Get Even More Visitors To Your Blog, Upgrade To A Business Listing >>

ಬೈಕಂಪಾಡಿಯ ಮೀನಕಳಿಯದ ಮನೆಗೆ ಅಗ್ನಿ ಅವಘಡ

ಬೈಕಂಪಾಡಿ ಸಮೀಪದ ಮೀನಕಳಿಯ ಎಂಬಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿ ಮನೆ ಸಂಪೂರ್ಣ ಅಗ್ನಿಗಾಹುತಿಯಾಗಿದೆ.

ಕೇಶವ ಕುಲಾಲ್ ಅವರು ಬೆಳಗ್ಗೆ ಎಂದಿನಂತೆ ಬೈಕಂಪಾಡಿಯಲ್ಲಿರುವ ತಮ್ಮ ಕ್ಯಾಂಟೀನ್ ಕೆಲಸಕ್ಕೆ ತೆರಳಿದ್ದರು. ಹನ್ನೊಂದು ಗಂಟೆ ಸುಮಾರಿಗೆ ಮನೆಯಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದ್ದು ಮನೆಯೊಳಗಿದ್ದ ಅಮೂಲ್ಯ ವಸ್ತುಗಳು ,ದಾಖಲೆ ಪತ್ರ,ಪಡಿತರ ಚೀಟಿ,ಆಧಾರ್ ,ಬಟ್ಟೆ ಬರೆ,ಅಡುಗೆ ಪಾತ್ರೆಗಳ ಸಹಿತ ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ.ಬೆಂಕಿ ನಂದಿಸಲು ಸ್ಥಳೀಯ ಕೋಡಿಕಲ್ ಮೊಗವೀರ ಮಹಾಸಭಾದ ಸದಸ್ಯರು,ಯುವಕರು ನೆರವಾದರು.ಅಗ್ನಿಶಾಮಕ ಸಿಬಂದಿ ಆಗಮಿಸಿ ಬೆಂಕಿ ನಂದಿಸುವಲ್ಲಿ ಶ್ರಮಿಸಿದರು.
ಅಗ್ನಿ ಸಂಭವಿಸಿದ ಸ್ಥಳಕ್ಕೆ ಕಾರ್ಪೊರೇಟರ್ ಪುರುಷೋತ್ತಮ್ ಚಿತ್ರಾಪುರ, ಗಣೇಶ್ ಹೊಸಬೆಟ್ಟು ಭೇಟಿ ನೀಡಿ ಸರಕಾರದಿಂದ ಸಿಗುವ ನೆರವು ಒದಗಿಸುವ ಭರವಸೆ ನೀಡಿದರು.ಕಂದಾಯ ಅಧಿಕಾರಿ,ಗ್ರಾಮಕರಣಿಕ ಭೇಟಿ ನೀಡಿ ನಷ್ಟದ ಅಂದಾಜು ನಡೆಸಿ ಸಂಬಂದ ಪಟ್ಟ ಇಲಾಖೆಗೆ ಕಳಿಸಲು ಕ್ರಮ ಕೈಗೊಂಡಿದ್ದಾರೆ.



This post first appeared on V4news, please read the originial post: here

Share the post

ಬೈಕಂಪಾಡಿಯ ಮೀನಕಳಿಯದ ಮನೆಗೆ ಅಗ್ನಿ ಅವಘಡ

×

Subscribe to V4news

Get updates delivered right to your inbox!

Thank you for your subscription

×