Get Even More Visitors To Your Blog, Upgrade To A Business Listing >>

ಉಜಿರೆ : ಎಸ್.ಡಿ.ಎಂ ಸಂಸ್ಥೆಯಲ್ಲಿ ಮೂರು ದಿನಗಳ ಶೈಕ್ಷಣಿಕ ತರಬೇತಿಗೆ ಚಾಲನೆ

Tags: agravesup

ಬದಲಾವಣೆಯೊಂದಿಗೆ ಗುರುತಿಸಿಕೊಳ್ಳುವ ಸ್ಪರ್ಧಾತ್ಮಕ ಜಗತ್ತಿನ ಅವಶ್ಯಕತೆಗಳಿಗೆ ತಕ್ಕಂತೆ ವೃತ್ತಿಪರತೆ ಕಾಯ್ದುಕೊಳ್ಳುವುದಕ್ಕೆ ಸಾಂದರ್ಭಿಕ ತರಬೇತಿ ಮತ್ತು ಸಕಾಲಿಕ ಮಾರ್ಗದರ್ಶಿ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ ಎಂದು ಎಸ್.ಡಿ.ಎಂ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಅಶೋಕ ಕುಮಾರ್ ಅಭಿಪ್ರಾಯಪಟ್ಟರು.

ಎಸ್.ಡಿ.ಎಂ.ನ ಆಂತರಿಕ ಗುಣಮಟ್ಟ ನಿರ್ವಹಣಾ ಕೋಶ ಮತ್ತು ಮಂಗಳೂರಿನ ಕಾಲೇಜ್ ಫಾರ್ ಲೀಡರ್‌ಶಿಪ್ -ಹ್ಯೂಮನ್ ರಿಸೋರ್ಸ್ ಡೆವಲೆಪ್‌ಮೆಂಟ್ ಪ್ರೋಗ್ರಾಮ್‌ನ ಸಹಯೋಗದೊಂದಿಗೆ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಸಭಾಂಗಣದಲ್ಲಿ ಅಧ್ಯಾಪಕರಿಗಾಗಿ ಆಯೋಜಿತವಾದ ಮೂರು ದಿನಗಳ ಶೈಕ್ಷಣಿಕ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅನುಭವಿಗಳು ಮತ್ತು ಹೊಸಬರ ಬೆಂಬಲದೊಂದಿಗೆ ನಿರ್ದಿಷ್ಟ ವೃತ್ತಿಯೊಂದು ತನ್ನ ಶಕ್ತಿಯನ್ನು ವಿಸ್ತರಿಸಿಕೊಳ್ಳುತ್ತಿರುತ್ತದೆ. ಈ ಮೂಲಕ ಸಂಸ್ಥೆಯು ಸಾಧನೆಯ ಮುನ್ನಡೆ ಸಾಧಿಸಲು ಸಾಧ್ಯವಾಗುತ್ತದೆ. ಹಲವು ವರ್ಷಗಳ ಅನುಭವವಿರುವವರು ಮತ್ತು ಹೊಸದಾಗಿ ವೃತ್ತಿಯಾನ ಆರಂಭಿಸಿರುವವರು ವೃತ್ತಿಪರತೆಯ ಮೌಲ್ಯ ಹೆಚ್ಚಿಸುವ ಹಾಗೆಯೇ ಬದ್ಧತೆ ತೋರಬೇಕು. ಆಗ ಮಾತ್ರ ವ್ಯಕ್ತಿಗತ ವೃತ್ತಿಪರ ಯಶಸ್ಸು ಸಾಂಸ್ಥಿಕ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡುತ್ತದೆ ಎಂದರು.

