Get Even More Visitors To Your Blog, Upgrade To A Business Listing >>

ವರ್ಕಾಡಿಯಲ್ಲಿ ರಂಗೇರಿದ ಗ್ರಾಮೀಣ ಕ್ರೀಡೆ ಕಬಡ್ಡಿ ಪಂದ್ಯಾಟ: ವಿವಿಧ ಸಂಘ ಸಂಸ್ಥೆಗಳಿಂದ ಆಯೋಜನೆ

ಮಂಜೇಶ್ವರ: ಮಂಜೆಶ್ವರ ಕಬಡ್ಡಿ ಅಕಾಡಮಿ ಕಾಸರಗೋಡು ಹಾಗೂ ಕಾಸರಗೋಡು ಜಿಲ್ಲಾ ಕಬಡ್ಡಿ ಅಸೋಸಿಯೇಶನ್ ಮತ್ತು ಡ್ರೀಂ ಬಾಯ್ಸ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಜಂಟಿಯಾಗಿ ಆಯೋಜಿಸಿದ ಪ್ರೀಮಿಯರ್ ಲೀಗ್ ಅಂತರಾಜ್ಯ ಕಬಡ್ಡಿ ಪಂದ್ಯಾಟ ವರ್ಕಾಡಿಯ ಮಜೀರ್ಪಳ್ಳದ ಪಂಚಾಯತು ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ನಡೆಯುತ್ತಾ ಇದೆ.

ಶುಕ್ರವಾರದಂದು ಆರಂಭ ಗೊಂಡ ಈ ಪಂದ್ಯಾಟದಲ್ಲಿ ತೆಲುಗು ಟೈಟಾನ್, ತರಭೇತುದಾರ ಉದಯ ಕುಮಾರ್, ನ್ಯೂ ಮುಂಬೈ ತರಭೇತುದಾರ ಬಾಸ್ಕರ ಹಾಗೂ ಕೇರಳ ಕರ್ನಾಟಕದ ಹಾಗೂ ರಾಷ್ಟ್ರೀಯ ಮಟ್ಟದ ಕಬಡ್ಡಿ ಪಟುಗಳು ಭಾಗವಹಿಸುತಿದ್ದಾರೆ. ಕಳೆದ ಎರಡು ದಿನಗಳಲ್ಲಾಗಿ ನಡೆದ ಈ ಕಬಡ್ಡಿ ಪಂದ್ಯಾಟ ಇಂದು ಬಾನುವಾರ ಸಮಾಪ್ತಿಗೊಳಲಿದೆ. ಸಮಾರೋಪ ಸಮಾರಂಭದಲ್ಲಿ ಮಲೆಯಾಳ ಚಿತ್ರ ನಟ ಅನೂಪ್ ಚಂದ್ರನ್, ಪ್ರೊ ಕಬಡ್ಡಿ ಆಟಗಾರ ಸಬೀರ್ ಬಾಪು ಸರಫುದ್ದೀನ್, ಚಲನ ಚಿತ್ರ ನಟ ಕಲಾವಿದ ನವೀನ್ ಡಿ ಪಡೀಲ್, ಮಿಸ್ಟರ್ ವರ್ಲ್ಡ್ ರೇಮಂಡ್ ಡಿ ಸೋಜ, ಭಾಗವಹಿಸಲಿದ್ದಾರೆ. ಪಂದ್ಯಾಟದಲ್ಲಿ ವಿಜೇತರಾದ ತಂಡಕ್ಕೆ ಮೊದಲ ಬಹುಮಾನವಾಗಿ ಒಂದು ಲಕ್ಷ ರೂ, ದ್ವಿತೀಯ ಬಹುಮಾನ ಎಪ್ಪತ್ತು ಸಾವಿರ ರೂ ಮೂರನೇ ಬಹುಮಾನ ಮೂವತ್ತೈದು ರೂ. ನೀಡಲಾಗುತ್ತದೆ. ಕಳೆದ ಎರಡು ದಿನಗಳಲ್ಲಿ ಆಟವನ್ನು ವೀಕ್ಷಿಸಲು ಕ್ರೀಡಾಂಗಣದಲ್ಲಿ ಸಹಸ್ರಾರು ಕ್ರೀಡಾಭಿಮಾನಿಗಳು ಸೇರಿದ್ದರು.

ವರದಿ: ರಹಿಮಾನ್ ಉದ್ಯಾವರ

The post ವರ್ಕಾಡಿಯಲ್ಲಿ ರಂಗೇರಿದ ಗ್ರಾಮೀಣ ಕ್ರೀಡೆ ಕಬಡ್ಡಿ ಪಂದ್ಯಾಟ: ವಿವಿಧ ಸಂಘ ಸಂಸ್ಥೆಗಳಿಂದ ಆಯೋಜನೆ appeared first on V4News.



This post first appeared on V4news, please read the originial post: here

Share the post

ವರ್ಕಾಡಿಯಲ್ಲಿ ರಂಗೇರಿದ ಗ್ರಾಮೀಣ ಕ್ರೀಡೆ ಕಬಡ್ಡಿ ಪಂದ್ಯಾಟ: ವಿವಿಧ ಸಂಘ ಸಂಸ್ಥೆಗಳಿಂದ ಆಯೋಜನೆ

×

Subscribe to V4news

Get updates delivered right to your inbox!

Thank you for your subscription

×