Get Even More Visitors To Your Blog, Upgrade To A Business Listing >>

ಸಂಗಬೆಟ್ಟು ತಾ.ಪಂ. ಕ್ಷೇತ್ರದ ಉಪಚುನಾವಣೆ: ಬಿಜೆಪಿ ಅಭ್ಯರ್ಥಿ ಪ್ರಭಾಕರ ಪ್ರಭುಗೆ ಜಯ

ಬಂಟ್ವಾಳ: ಬಂಟ್ವಾಳ ತಾಲೂಕು ಪಂಚಾಯತ್‍ನ ಸಂಗಬೆಟ್ಟು ಕ್ಷೇತ್ರಕ್ಕೆ ನಡೆದ ಉಪಚುನಾವಣೆಯ ಮತ ಎಣಿಕೆ ಕಾರ್ಯ ಇಂದು ಬೆಳಿಗ್ಗೆ ನಡೆದಿದ್ದು ಬಿಜೆಪಿ ಅಭ್ಯರ್ಥಿ ಪ್ರಭಾಕರ ಪ್ರಭು ಅವರು ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಸುಂದರ ಶಾಂತಿ ವಿರುದ್ದ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.ಬಿ. ಸಿ.ರೋಡಿನ ಮಿನಿವಿಧಾನ ಸೌಧದಲ್ಲಿ ಮತ ಎಣಿಕೆ ಪ್ರಕ್ರಿಯೆ ಬೆಳಿಗ್ಗೆ 8 ಗಂಟೆಗೆ ಆರಂಭವಾಗಿದ್ದು 9 ಗಂಟೆಯ ಒಳಗಾಗಿ ಫಲಿತಾಂಶ ಪ್ರಕಟಗೊಂಡಿದೆ. ಆರಂಭದ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ ಸಾಧಿಸಿದರೆ ಎರಡನೇ ಸುತ್ತಿನಿಂದ ಕೊನೆಯ ಸುತ್ತಿನವರೆಗೆ ಬಿಜೆಪಿ ಅಭ್ಯರ್ಥಿ ಪ್ರಭಾಕರ ಪ್ರಭು ಅವರು ಮುನ್ನಡೆ ಕಾಯ್ದುಕೊಂಡಿದ್ದು ಅಂತಿಮವಾಗಿ ಪ್ರಭಾಕರ ಪ್ರಭು 3939 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಸುಂದರ ಶಾಂತಿ 2850 ಮತಗಳನ್ನು ಪಡೆದು ಸೋಲನ್ನನುಭವಿಸಿದರು. 51 ನೋಟ ಮತಗಳು ಚಲಾವಣೆಯಾಗಿದ್ದು ಒಟ್ಟು 1099 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸುವಂತಾಯಿತು.
ವಿಜೇತ ಅಭ್ಯರ್ಥಿಯನ್ನು ಶಾಸಕ ರಾಜೇಶ್ ನಾೈಕ್ ಉಳಿಪ್ಪಾಡಿಯವರು ಹೂವಿನ ಹಾರ ಹಾಕಿ ಅಭಿನಂದಿಸಿದರು. ಮಿನಿ ವಿಧನಸೌಧದದ ಮುಂಭಾಗದಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಿಸಿದರು. ಬಿಜೆಪಿ ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ದೇವದಾಸ ಶೆಟ್ಟಿ, ಕಾರ್ಯದರ್ಶಿ ಪ್ರಕಾಶ್ ಅಂಚನ್, ಜಿ. ಆನಂದ, ರಮಾನಾಥ ರಾಯಿ ಮತ್ತಿತರರು ಹಾಜರಿದ್ದರು. ತಹಶೀಲ್ದಾರ್ ಪುರಂದರ ಹೆಗ್ಡೆ, ಚುನಾವಣಾಧಿಕಾರಿ ನಾರಾಯಣ ಶೆಟ್ಟಿ, ಸಹಾಯಕ ಚುಣಾವಣಾಧಿಕಾರಿ ಲಕ್ಷ್ಮಣ್, ಸೆಕ್ಟರ್ ಅಧಿಕಾರಿ ಮತ್ತಡಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಮತ ಎಣಿಕೆ ಪ್ರಕ್ರಿಯೆ ನಡೆಸಿಕೊಟ್ಟರು. ಪೊಲೀಸ್ ವೃತ್ತ ನಿರೀಕ್ಷಕ ನಾಗರಾಜ್ ನೇತೃವದಲ್ಲಿ ಉಪನಿರೀಕ್ಷಕರಾದ ಪ್ರಸನ್ನ ಹಾಗೂ ಚಂದ್ರಶೇಖರ್ ಪೊಲೀಸ್ ಬಂದೋಬಸ್ತ್ ನಡೆಸಿದರು.This post first appeared on V4news, please read the originial post: here

Share the post

ಸಂಗಬೆಟ್ಟು ತಾ.ಪಂ. ಕ್ಷೇತ್ರದ ಉಪಚುನಾವಣೆ: ಬಿಜೆಪಿ ಅಭ್ಯರ್ಥಿ ಪ್ರಭಾಕರ ಪ್ರಭುಗೆ ಜಯ

×

Subscribe to V4news

Get updates delivered right to your inbox!

Thank you for your subscription

×