Get Even More Visitors To Your Blog, Upgrade To A Business Listing >>

ಮಂಜೇಶ್ವರದಲ್ಲಿ ಹಸಿರು ಕೇರಳ ಕರ್ಮ ಸೇನೆಗೆ ಚಾಲನೆ

ಮಂಜೇಶ್ವರವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿ ಮಾಡುವ ಉದ್ದೇಶದಿಂದ ರೂಪೀಕರಿಸಲ್ಪಟ್ಟ ಹಸಿರು ಕೇರಳ ಕರ್ಮ ಸೇನೆಗೆ ಚಾಲನೆ ದೊರಕಿತು. ಇದರ ಭಾಗವಾಗಿ ಹೊಸಂಗಡಿ ನಗರದಲ್ಲಿ ಮೆರವಣಿಗೆ ನಡೆಯಿತು. ಪಂಚಾಯತ್ ಉಪಾಧ್ಯಕ್ಷೆ ಶಶಿಕಲಾ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಗ್ರಾ.ಪಂ. ಅಧ್ಯಕ್ಷ ಅಜೀಝ್ ಹಾಜಿ ಚಾಲನೆ ನೀಡಿದರು. ಹೊಸಂಗಡಿಯಲ್ಲಿ ನಡೆದ ಮೆರವಣಿಗೆಯಲ್ಲಿ ಕುಟುಂಬ ಸ್ತ್ರೀ ಸದಸ್ಯರು, ಹಸಿರು ಕೇರಳ ಕರ್ಮ ಸೇನಾ ಸದಸ್ಯರು, ಪಂಚಾಯತ್ ಸದಸ್ಯರುಗಳಾದ ಕೆಎಂಕೆ ಅಬ್ದುಲ್ ರಹ್ಮಾನ್ ಹಾಜಿ, ಮುಕ್ತಾರ್, ಭಗವಾನ್ ದಾಸ್, ಸುಪ್ರಿಯ ಶೆಣೈ, ಶೋಭಾ ಶೆಟ್ಟಿ, ಬೇಬಿ ಲತಾ ಮೊದಲಾದವರು ಮುಂದಾಳತ್ವ ನೀಡಿದರು. ಊರವರು ಸೇರಿದಂತೆ ನೂರಾರು ಮಂದಿ ಮೆರವಣಿಗೆಯಲ್ಲಿ ಪಾಲ್ಗೊಂಡರು.



This post first appeared on V4news, please read the originial post: here

Share the post

ಮಂಜೇಶ್ವರದಲ್ಲಿ ಹಸಿರು ಕೇರಳ ಕರ್ಮ ಸೇನೆಗೆ ಚಾಲನೆ

×

Subscribe to V4news

Get updates delivered right to your inbox!

Thank you for your subscription

×