Get Even More Visitors To Your Blog, Upgrade To A Business Listing >>

ಬಂಟ್ವಾಳ ಬುಡೋಳಿಯಲ್ಲಿ ರಕ್ತದಾನ ಶಿಬಿರ:ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ

ಬಂಟ್ವಾಳ:ಬುಡೋಳಿ ಯೂತ್ ಫೆಡರೇಶನ್ (ಬಿವೈಎಫ್) ನೇತೃತ್ವದಲ್ಲಿ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಹಾಗೂ ಮಂಗಳೂರಿನ ನಿಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆ ಸಹಭಾಗಿತ್ವದಲ್ಲಿ ಬಂಟ್ವಾಳ ತಾಲೂಕಿನ ಬುಡೋಳಿ ಜಂಕ್ಷನ್‌ನಲ್ಲಿ ಯಶಸ್ವಿ ರಕ್ತದಾನ ಶಿಬಿರ ನಡೆಯಿತು.
ಉದ್ಘಾಟನೆ ನೇರವೇರಿಸಿ ಮಾತನಾಡಿದ ಗಡಿಯಾರ ಜುಮಾ ಮಸೀದಿ ಖತೀಬ್ ಟಿ.ಪಿ.ಜಮಾಲುದ್ದೀನ್ ದಾರಿಮಿ, ’ಮನುಷ್ಯ ಸಾಮೂಹಿಕ ಜೀವಿ. ಮರಣದ ನಂತರ ನಮ್ಮನ್ನ ಜನರು ನೆನಪಿನಲ್ಲಿಟ್ಟುಕೊಳ್ಳಬೇಕೆಂದರೆ ಸಾಮಾಜಿಕ ಕಾರ್ಯಗಳಲ್ಲಿ ಯುವಕರು ಸ್ಪಲ್ಪ ಮಟ್ಟಿಗಾದರೂ ತೊಡಗಿಸಿಕೊಳ್ಳಬೇಕು. ಸಾಮಾಜಿಕ ಕಾರ್ಯಗಳ ಜೊತೆಗೆ ಧಾರ್ಮಿಕ ಸೇವೆಗಳಲ್ಲಿ ಸಹ ಯುವಕರು ತೊಡಗಿಸಿಕೊಳ್ಳಬೇಕು. ಬಡವರ ಕಣ್ಣೀರನ್ನ ಒರೆಸುವ ಕಾಯಕ ನಮ್ಮಿಂದಾಗಬೇಕು. ಜನರ ಸಂಕಷ್ಟಗಳಿಗೆ ಸಂಘಟನೆಯ ಮೂಲಕ ನೆರವು ನೀಡುವ ಮನೋಭಾವ ಹೆಚ್ಚಾಗಬೇಕಾಗಿದೆ.ಆಗ ದೇವರು ನಮಗೆ ಕಾಣದ ರೂಪದಲ್ಲಿ ಸಹಾಯ ಮಾಡುತ್ತಾನೆ’ ಎಂದರು.ಮುಖ್ಯ ಅತಿಥಿಯಾಗಿ ಮಾತನಾಡಿದ ಪತ್ರಕರ್ತ ಶಂಶೀರ್ ಬುಡೋಳಿ, ’ ರಕ್ತದಾನ ಎಂಬ ಪದಕ್ಕೆ ಮಹತ್ವದ ಅರ್ಥ ಇದೆ. ಜಗತ್ತಿನಲ್ಲಿ ಒಂದು ಕಡೆ ರಕ್ತಕ್ಕಾಗಿ ಹಪಹಪಿಸುವ ಮನುಷ್ಯ ರಾಕ್ಷಸರಿದ್ದಾರೆ. ಇನ್ನೊಂದೆಡೆ ರಕ್ತ ಉಳಿಸುವ ಕಾಯಕ ಮಾಡುವ ಸಹೃದಯಿ ಯುವಕರಿಂದಲೇ ಇವತ್ತು ಸ್ವಾಸ್ಥ್ಯ ಸಮಾಜದ ಹಿತ ಕಾಯಲ್ಪಡುತ್ತಿದೆ. ಬಿಸಿ ರಕ್ತಕ್ಕೆ ಯಾವುದೇ ಜಾತಿ, ಧರ್ಮಗಳಿಲ್ಲ. ಜಾತಿ, ಧರ್ಮ ಮನುಷ್ಯ ನಿರ್ಮಿತ. ಅಂದ್ರೆ ಕೆಂಪು ರಕ್ತ ಹೊಂದಿರುವ ಮನುಷ್ಯರಿಂದಲೇ ಜಾತಿ, ಧರ್ಮ, ದ್ವೇಷ ಸೃಷ್ಟಿಸಿರುವಂತದ್ದು. ಎಷ್ಟೊಂದು ವಿಪರ್ಯಾಸ ಅಲ್ಲವೇ..? ಇಂತಹ ಸಮಾಜದೊಳಗೆ ಜೀವಿಸ್ತಿರೋ ನಮಗೆ ರಕ್ತದ ಮಹತ್ವವನ್ನು ತಿಳಿಸುವ ಅಗತ್ಯವಿದೆ’ ಅಂದರು.