Get Even More Visitors To Your Blog, Upgrade To A Business Listing >>

ಬ್ರಾಹ್ಮಣ ವ್ಯಕ್ತಿಯ ಶವಸಂಸ್ಕಾರ ಅಸಾಹಯಕರಾದ ಸಂಬಂಧಿಗಳು:ವಿಶು ಶೆಟ್ಟಿ ಅವರಿಂದ ಮಾನವೀಯ ಕಾರ್ಯ

ಬ್ರಾಹ್ಮಣ ಸಮಾಜದ ವೃದ್ಧರೊರ್ವರ ಶವ ಸಂಸ್ಕಾರವನ್ನು ನಡೆಸಲು ಕುಟುಂಬಿಕರು ಅಸಹಾಯಕತೆ ವ್ಯಕ್ತಪಡಿಸಿದ ಕಾರಣದಿಂದ, ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು, ಪುರೋಹಿತರ ಮೂಲಕ ಅಂತ್ಯ ಸಂಸ್ಕಾರ ನಡೆಸಿ ಮುಕ್ತಿ ದೊರಕಿಸಿದ ಘಟನೆ ಬುಧವಾರ ನಡೆದಿರುವುದು ಬೆಳಕಿಗೆ ಬಂದಿದೆ. ಸಮಾಜಸೇವಕರ ಕಾರ್ಯವು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

ಕಳೆದ ಎಂಟು ತಿಂಗಳ ಹಿಂದೆ ಅಪರಿಚಿತ ವೃದ್ಧರೊರ್ವರು ಪಾರ್ಶ್ವವಾಯು ಪೀಡಿತರಾಗಿ ನಡೆದಾಡುವ ಸ್ವಾಧಿನ ಕಳೆದುಕೊಂಡು ಅಸಹಾಯಕ ಸ್ಥಿತಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕಂಡು ಬಂದಿದ್ದರು. ಅವರನ್ನು ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲು ಪಡಿಸಿ ಅಂದು ಮಾನವಿಯತೆ ಮೆರೆದಿದ್ದರು. ಎರಡು ತಿಂಗಳುಗಳ ಕಾಲ ಚಿಕಿತ್ಸೆ ನೀಡುವ ವ್ಯವಸ್ಥೆಗೊಳಿಸಿದ್ದರು. ಆ ಸಂದರ್ಭ ವೃದ್ಧರು ತಮ್ಮ ಹೆಸರು ರಮೇಶ್ ಭಟ್ (75 ವ) ಪೆರ್ಡೂರು, ಬ್ರಾಹ್ಮಣ ಸಮಾಜದ ವ್ಯಕ್ತಿ ಎಂದು ಮಾಹಿತಿಯನ್ನು ನೀಡಿದ್ದರು. ಮಾಹಿತಿಯಂತೆ ಸಂಬಂಧಿಕರ ಪತ್ತೆಗಾಗಿ ಮಾಧ್ಯಮ ಪ್ರಕಟಣೆ ನೀಡಲಾಗಿತ್ತು. ಬಲ್ಲವರಿಂದ ವೃದ್ಧರ ಸಂಬಂಧಿಕರು ಉಡುಪಿಯ ಆಸು ಪಾಸಿನಲ್ಲಿ ಇದ್ದಾರೆ ಎಂಬ ಮಾಹಿತಿ ಕೂಡ ಲಭ್ಯವಾಗಿತ್ತು. ಆದರೂ ಯಾರೂ ಆಸ್ಪತ್ರೆಯನ್ನು ಸಂಪರ್ಕಿಸುವ ಪ್ರಯತ್ನವನ್ನು ಮಾಡಿರಲಿಲ್ಲ.

