Get Even More Visitors To Your Blog, Upgrade To A Business Listing >>

ಸುನ್ನಿ ದಾಹವತ್ತೇ ಇಸ್ಲಾಮಿ ಯ 15 ನೇ ವಾರ್ಷಿಕ ಇಜಿತಮಹ

ಮಂಜೇಶ್ವರ: ಉಪ್ಪಳದ ಉರ್ದು ಬಾಷಿಗರ ಸಂಘಟನೆಯಾದ ಸುನ್ನಿ ದಾಹವತ್ತೇ ಇಸ್ಲಾಮಿ ಉಪ್ಪಳ ಇದರ 15 ನೇ ವಾರ್ಷಿಕ ಇಜಿತಮಹ ಸಮ್ಮೆಳನ ವಾದಿಯ ಮಾಲಿಕುದ್ದೀನಾರ್ ಹನಫಿ ಬಜಾರ್ ಉಪ್ಪಳದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಿಂದ ನೆರವೇರಿತು.

ಹಾಜಿ ಹುಸೈನ್ ಕೆ ಎಸ್ ರವರ ಅಧ್ಯಕ್ಷತೆಯಲ್ಲಿ ಜರಗಿದ ಇಜಿತಿಮಹ ಸಮ್ಮೇಳನವನ್ನು ಖಾರಿ ಮೊಹಮ್ಮದ್ ರಿಝ್ವಾನ್ ಖಾನ್ ಮುಂಬೈ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಮಾದಕ ವಸ್ತುಗಳ ವ್ಯಸನಿಗಳಾಗುತ್ತಿರುವ ಇಂದಿನ ಯುವ ಸಮೂಹ ದೀನಿ ಭೋಧನೆ ಇಲ್ಲದೆ ಬೀದಿ ಪಾಲಾಗುತ್ತಿದೆ. ಪವಿತ್ರವಾದ ಖುರಾನ್ ನಲ್ಲಿರುವ ಸೂಕ್ತಗಳನ್ನು ನಮ್ಮ ಇಂದಿನ ಯುವ ಪೀಳಿಗೆಯಲ್ಲಿ ಅರಿವನ್ನು ಮೂಡಿಸಿದರೆ ಅವರನ್ನು ಮಾದಕ ವ್ಯಸನಿಗಳಿಂದ ಮುಕ್ತರಾಗಿಸಬಹುದಾಗಿದೆ. ಇಂದಿನ ಆಧುನಿಕ ಯುಗದಲ್ಲಿ ಆಡಂಬರ ಜೀವನ ಕೇವಲ ತಾತ್ಕಾಲಿಕ ಸಂತೋಷಕ್ಕೆ ಮಾತ್ರ ಸೀಮಿತವಾಗಿದೆ.,ಉತ್ತಮ ಆಲೋಚನೆಯಿಂದ ಸಭ್ಯತೆಯ ನಡೆತೆಯನ್ನು ಅನುಸರಿಸುವವನೇ ನಿಜವಾದ ಮಾನವ ಜೀವಿ. ಜಗತ್ತಿಗೆ ಶಾಂತಿಯ ಸಂದೇಶವನ್ನು ನೀಡಿದ ಪ್ರವಾದಿ ಯವರ ಚರ್ಯೆಯನ್ನು ಅನುಸರಿಸಿಕೊಂಡು ಬರುತ್ತಿರುವ ಪ್ರವಾದಿ ಪ್ರೇಮಿ ಎಂದಿಗೂ ಇತರರಿಗೆ ಮುಳ್ಳಾಗಲಾರ ಎಂಬುದಾಗಿ ಹೇಳಿದರು. ಅಲ್ಲಾಮ ಮೌಲನಾ ಮೊಹಮ್ಮದ್ ಶಾಕಿರಲಿ ನೂರಿ ರಝ್ವಿ ಮುಂಬೈ ಮುಖ್ಯ ಪ್ರಭಾಷಣ ನಡೆಸಿದರು. ವೇದಿಕೆಯಲ್ಲಿ ಮುಫ್ತಿ ಮೊಹಮ್ಮದ್ ಅಸ್ಪಾಕ್, ಹಾಜಿ ಬಿ ಎಸ್ ಅಬ್ದುಲ್ ರಿಝ್ವಾನ್, ಮೌಲಾನ ಅಬ್ದುಲ್ ಖುದ್ದೂಸ್, ಅಬ್ದುಲ್ ಲತೀಫ್ ಸಬಾಹಿ, ಹಾಫಿಝ್ ಮೊಹಮ್ಮದ್ ಸಾದಿಖ್ ನೂರಿ, ಸಯ್ಯದ್ ಮೊಹಮ್ಮದ್ ತೌಫೀಕ್, ಹಾಫಿಝ್ ಮೊಹಮ್ಮದ್ ಮುಸ್ತಾಕ್ ಸೇರಿದಂತೆ ಹಲವು ಧಾರ್ಮಿಕ ಪಂಡಿತರು ಹಾಗೂ ಗಣ್ಯಾತಿ ಗಣ್ಯರು ಉಪಸ್ಥಿತರಿದ್ದರು. ಇಜಿತಿಮಹ ಮಜ್ಲಿಸ್ ಗೆ ನಾನಾ ಕಡೆಗಳಿಂದ ಜನಸಾಗರವೇ ಹರಿದು ಬಂದಿತ್ತು.

ವೇದಿಕೆಯಲ್ಲಿ ಸ್ವಲಾತ್, ಪ್ರಾರ್ಥಣೆ, ಧಿಕ್ರ್ ಸೇರಿದಂತೆ ಹಲವು ರೀತಿಯ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿತು.

The post ಸುನ್ನಿ ದಾಹವತ್ತೇ ಇಸ್ಲಾಮಿ ಯ 15 ನೇ ವಾರ್ಷಿಕ ಇಜಿತಮಹ appeared first on V4News.This post first appeared on V4news, please read the originial post: here

Share the post

ಸುನ್ನಿ ದಾಹವತ್ತೇ ಇಸ್ಲಾಮಿ ಯ 15 ನೇ ವಾರ್ಷಿಕ ಇಜಿತಮಹ

×

Subscribe to V4news

Get updates delivered right to your inbox!

Thank you for your subscription

×