Get Even More Visitors To Your Blog, Upgrade To A Business Listing >>

ಕುಂದಾಪುರ:ಜನಾಕ್ರೋಶಕ್ಕೆ ಮಣಿದ ಜಿಲ್ಲಾಡಳಿತ, ಟೋಲ್ ವಿರುದ್ದ ಪ್ರತಿಭಟನೆ ಭಾಗಶಃ ಯಶಸ್ಸು, ಹೋರಾಟಗಾರರ ಬಂಧನ, ಬಿಡುಗಡೆ,

ಕುಂದಾಪುರ ಟೋಲ್ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ತಾರಕಕ್ಕೇರುತಿಂದ್ದಂತೆ ಜಿಲ್ಲಾಡಳಿತ ಪ್ರತಿಭಟನಾಕಾರರ ಕೆಲ ಬೇಡಿಕೆಗಳನ್ನು ಈಡೇರಿಸಿದ್ದು, ಪ್ರತಿಭಟನೆ ತಾತ್ಕಾಲಿಕವಾಗಿ ಅಂತ್ಯಗೊಂಡಿದೆ.

ಸುಮಾರು 130 ಕ್ಕೂ ಅಧಿಕ ಸಂಘಟನೆಗಳ ಬೆಂಬಲದೊಂದಿಗೆ ಸಾರ್ವಜನಿಕರು ಭಾರಿ ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸಿ ಸ್ಥಳೀಯ ವಾಹನಗಳಿಗೆ ಟೋಲ್ ಸಂಗ್ರಹಿಸಬಾರದು ಎಂಬ ಆಗ್ರಹಿಸಿದರು.

ಜಿಲ್ಲಾಡಳಿತ ಮಧ್ಯಾಹ್ನದ ವೇಳೆಗೆ ಸಂಸದರು, ಶಾಸಕರು, ಹೋರಾಟ ಸಮಿತಿಯ ಸದಸ್ಯರು ಹಾಗೂ ನವಯುಗ ಸಂಸ್ಥೆಯ ಜೊತೆಗೆ ಉಡುಪಿಯ ಪ್ರವಾಸಿ ಮಂದಿರದಲ್ಲಿ ಸಭೆಯನ್ನು ಆಯೋಜಿಸಿತು.
ಸಭೆಯಲ್ಲಿ ಹಾಜರಿದ್ದ ಸಂಸದರು, ಶಾಸಕರು, ಪ್ರತಿಭಟನಾಕಾರರು ಜಿಲ್ಲಾಡಳಿತ ಹಾಗೂ ನವಯುಗ ಸಂಸ್ಥೆಯ ಮೇಲೆ ಸ್ಥಳೀಯ ಕೆ ಎ 20 ನೋಂದಣಿಯ ವಾಹನಗಳಿಗೆ ಕನಿಷ್ಟ 20 ಕಿಮಿ ವ್ಯಾಪ್ತಿಯಲ್ಲಿ ರಿಯಾಯತಿ ಹಾಗೂ ಟೂರಿಸ್ಟ್ ವಾಹನಗಳಿಗೂ ರಿಯಾಯತಿ ನೀಡುವಂತೆ ಆಗ್ರಹಿಸಿದರು. ಆದರೆ ಜನಪ್ರತಿನಿಧಿಗಳು ಹಾಗೂ ಹೋರಾಟಗಾರರ ಮನವಿಗೆ ಕಂಪೆನಿ ಯಾವುದೇ ರೀತಿಯಲ್ಲಿ ಸ್ಪಂದನೆ ನೀಡದೆ ಸಭೆ ವಿಫಲವಾಯಿತು.

ಸಭೆಯಲ್ಲಿದ್ದ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕನಿಷ್ಠ 5 ಕಿಮಿ ವ್ಯಾಪ್ತಿಯ ಖಾಸಗಿ ವಾಹನಗಳಿಗಾದರೂ ಉಚಿತವಾಗಿ ಬಿಡಲು ಮನವಿ ಮಾಡಿದರು. ಆ ಮನವಿಗೂ ಸ್ಪಂದಿಸದ ಕಂಪೆನಿಯ ವಿರುದ್ದ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಕಂಪೆನಿಯ ಪ್ರತಿನಿಧಿಗಳು ಪ್ರತ್ಯೇಕ ಸಭೆ ನಡೆಸಿ ನಿರ್ಧಾರ ಪ್ರಕಟಿಸುವುದಾಗಿ ಹೇಳಿದ ಬಳಿಕ ಹೋರಾಟಗಾರರು ಮತ್ತು ಶಾಸಕರು, ಸಂಸದರು ಮರಳಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದರು.

ಪೂರ್ಣ ಬೇಡಿಕೆ ಈಡೇರಿಲ್ಲ ಎಂದು ಆರೋಪಿಸಿ ಪ್ರತಿಭಟನಾಕಾರರೆಲ್ಲರೂ ಜನಪ್ರತಿನಿಧಿಗಳೊಂದಿಗೆ ಸೇರಿ ಟೋಲ್ ಕೇಂದ್ರದ ಎದುರು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರು ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ರಘುಪತಿ ಭಟ್ ಸಹಿತ ೬೨ ಮಂದಿ ಪ್ರತಿಭಟನಾಕಾರರನ್ನು ಬಂಧಿಸಿ ಬಿಡುಗಡೆಗೊಳಿಸಿದರು. ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ರಘುಪತಿ ಭಟ್, ಹೋರಾಟ ಸಮಿತಿಯ ಪ್ರತಾಪ ಶೆಟ್ಟಿ, ವಿಠಲ ಪೂಜಾರಿ, ರಾಜೇಶ್ ಕಾವೇರಿ, ಅಲ್ವಿನ್ ಅಂದ್ರಾದೆ, ಪ್ರಶಾಂತ ಶೆಟ್ಟಿ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ಹೋರಾಟದ ಕಿಚ್ಚು ಹೆಚ್ಚಾಗುವ ಸಾಧ್ಯತೆ ಮನಗಂಡ ಪೊಲೀಸ್ ವರಿಷ್ಠಾಧಿಕಾರಿಗಳು ಸಾಸ್ತಾನ-ಗುಂಡ್ಮಿ ಟೋಲ್ ಕೇಂದ್ರದ ಬಳಿ ಬಿಗುಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು. ಹೆಚ್ಚುವರಿ ಎಸ್ಪಿ ಕುಮಾರಚಂದ್ರ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ವಿವಿಧ ಭಾಗಗಳ ಡಿವೈಎಸ್ಪಿ, ಸರ್ಕಲ್ ಇನ್ಸ್‌ಪೆಕ್ಟರ್, ಠಾಣಾಧಿಕಾರಿ, ಸಿಬ್ಬಂದಿಗಳು ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರುThis post first appeared on V4news, please read the originial post: here

Share the post

ಕುಂದಾಪುರ:ಜನಾಕ್ರೋಶಕ್ಕೆ ಮಣಿದ ಜಿಲ್ಲಾಡಳಿತ, ಟೋಲ್ ವಿರುದ್ದ ಪ್ರತಿಭಟನೆ ಭಾಗಶಃ ಯಶಸ್ಸು, ಹೋರಾಟಗಾರರ ಬಂಧನ, ಬಿಡುಗಡೆ,

×

Subscribe to V4news

Get updates delivered right to your inbox!

Thank you for your subscription

×