Get Even More Visitors To Your Blog, Upgrade To A Business Listing >>

ಕಂಕನಾಡಿ ಮಾರ್ಕೇಟ್ ಬಳಿ ಬಯಲೇ ಶೌಚಗೃಹ: ಸಾರ್ವಜನಿಕ ಟಾಯ್ಲೆಟ್ ಗೆ ಮತ್ತೆ ಬೀಗ: ಮಾರ್ಕೇಟ್ ಆವರಣದಲ್ಲಿ ದುರ್ನಾತ, ಜ

ಇದು ಜನನಿಬಿಡ ಪ್ರದೇಶದಲ್ಲಿರುವ ಕಂಕನಾಡಿ ಬಸ್ ನಿಲ್ದಾಣ…. ಇಲ್ಲಿರುವ ಸಾರ್ವಜನಿಕ ಶೌಚಗೃಹಕ್ಕೆ ಮತ್ತೆ ಬೀಗ ಜಡಿಯಲಾಗಿದ್ದು, ಇದರಿಂದ ಸಾರ್ವಜನಿಕರು ತೊಂದರೆ ಒಳಗಾಗುತ್ತಿದ್ದಾರೆ.

ಇಲ್ಲಿ ಸುಮಾರು ಮೂರು ವರ್ಷಗಳ ಹಿಂದೆ ಶೌಚಗೃಹ ಸಹಿತ ಬಸ್ ನಿಲ್ದಾಣ ನಿರ್ಮಿಸಲಾಗಿತ್ತು. ಇದರಿಂದಾಗಿ ಶೌಚಗೃಹ ಉಪಯೋಗವಿಲ್ಲದ ಬಗ್ಗೆ ಕುರಿತು ವಿ೪ ನ್ಯೂಸ್ ವರದಿ ಮಾಡಿತ್ತು. ವರದಿ ಪ್ರಕಟಿಸಿದ ಬಳಿಕ ಒಳಚರಂಡಿ ಕಾಮಗಾರಿ ನಿರ್ವಹಿಸಲಾಗಿತ್ತು. ಇನ್ನೂ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಹಾಗೂ ಮನಪಾ ಸದಸ್ಯ ನವೀನ್ ಡಿಸೋಜ ಮೂರು ತಿಂಗಳ ಹಿಂದೆ ಶೌಚಗೃಹ ಉದ್ಘಾಟನೆಗೊಂಡು, ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಿದ್ದರು. ಇದೀಗ ಅತ್ಯಲ್ಪ ಅವಧಿಯಲ್ಲಿ ಮತ್ತೆ ಬೀಗ ಜಡಿಯಲಾಗಿರುವುದು ದುರುಂತ ಕಂಕನಾಡಿ ಲಕ್ಷಾಂತರ ಮಂದಿ ಓಡಾಡುತ್ತಿದ್ದು, ವಿವಿಧ ಕಡೆಗಳಿಂದ ಬರುವ ಬಸ್‌ಗಳು ಇಲ್ಲಿ ತಂಗುತ್ತವೆ. ಅದ್ದರಿಂದ ಇಲ್ಲಿ ಶೌಚಗೃಹ ಅಗತ್ಯವಾಗಿದೆ. ಮಹಿಳೆಯರಂತೂ ಪರದಾಡುವ ಸ್ಥಿತಿ ಎದುರಾಗಿದೆ.

ಇನ್ನೂ ಬಸ್ ನಿಲ್ದಾಣದ ಹಿಂಬದಿ ಕಂಕನಾಡಿ ಮಾರುಕಟ್ಟೆ ಆವರಣದ ಬಯಲಿನಲ್ಲಿ  ಮೂತ್ರ ಶಂಕೆ ಮಾಡುತ್ತಿದ್ದಾರೆ. ಇಲ್ಲಿ ಮೂತ್ರ ಶಂಕೆ ಮಾಡಬಾರದು ಎಂದು ಬ್ಯಾನರ್ ಅಳವಡಿಸಿಕೊಳ್ಳಲಾಗಿದೆ. ಕಂಕನಾಡಿ ಪರಿಸರದಲ್ಲಿ ಶೌಚಗೃಹ ಬಳಕೆಗೆ ಇಲ್ಲದೇ ಸಾರ್ವಜನಿಕರು ತೊಂದರೆ‌ಅನುಭವಿಸುತ್ತಿದ್ದಾರೆ. ಸಂಬಂಧಪಟ್ಟವರು ಇತ್ತ ಗಮನ ವಹಿ‌ಇ ಜನರಿಗಾಗುತ್ತಿರುವ ಸಮಸ್ಯೆ ನೀಗಿಬೇಕಾಗಿದೆ.

ಮೂತ್ರ ವಿಸರ್ಜನೆಗೆ2  ರೂ ಹಾಗೂ ಶೌಚಕ್ಕೆ 5 ರೂಪಾಯಿ ದರ ಪಡೆಯುತ್ತಿದ್ದರು. ಇದರಿಂದ ಸಾರ್ವಜನಿಕರು ಶೌಚಗೃಹಕ್ಕೆ ಬರಲು ಹಿಂದೇಟು ಹಾಕುತ್ತಿದ್ದರು. ಕಲೆಕ್ಷನ್ ಕಡಿಮೆ ಅಂತಾ ಬೀಗ ಜಡಿದಿರುವ ಸಾಧ್ಯತೆ ಇದೆ ಅಂತಾರೇ ಇಲ್ಲಿನ ವ್ಯಾಪರಸ್ಥರು.

ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ, ಸಾರ್ವಜನಿಕರಿಗೆ ಶೌಚ ಗೃಹವನ್ನು ಮುಕ್ತಗೊಳಿಸಲಿ ಎನ್ನುವುದೇ ನಮ್ಮ ಆಶಯ

 

 

The post ಕಂಕನಾಡಿ ಮಾರ್ಕೇಟ್ ಬಳಿ ಬಯಲೇ ಶೌಚಗೃಹ: ಸಾರ್ವಜನಿಕ ಟಾಯ್ಲೆಟ್ ಗೆ ಮತ್ತೆ ಬೀಗ: ಮಾರ್ಕೇಟ್ ಆವರಣದಲ್ಲಿ ದುರ್ನಾತ, ಜನತೆ ಪರದಾಟ… appeared first on V4News.This post first appeared on V4news, please read the originial post: here

Share the post

ಕಂಕನಾಡಿ ಮಾರ್ಕೇಟ್ ಬಳಿ ಬಯಲೇ ಶೌಚಗೃಹ: ಸಾರ್ವಜನಿಕ ಟಾಯ್ಲೆಟ್ ಗೆ ಮತ್ತೆ ಬೀಗ: ಮಾರ್ಕೇಟ್ ಆವರಣದಲ್ಲಿ ದುರ್ನಾತ, ಜ

×

Subscribe to V4news

Get updates delivered right to your inbox!

Thank you for your subscription

×