ಆಸ್ಪತ್ರೆಯಲ್ಲಿ ಬಿಡುಗಡೆಗೊಂಡ ಬಳಿಕ ವೃದ್ಧರನ್ನು ಸಂಬಂಧಿಕರ ಯಾವೊಂದು ಸ್ಪಂದನೆ ಇಲ್ಲದ ಕಾರಣದಿಂದ ವಿಶು ಶೆಟ್ಟಿ ಅವರು ಕಾಸರಗೋಡು ದೈಗುಳಿಯ ಶ್ರೀಸಾಯಿ ಸೇವಾ ಆಶ್ರಮದಲ್ಲಿ ನೆಲೆ ಕಲ್ಪಿಸಿದ್ದರು. ಅಲ್ಲಿ ಆಶ್ರಮ ಸಂಚಾಲಕರಾದ ಡಾ.ಉದಯ ಕುಮಾರ್ ಅವರು ಕಳೆದ ಆರು ತಿಂಗಳುಗಳಿಂದ ವೃದ್ಧರ ಸೇವೆ ಮಾಡಿದ್ದರು. ವೃದ್ಧರು ಆರೋಗ್ಯ ಸ್ಥಿತಿ ಗಂಭೀರಗೊಂಡು ನ.17ರಂದು ಆಶ್ರಮದಲ್ಲಿ ಮೃತ ಪಟ್ಟರು. ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸುವ ಕಾರಣದಿಂದಾಗಿ ಮಂಗಳೂರಿನ ಶವಗಾರದಲ್ಲಿ ಆಶ್ರಮದ ವತಿಯಿಂದ ರಕ್ಷಿಸಿಡಲಾಗಿತ್ತು. ಸಂಬಂಧಿಕರು ಶವ ಪಡೆಯಲು ಅಸಹಾಯಕತೆ ವ್ಯಕ್ತಪಡಿಸಿದರಿಂದ, ವಿಶು ಶೆಟ್ಟಿ ಅವರು ಶವವನ್ನು ಮಂಗಳೂರಿಂದ ಉಡುಪಿಯ ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ರಕ್ಷಿಸಿ ಇಟ್ಟರು.

ಮೃತ ವ್ಯಕ್ತಿಯ ಸಂಬಂಧಿಕರು ಅಂತ್ಯಸಂಸ್ಕಾರ ನಡೆಸಲು ಅಸಹಾಯಕರಾದಗ, ವಿಶು ಶೆಟ್ಟಿ ಅವರು ಅವರಿಂದ ಲಿಖಿತವಾಗಿ ಅನುಮತಿ ಪತ್ರ ಪಡೆದು, ಕಂಗೂರು ಮಠದ ಗೋವಿಂದ ರಾಜ್ ಭಟ್ ಪುರೋಹಿತ್ಯದ ಮೂಲಕವಾಗಿ, ಶಿವಳ್ಳಿ ಬ್ರಾಹ್ಮಣ ಸಮಾಜದ ಸಂಪ್ರದಾಯದ ವಿಧಿ ವಿಧಾನದಂತೆ, ವ್ಯಕ್ತಿ ಮೃತಪಟ್ಟು ಐದು ದಿನಗಳು ಕಳೆದ ಬಳಿಕ, ಬೀಡಿನಗುಡ್ಡೆ ಹಿಂದು ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರವನ್ನು ಮಾಡಿಸಿದರು. ಚಿತೆಗೆ ಅಗ್ನಿ ಸ್ಪರ್ಶ ಪ್ರಕ್ರಿಯೆಗಳನ್ನು ಮೂಡುಬೆಟ್ಟು ರಮಾನಾಥ್ ಭಟ್ ಅವರು ನಡೆಸಿದರು. ಪುರೋಹಿತರು ಸಂಸ್ಕಾರ ವಿಧಿ ಕಾರ್ಯವನ್ನು ಸೇವಾ ರೂಪದಲ್ಲಿ ನಡೆಸಿದರು. ಶವಸಂಸ್ಕಾರದ ಮುಂದಾಳತ್ವ ವಹಿಸಿದ ವಿಶು ಶೆಟ್ಟಿ ಅವರು ಶವ ಸಂಸ್ಕಾರ ಕಾರ್ಯಕ್ಕೆ ತಗುಲಿದ ಎಲ್ಲಾ ಖರ್ಚು ವಚ್ಚಗಳನ್ನು ಭರಿಸಿದರು. ಸಾಮಾಜಿಕ ಕಾರ್ಯಕರ್ತ ತಾರಾನಾಥ್ ಮೇಸ್ತ ಶಿರೂರು ಸಂಸ್ಕಾರ ಪುಣ್ಯ ಕಾರ್ಯದಲ್ಲಿ ಭಾಗಿಯಾಗಿ ಸಹಕರಿಸಿದರು.This post first appeared on V4news, please read the originial post: here

Share the post

ಬ್ರಾಹ್ಮಣ ವ್ಯಕ್ತಿಯ ಶವಸಂಸ್ಕಾರ ಅಸಾಹಯಕರಾದ ಸಂಬಂಧಿಗಳು:ವಿಶು ಶೆಟ್ಟಿ ಅವರಿಂದ ಮಾನವೀಯ ಕಾರ್ಯ

×

Subscribe to V4news

Get updates delivered right to your inbox!

Thank you for your subscription

×