂಗಮ ನಾಟಕ’ ತಂಡದಿಂದ ಆಯೋಜನೆ

×

Subscribe to V4news

Get updates delivered right to your inbox!

Thank you for your subscription

×