ಸುದೀರ್ಘ ವರ್ಷಗಳ ವೃತ್ತಿಪರ ಅನುಭವ ಇದೆ ಎಂದ ಮಾತ್ರಕ್ಕೆ ತರಬೇತಿಯ ಅಗತ್ಯವೇ ಇಲ್ಲ ಎಂದುಕೊಳ್ಳಬೇಕಿಲ್ಲ. ಹೊಸ ಕಾಲದ ಅಗತ್ಯಗಳನ್ನು ದೃಷ್ಟಿಯಲ್ಲಿರಿಸಿಕೊಂಡು ವೃತ್ತಿ ನಿರ್ವಹಿಸುವುದಕ್ಕೆ ತರಬೇತಿ ಮತ್ತು ಸಕಾಲಿಕ ಮಾರ್ಗದರ್ಶಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು. ಅಧ್ಯಾಪಕರು ಆ ಮೂಲಕ ತಮ್ಮ ವೃತ್ತಿಗೆ ಘನತೆ ತಂದುಕೊಳ್ಳಬೇಕು ಎಂದು ಸಲಹೆ ನೀಡಿದರು.
ತರಗತಿಗಳಲ್ಲಿ ಕೇವಲ ಬೋರ್ಡ್‌ನ್ನಷ್ಟೇ ನೆಚ್ಚಿಕೊಳ್ಳದೇ ಆಧುನಿಕ ತಂತ್ರಜ್ಞಾನದ ನೆರವಿನೊಂದಿಗೆ ವಿದ್ಯಾರ್ಥಿಗಳ ಜ್ಞಾನಸಾಮರ್ಥ್ಯ ವಿಸ್ತರಿಸುವುದರ ಕಡೆಗೆ ಅಧ್ಯಾಪಕರು ಗಮನಹರಿಸಬೇಕು. ಈ ನಿಟ್ಟಿನ ಪ್ರಯೋಗಗಳಲ್ಲಿ ನಿರತರಾಗಿ ಹೊಸ ಮಾದರಿಗಳನ್ನು ರೂಪಿಸಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಸತೀಶ್‌ಚಂದ್ರ ಎಸ್ ಮಾತನಾಡಿದರು. ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮುನ್ನ ರೈತರು ನಡೆಸುವ ಪೂರ್ವತಯಾರಿ ಮತ್ತು ಹವಾಮಾನ ಬದಲಾವಣೆಯ ಏರುಪೇರುಗಳನ್ನೆಲ್ಲಾ ಲೆಕ್ಕಿಸಿ ಕಾಯೋನ್ಮುಖರಾಗುವ ಎಚ್ಚರಿಕೆಯ ಪ್ರಜ್ಞೆಯ ಮಾದರಿ ಸಾಂಸ್ಥಿಕ ವಲಯದ ವಿವಿಧ ವೃತ್ತಿಪರ ಕ್ಷೇತ್ರಗಳಲ್ಲಿ ಯಶಸ್ಸು ಕಂಡುಕೊಳ್ಳಲು ಸಹಾಯಕವಾಗುತ್ತದೆ ಎಂದರು.

ಸಿ.ಎಲ್.ಎಚ್.ಆರ್.ಡಿ.ಯ ನಿರ್ದೇಶಕ ಪ್ರೊ.ಸನ್ನಿತರಪ್ಪನ್, ಪ್ರೊ.ರಾಧಾಕೃಷ್ಣ ರಾವ್, ಪ್ರೊ.ಅನಂತ ಪದ್ಮನಾಭ, ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ.ಬಿ.ಗಣಪಯ್ಯ ಉಪಸ್ಥಿತರಿದ್ದರು. ಎಸ್.ಡಿ.ಎಂ.ನ ಆಂತರಿಕ ಗುಣಮಟ್ಟ ನಿರ್ವಹಣಾ ಕೋಶದ ಪ್ರೊ. ಶಂಕರ ನಾರಾಯಣ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ.ಎಸ್.ಎಂ.ಕಾಕತ್ಕರ್ ವಂದಿಸಿದರು.



This post first appeared on V4news, please read the originial post: here

Share the post

ಉಜಿರೆ : ಎಸ್.ಡಿ.ಎಂ ಸಂಸ್ಥೆಯಲ್ಲಿ ಮೂರು ದಿನಗಳ ಶೈಕ್ಷಣಿಕ ತರಬೇತಿಗೆ ಚಾಲನೆ

×

Subscribe to V4news

Get updates delivered right to your inbox!

Thank you for your subscription

×