Get Even More Visitors To Your Blog, Upgrade To A Business Listing >>

ಶೋಭಾ ಕರಂದ್ಲಾಜೆಗೆ ಮುತ್ತಿಗೆ ಹಾಕಿದ ಬಿಜೆಪಿ ಕಾರ್ಯಕರ್ತರು

Tags: agravesup

ಬಡಾ ಉಚ್ಚಿಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೊಲ್ಯದಲ್ಲಿ ಮಸೀದಿಯೊಂದು ಅನದಿಕೃತವಾಗಿ ನಿರ್ಮಾಣ ಹಂತದಲ್ಲಿದೆ ಎಂಬುದಾಗಿ ಆರೋಪಿಸಿದ ಬಿಜೆಪಿ ನಿಷ್ಠಾವಂತ ಕಾರ್ಯಕರ್ತರ ಪಡೆಯೊಂದು ಉಚ್ಚಿಲಕ್ಕೆ ಬಂದ ಶೋಭ ಕರಂದ್ಲಾಜೆಗೆ ಮುತ್ತಿಗೆ ಹಾಕಿ ತಕ್ಷಣವೇ ಆ ಮಸೀದಿ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸದಿದ್ದಲ್ಲಿ ಉಚ್ಚಿಲದ ಬಿಜೆಪಿ ಕಾರ್ಯಕರ್ತರಾದ ನಾವು ಮತದಾನವನ್ನೇ ಮಾಡುವುದಿಲ್ಲ ಎಂಬುದಾಗಿ ಎಚ್ಚರಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಬಿಜೆಪಿ ಕಾರ್ಯಕರ್ತ ಕೃಷ್ಣ ಕುಮಾರ್, ಪೊಲ್ಯ ಪ್ರದೇಶದಲ್ಲಿ ಎರಡರೆಡು ಮದರಸಗಳಿದ್ದರೂ ಇದೀಗ ವಾಣಿಜ್ಯ ಸಂಕೀರರ್ಣಕ್ಕೆ ಎಂಬುದಾಗಿ ಪರವಾನಿಗೆ ಪಡೆದು ಮಸೀದಿ ನಿರ್ಮಾಣಕ್ಕೆ ಮುಂದಾಗಿದ್ದಾರೆ, ಈ ಬಗ್ಗೆ ನಾವು ಗ್ರಾ.ಪಂ.ಮುಂಭಾಗ ಪ್ರತಿಭಟನೆಯನ್ನೂ ನಡೆಸಿದ್ದೇವೆ, ಆದರೂ ಮಸೀದಿ ನಿರ್ಮಾಣದ ಕೆಲಸ ಮುಂದುವರಿಯುತ್ತಿದೆ, ಈ ಪ್ರದೇಶಕ್ಕೆ ಹೋಗುವುದಕ್ಕೆ ಪೂರಕ ರಸ್ತೆಯೂ ಇಲ್ಲದೆ, ಜನವಿರೋಧವಿದ್ದರೂ ಗ್ರಾ.ಪಂ.ನಲ್ಲಿ ನಮ್ಮದೇ ಪಕ್ಷ ಆಡಳಿತ ನಡೆಸುತ್ತಿದ್ದ ವೇಳೆಯಲ್ಲಿ ಈ ಮಸೀದಿ ನಿರ್ಮಾಣಕ್ಕೆ ಅವಕಾಶ ನೀಡಿದ್ದಾರೆ, ಈ ಸಮಸ್ಯೆಯನ್ನು ಸ್ಥಳೀಯ ಬಿಜೆಪಿ ಮುಖಂಡರ ಗಮನಕ್ಕೆ ತರಲಾಗಿದೆಯಾದರೂ ಅವರು ನಿರ್ಲಕ್ಷ್ಯ ಮಾಡಿದ್ದಾರೆ. ಇದೀಗ ಉಚ್ಚಿಲದಲ್ಲಿ ನಡೆಯುತ್ತಿರುವ ಬಿಜೆಪಿ ಪಕ್ಷದ ಸಭೆಗೆ ಆಗಮಿಸಿದ ಶೋಭ ಕರಂದ್ಲಾಜೆಯವರ ಗಮನಕ್ಕೆ ಈ ವಿಚಾರ ತರಲು ಮುಂದಾದಾಗಲೂ ನಮ್ಮನ್ನು ಸಂಘ ಪರಿವಾರದ ಜನ ಎನ್ನುವ ವ್ಯಕ್ತಿಯೋರ್ವರು ತಡೆಯುವ ಪ್ರಯತ್ನ ಮಾಡಿದರಾದರೂ ಅವರನ್ನು ದಿಕ್ಕರಿಸಿ ನಾವು ಶೋಭರವರಲ್ಲಿ ನಮ್ಮ ನಿರ್ಧಾರವನ್ನು ತಿಳಿಸಿದ್ದೇವೆ ಎಂದರು.(ಬೈಟ್)

ಈ ಬಗ್ಗೆ ಮಾದ್ಯಮಕ್ಕೆ ಮಾಹಿತಿ ನೀಡಿದ ಶೋಭ ಕರಂದ್ಲಾಜೆ, ಇಲ್ಲಿನ ಅನದಿಕೃತ ಮಸೀದಿ ನಿರ್ಮಾಣದ ಬಗ್ಗೆ ಕಾರ್ಯಕರ್ತರು ಗಮನಕ್ಕೆ ತಂದಿದ್ದಾರೆ, ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು, ಯಾವುದೇ ಕಾರಣಕ್ಕೆ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಎಂಬುದಾಗಿ ಪಡೆದ ಪರವಾನಿಗೆಯಲ್ಲಿ ಮಸೀದಿ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದರು.This post first appeared on V4news, please read the originial post: here

Share the post

ಶೋಭಾ ಕರಂದ್ಲಾಜೆಗೆ ಮುತ್ತಿಗೆ ಹಾಕಿದ ಬಿಜೆಪಿ ಕಾರ್ಯಕರ್ತರು

×

Subscribe to V4news

Get updates delivered right to your inbox!

Thank you for your subscription

×