ಇನ್ನೋರ್ವ ಮುಖ್ಯ ಅತಿಥಿ ಡಾ.ಮನೋಹರ್ ರೈ ರಕ್ತದಾನದ ಮಾಹಿತಿ ನೀಡಿದರು. ಇದೇ ವೇಳೆ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಅರ್ ಮಾನುದ್ದೀನ್ ದಾವೂದ್ ಅನ್ಸಾರಿ ಹಾಗೂ ಯಶಸ್ವಿಯನ್ನ ಸನ್ಮಾನಿಸಲಾಯಿತು.ಮುಖ್ಯ ಅತಿಥಿಗಳಾಗಿ ಕುಶಲ ಎಂ.ಪೆರಾಜೆ, ಅಝೀಝ್ ಪಾರ್ಪಕಜೆ, ಶಿಕ್ಷಕ ಸಂಜೀವ್ ಮಂಚಿ, ಫೈರೋಝ್ ವಳಚ್ಚಿಲ್, ನೀಲಯ್ಯ ಪೂಜಾರಿ,ಇಬ್ರಾಹಿಂ ರಾಜ್ ಕಮಲ್, ಮುಹಮ್ಮದ್ ಅಶ್ರಫ್ ಸತ್ತಿಕ್ಕಲ್ಲು, ಇಕ್ಬಾಲ್ ಬಿ, ಹಬೀಬ್ ಶೇರ, ವಸಂತ, ಶಂಶೀರ್ ಶೇರಾ ಹಾಗೂ ಅಬ್ದುಲ್ ರಶೀದ್ ಜೋಗಿಬೆಟ್ಟು ಉಪಸ್ಥಿತರಿದ್ದರು.ಅಬ್ದುಲ್ ಮಜೀದ್ ದಾರಿಮಿ ಪ್ರಾರ್ಥನೆಗೈದರು. ಬಿವೈಎಫ್ ಪದಾಧಿಕಾರಿಗಳಾದ ಅಬ್ದುಲ್ ಗಫೂರ್, ರಿಯಾಝ್, ಸುಲ್ತಾನ್, ನೌಫಲ್, ಖಲಂದರ್ ಶಾಫಿ, ಅಶ್ರಫ್, ಹಫೀಝ್, ಖಲಂದರ್, ಇಮ್ರಾನ್, ಮುಹಮ್ಮದ್ ಅಶ್ರಫ್, ಮುಸ್ತಾಫ, ಸಲೀಂ ಬಿ, ಇಕ್ಬಾಲ್, ಮುನೀರ್, ರಾಝಿಕ್, ಅಲ್ತಾಫ್ ಸೇರಿ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು. ೪೩ ಮಂದಿ ರಕ್ತದಾನ ಮಾಡಿ ಮಾದರಿಯಾದರು. ಬಾಸೀತ್ ಸ್ವಾಗತಿಸಿದರು. ಅಶ್ರಫ್ ಅರಬಿ ಕಲ್ಲಡ್ಕ ನಿರೂಪಣೆಗೈದು ವಂದಿಸಿದರು.This post first appeared on V4news, please read the originial post: here

Share the post

ಬಂಟ್ವಾಳ ಬುಡೋಳಿಯಲ್ಲಿ ರಕ್ತದಾನ ಶಿಬಿರ:ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ

×

Subscribe to V4news

Get updates delivered right to your inbox!

Thank you for your subscription

×