Get Even More Visitors To Your Blog, Upgrade To A Business Listing >>

ಈ ಬಾರಿ ಉಡುಪಿಯಲ್ಲಿ ಮಕ್ಕಳ ಹಬ್ಬ:ಕಾರ್ಕಳದಲ್ಲಿ ಸಚಿವೆ ಡಾ ಜಯಮಾಲ ಹೇಳಿಕೆ

 ಈ ಬಾರಿ ಉಡುಪಿಯಲ್ಲಿ ಮಕ್ಕಳ ಹಬ್ಬವನ್ನು ನಡೆಸಲಾಗುವುದು ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲ ಹೇಳಿದರು. ಅವರು ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಇದರಲ್ಲಿ ಸುಮಾರು ೩ ಲಕ್ಷ ಮಂದಿ ಭಾಗವಹಿಸಲಿದ್ದಾರೆ. ರಾಜ್ಯದ 47 ಇಲಾಖೆಗಳನ್ನು ಒಟ್ಟು ಸೇರಿಸಿ ನಡೆಸುವ ಮಕ್ಕಳ ಹಬ್ಬದ ಮೂಲಕ ಮಕ್ಕಳಿಗೆ ಉತ್ತಮ ಅವಕಾಶ ಕಲ್ಪಿಸಿಕೊಡಲಾಗುವುದು. 

ಇನ್ನು ಶಾಂತಿಯ ಕೇಂದ್ರವೆನಿಸಿದ ಕಾರ್ಕಳದಲ್ಲಿ ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ಕೋಟಿಚೆನ್ನಯ್ಯ ಥೀಂ ಪಾರ್ಕನ್ನು ಅಭಿವೃದ್ಧಿ ಪಡಿಸಲಾಗುವುದು. ಇದರಿಂದ ಉದ್ಯೋಗ ನಿರ್ಮಾಣದ ಕೆಲಸವೂ ನಡೆಯುತ್ತದೆ ಎಂದರು. ಡೀಮ್ಡ್ ಫಾರೆಸ್ಟ್‌ನ್ನು ಗುರುತಿಸುವಲ್ಲಿ ವೈಫಲ್ಯವಾದ ಕಾರಣ, ಅರಣ್ಯದ ಆಶ್ರಯದಲ್ಲಿ ವಾಸಿಸಿರುವವರಿಗೆ ಪರ್ಯಾಯ ವ್ಯವಸ್ಥೆಯನ್ನು ಮಾಡಬೇಕಾಗಿದೆ. ಇದರಲ್ಲಿ ಪಕ್ಷಭೇದ ಮರೆದ ಒಮ್ಮತದ ನಿರ್ಣಯ ಮಾಡಬೇಕಾಗಿದೆ ಎಂದರು.

ಇನ್ನು ಸಾಂಪ್ರಾದಾಯಿಕ ಮರಳನ್ನು ಈಗ ನೀಡಲಾಗುತ್ತಿದ್ದು ಸಿಆರ್‌ಝಡ್‌ಗೆ ಕಾನೂನಾತ್ಮಕ ತೊಡಕಿರುವುದರಿಂದ ಕೇಂದ್ರ ಮಾಡಬೇಕಾಗಿದೆ ರಾಜ್ಯ ಸರ್ಕಾರದ ನೆಲೆಯಲ್ಲಿ ಸಾಕಷ್ಟು ಪ್ರಯತ್ನ ಮಾಡಲಾಗಿದೆ ಎಂದರು.

ಶಬರಿಮಲೈ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಎಲ್ಲರಿಗೂ ಹೃದಯವೊಂದಿದೆ. ಎದೆಮುಟ್ಟಿ ಕೊಂಡು ಪ್ರಶ್ನಿಸಿಕೊಂಡಾಗ ಉತ್ತರ ದೊರೆಯಲಿದೆ ಎಂದರು.

ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಜಿ.ಎ ಭಾವಾ, ಮಾಜಿಶಾಸಕ ಎಚ್.ಗೋಪಾಲ ಭಂಡಾರಿ, ಉಡುಪಿ ಜಿಲ್ಲಾ ಉಪಾಧ್ಯಕ್ಷ ಮುನಿಯಾಲು ಉದಯಕುಮಾರ್ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧಾಕರ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.This post first appeared on V4news, please read the originial post: here

Share the post

ಈ ಬಾರಿ ಉಡುಪಿಯಲ್ಲಿ ಮಕ್ಕಳ ಹಬ್ಬ:ಕಾರ್ಕಳದಲ್ಲಿ ಸಚಿವೆ ಡಾ ಜಯಮಾಲ ಹೇಳಿಕೆ

×

Subscribe to V4news

Get updates delivered right to your inbox!

Thank you for your subscription

×