Get Even More Visitors To Your Blog, Upgrade To A Business Listing >>

ಸಡಗರದಿಂದ ನಡೆದ ಕೊಟ್ಟಾರಿ ಕ್ರೀಡೋತ್ಸವ-2018

ಮಂಗಳೂರು: ದ.ಕ. ಜಿಲ್ಲಾ ಕೊಟ್ಟಾರಿ ಯುವ ವೇದಿಕೆ ಮತ್ತು ದ.ಕ. ಜಿಲ್ಲಾ ಕೊಟ್ಟಾರಿ ಸಮಾಜ ಸುಧಾರಕ ಸಂಘದ ಆಶ್ರಯದಲ್ಲಿ ಕೊಟ್ಟಾರಿ ಕ್ರೀಡೋತ್ಸವ -2018 ಕ್ರೀಡಾಕೂಟವು ಇತ್ತೀಚೆಗೆ ಮಂಗಳೂರಿನ ಸಂತ ಅಲೋಷಿಯಸ್ ಪಿ.ಯು. ಕಾಲೇಜು ಮೈದಾನದಲ್ಲಿ ನಡೆಯಿತು.

ಕ್ರೀಡಾಕೂಟವನ್ನು ಕರಾವಳಿ ಕಾಲೇಜು ಸಮೂಹ ಸಂಸ್ಥೆಗಳ ಅಧ್ಯಕ್ಷ ಎಸ್. ಗಣೇಶ್ ರಾವ್ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಕೊಟ್ಟಾರಿ ಸಮಾಜ ಈಗ ಒಗ್ಗಟ್ಟಾಗಿದೆ. ಹಿರಿಯರ ಅನುಭವದ ಜೊತೆಗೆ ಒಗ್ಗಟ್ಟಿನಲ್ಲಿ ಸಮಾಜವನ್ನು ಸರಿಯಾದ ದಾರಿಯಲ್ಲಿ ಮುನ್ನಡೆಯಲಿ ಎಂದು ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ನ್ಯೂ ಮಂಗಳೂರು ಪೋರ್ಟ್ ಸ್ಟೀಮರ್ ಏಜೆನ್ಸೀಸ್ ಅಸೋಸಿಯೇಷನ್ ಅಧ್ಯಕ್ಷ ಪ್ರವೀಣ್ ಕುಮಾರ್ ಬಂಗೇರ, ಅಮೋಘ ಶಿಪ್ಪಿಂಗ್ ಏಜೆನ್ಸಿಯ ಪಾಲುದಾರ ನಿತ್ಯಾನಂದ ಶೆಟ್ಟಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕ್ಯಾಪ್ಟನ್ ಬ್ರಿಜೇಶ್ ಚೌಟ, ಲೆಕ್ಕಪರಿಶೋಧಕ ಕೆರಾಡಿ ನಾರಾಯಣ ಕೊಠಾರಿ, ಉದ್ಯಮಿ ಜಯಂತ್ ಕೋಟ್ಯಾನ್, ಜಿಲ್ಲಾ ಕೊಟ್ಟಾರಿ ಸಮಾಜ ಸುಧಾರಕ ಸಂಘದ ಗೌರವಾಧ್ಯಕ್ಷ ಪುರುಷೋತ್ತಮ ಕೊಟ್ಟಾರಿ, ಜಿಲ್ಲಾ ಕೊಟ್ಟಾರಿ ಸಮಾಜ ಸುಧಾರಕ ಸಂಘದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮಹಾಬಲ ಕೊಟ್ಟಾರಿ, ಪ್ರಧಾನ ಕಾರ್ಯದರ್ಶಿ ತೇವು ತಾರಾನಾಥ ಕೊಟ್ಟಾರಿ ಉಪಸ್ಥಿತರಿದ್ದರು.

ಕ್ರೀಡೋತ್ಸವದಲ್ಲಿ ಪುರುಷರು, ಮಹಿಳೆಯರು ಮಕ್ಕಳಿಗಾಗಿ ವಿವಿಧ ಬಗೆಯ ಕ್ರೀಡಾಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಉತ್ಸಾಹದಿಂದ ಕ್ರೀಡೋತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.



This post first appeared on V4news, please read the originial post: here

Share the post

ಸಡಗರದಿಂದ ನಡೆದ ಕೊಟ್ಟಾರಿ ಕ್ರೀಡೋತ್ಸವ-2018

×

Subscribe to V4news

Get updates delivered right to your inbox!

Thank you for your subscription

×