Get Even More Visitors To Your Blog, Upgrade To A Business Listing >>

ರಾತ್ರಿ 8ರ ನಂತರ ಎಟಿಎಂಗಳಲ್ಲಿ ಹಣ ಸಿಗೋದು ಕಷ್ಟ:ಹೊಸ ನಿಯಮ ಜಾರಿಗೆ ತರಲು ಮುಂದಾದ ಕೇಂದ್ರ

ರಾತ್ರಿ ತಡವಾಗಿ ಬ್ಯಾಂಕ್ನಿಂದ ಹಣ ವಾಪಸ್ ಪಡೆಯಲು ಇನ್ನು ಮುಂದೆ ಎಟಿ‌ಎಂಗಳು ನಿಮ್ಮನ್ನು ಸಹಕರಿಸುವುದಿಲ್ಲ, ಏಕೆಂದರೆ ಎಟಿ‌ಎಂಗಳಿಗೆ ನಗದು ಪುನರ್ ಭರ್ತಿ ಮಾಡುವುದಕ್ಕೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಸಾಯಂಕಾಲದ ಬಳಿಕ ಎಟಿ‌ಎಂನಿಂದ ಹಣ ಪಡೆಯಬಯಸುವ ಸಹಸ್ರಾರು ಮಂದಿಗೆ ನಿರಾಸೆಗೊಳಿಸುವ  ನಿಯಮಗಳನ್ನು ಸರ್ಕಾರ ಶೀಘ್ರವೇ ಜಾರಿಗೆ ತರುವ ಸಾಧ್ಯತೆಗಳಿವೆ.

ರಾತ್ರಿ 8 ಗಂಟೆಯ ಬಳಿಕ ಎಟಿ‌ಎಂಗಳನ್ನು ಪುನರ್?ಭರ್ತಿ ಮಾಡಬಾರದು ಎಂಬ ಪ್ರಸ್ತಾವವನ್ನು ಸರ್ಕಾರ ಗಂಭೀರವಾಗಿ ಪರಿಶೀಲಿಸುತ್ತಿದೆ. ಎಟಿ‌ಎಂಗಳಿಗೆ ಹಣ ಭರ್ತಿ ಮಾಡುವ ಖಾಸಗಿ ನಗದು ಹಣ ಸಾಗಣೆ ಸಂಸ್ಥೆಗಳು ಬ್ಯಾಂಕುಗಳಿಂದ ದಿನದ ಪೂರ್ವಾರ್ಧದಲ್ಲಿ ಅಂದರೆ ಮಧ್ಯಾಹ್ನಕ್ಕೆ ಮೊದಲೇ ನಗದು ಸಂಗ್ರಹ ಮಾಡಿಕೊಳ್ಳಬೇಕು.

ಅಲ್ಲದೆ ಸಿಸಿಟಿವಿ ಮತ್ತು ಜಿಪಿ‌ಎಸ್ ಅಳವಡಿಕೆಯಾಗಿರುವ ವಿಶೇಷ ವಿನ್ಯಾಸದ ನಗದು ವ್ಯಾನ್?ಗಳನ್ನು ಇದಕ್ಕಾಗಿ ಬಳಸಬೇಕು, ಒಂದು ಟ್ರಿಪ್?ನಲ್ಲಿ ೫ ಕೋಟಿ ರೂಪಾಯಿಗಳಿಗಿಂತ ಹೆಚ್ಚು ಹಣ ಒಯ್ಯುವಂತಿಲ್ಲ. ಯಾವುದೇ ಅಹಿತಕರ ಘಟನೆ ನಿಭಾಯಿಸಲು ಇಬ್ಬರು ಸಶಸ್ತ್ರ ಗಾರ್ಡ್?ಗಳಿರಬೇಕು ಮತ್ತು ವಿಶೇಷ ಪರಿಸ್ಥಿತಿ ನಿಭಾಯಿಸಲು ಚಾಲಕರಿಗೆ ತರಬೇತಿ ನೀಡಿರಬೇಕು, ಚಾಲಕ ಸುರಕ್ಷಿತವಾಗಿ ವಾಹನ ಚಲಾಯಿಸಲು ಸಮರ್ಥನಾಗಿರಬೇಕು ಇತ್ಯಾದಿ ನಿಯಮಾವಳಿಗಳನ್ನು ಜಾರಿಗೆ ತರುವ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಶೀಲಿಸುತ್ತಿದೆ.

The post ರಾತ್ರಿ 8ರ ನಂತರ ಎಟಿಎಂಗಳಲ್ಲಿ ಹಣ ಸಿಗೋದು ಕಷ್ಟ:ಹೊಸ ನಿಯಮ ಜಾರಿಗೆ ತರಲು ಮುಂದಾದ ಕೇಂದ್ರ appeared first on V4News.



This post first appeared on V4news, please read the originial post: here

Share the post

ರಾತ್ರಿ 8ರ ನಂತರ ಎಟಿಎಂಗಳಲ್ಲಿ ಹಣ ಸಿಗೋದು ಕಷ್ಟ:ಹೊಸ ನಿಯಮ ಜಾರಿಗೆ ತರಲು ಮುಂದಾದ ಕೇಂದ್ರ

×

Subscribe to V4news

Get updates delivered right to your inbox!

Thank you for your subscription

×