Get Even More Visitors To Your Blog, Upgrade To A Business Listing >>

ವಿಟ್ಲ:ಜಾನುವಾರು ಅಕ್ರಮ ಸಾಗಾಟ ಆರೋಪಿಗಳ ಸಹಿತ ಹಸು, ವಾಹನ ವಶಕ್ಕೆ

ಕೇರಳಕ್ಕೆ ಅಕ್ರಮವಾಗಿ ದನವನ್ನು ಸಾಗಾಟ ಮಾಡುತ್ತಿದ್ದ ತಂಡವನ್ನು ಪತ್ತೆ ಹಚ್ಚಿದ ವಿಟ್ಲ ಪೊಲೀಸರು ಇಬ್ಬರು ಆರೋಪಿಗಳನ್ನು, ಒಂದು ಹಸು ಹಾಗೂ ವಾಹನವನ್ನು ವಶಪಡಿಸಿಕೊಂಡ ಘಟನೆ ಸಾಲೆತ್ತೂರು ಗ್ರಾಮದ ಕಟ್ಟತ್ತಿಲ ಎಂಬಲ್ಲಿ ನಡೆದಿದೆ.

ಪುತ್ತೂರು ತಾಲ್ಲೂಕಿನ ಕೊಡಿಂಬಾಡಿ ಅರ್ಬಿ ನಿವಾಸಿ ಪ್ರವೀಣ್ ನಾಯಕ್ ಹಾಗೂ ಪುತ್ತೂರು ತಾಲ್ಲೂಕಿನ ಪಡ್ನೂರು ಗ್ರಾಮದ ಬೇರಿಕೆ ನಿವಾಸಿ ಜಗದೀಶ ಹೆಗಡೆ ಬಂಧಿತ ಆರೋಪಿಗಳು. ಇವರು ವಿಟ್ಲ ಕಡೆಯಿಂದ ಸಾಲೆತ್ತೂರು ಮೂಲಕ ಕೇರಳದ ಕಡೆಗೆ ಒಂದು ದನವನ್ನು ಮಹೇಂದ್ರ ಜೀತೊ ವಾಹನದಲ್ಲಿ ಸಾಗಾಟ ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಸಾಲೆತ್ತೂರು ಗ್ರಾಮದ ಕಟ್ಟತ್ತಿಲ ಸೇತುವೆ ಬಳಿ ವಿಟ್ಲ ಎಸ್‌ಐ ಯಲ್ಲಪ್ಪ ನೇತೃತ್ವದ ತಂಡ ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



This post first appeared on V4news, please read the originial post: here

Share the post

ವಿಟ್ಲ:ಜಾನುವಾರು ಅಕ್ರಮ ಸಾಗಾಟ ಆರೋಪಿಗಳ ಸಹಿತ ಹಸು, ವಾಹನ ವಶಕ್ಕೆ

×

Subscribe to V4news

Get updates delivered right to your inbox!

Thank you for your subscription

×