Get Even More Visitors To Your Blog, Upgrade To A Business Listing >>

ಭೂತಾರಾಧನೆ,ನಾಗಾರಾಧನೆ ತುಳುವರ ಕೃಷಿಪ್ರದಾನ ಆರಾಧನೆ: ಕಿನ್ಯ-ಬೆಳರಿಂಗೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್

ತುಳುವರು ಕೃಷಿಯೊಂದಿಗೆ ನಂಬಿಕೊಂಡು ಬಂದ ಭೂತಾರಾಧನೆ ಮತ್ತು ನಾಗಾರಾಧನೆಗಳು ತುಳುನಾಡಿನ ಶ್ರೇಷ್ಠ ಆಚರಣೆಗಳಾಗಿದ್ದು,ದೈವಗಳ ಕೊಡಿಯಡಿಯಲ್ಲಿ ಯಾವುದೇ ಧರ್ಮ,ವರ್ಗ ಎಂಬ ಕಟ್ಟುಕಟ್ಟಲೆ ಇಲ್ಲದೆ ಸುಪ್ರೀಂ ಕೋರ್ಟ್‌ನಲ್ಲೂ ಬಗೆಹರಿಯದ ಐವತ್ತಕ್ಕೂ ಹೆಚ್ಚು ವಿವಾದಗಳಿಗೆ ಒಂದು ಗಂಟೆಯಲ್ಲಿ ಪರಿಹಾರ ದೊರೆತ ನಿದರ್ಶನಗಳು ಕಣ್ಣಮುಂದಿದೆಯೆಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

ಅವರು ಕಿನ್ಯ-ಬೆಳರಿಂಗೆ ಶ್ರೀ ಮಲರಾಯ ಧೂಮವತಿ ಬಂಟ ದೈವಗಳ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಲರಾಯ ಧೂಮಾವತಿ ಬಂಟ ದೈವಗಳ ಪುನ:ಪ್ರತಿಷ್ಠೆ ಬ್ರಹ್ಮಕಲಶ ಮತ್ತು ಧರ್ಮನೇಮದ ವೈಧಿಕ ಕಾರ್ಯಕ್ರಮದ ಸಲುವಾಗಿ ಗುರುವಾರ ನಡೆದ ಧಾರ್ಮಿಕ ಸಭಾಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.ಭೂತಾರಾಧನೆ ಮತ್ತು ನಾಗಾರಾಧನೆಗಳು ತುಳುನಾಡಿನ ಶ್ರೇಷ್ಟ ಸಂಸ್ಕೃತಿಯನ್ನು ಬಿಂಬಿಸುವ ಆಚರಣೆಗಳಾಗಿವೆ.ಆದರೆ ಇಂದಿನ ದಿವಸಗಳಲ್ಲಿ ಆಚರಣೆಗಳಲ್ಲಿ ಬಹುತೇಕ ವ್ಯತ್ಯಾಸ ಕಂಡು ಬರುತ್ತಿದೆ.ದೈವಸ್ಥಾನಗಳು ದೇವಸ್ಥಾಗಳಾಗುತ್ತಿವೆ.ದೈವಗಳಿಗೆ ಅದರದೇ ಆದ ಕಟ್ಟುಪಾಡುಗಳಿದ್ದು ಅದರನ್ವಯವೇ ದೈವಗಳ ಸೇವೆ ನಡೆಯಬೇಕೆಂದರು.ತುಳುವರು ಎಂದಿಗೂ ಕೋಮು ಪ್ರತಿಪಾದಕರಲ್ಲ ಎಂಬುದಕ್ಕೆ ಆಲಿ ಎಂಬ ಮುಸ್ಲಿಂ ಯವಕ ಅಪಾರ ದೈವಗಳ ಭಕ್ತನಾಗಿದ್ದು ಭೂತ ಕಟ್ಟುವವನ ಅನುಪಸ್ಥಿತಿಯಲ್ಲಿ ತಾನೇ ಭೂತಕಟ್ಟಿ ಆಲಿಭೂತನಾಗಿದ್ದರೂ ಇಂದಿಗೂ ತುಳುವರು ಆಲಿಯನ್ನು ಮುಸಲ್ಮಾನನೆಂದು ಪರಿಗಣಿಸದೆ ದೈವೀ ಭಕ್ತಿಯಿಂದ ಆರಾಧಿಸುತ್ತಿರುವುದೇ ನಿದರ್ಶನ ಎಂದು ನುಡಿದರು.

ಶ್ರೀ ಕ್ಷೇತ್ರ ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಧಾರ್ಮಿಕ ಸಭಾ ಕಾರ್ಯಕ್ರವನ್ನು ಉದ್ಘಾಟಿಸಿದರು.ಈ ವೇಳೆ ಆಶೀರ್ವಚನ ನೀಡಿದ ಅವರು ನಾವು ಎಂದಿಗೂ ಮನಸ್ಸು ಕೆಡದಂತೆ ಜಾಗೃತಿವಹಿಸಬೇಕು.ಕೆಟ್ಟ ಮನಸ್ಸೇ ಮನುಷ್ಯನ ಶತ್ರು.ಧರ್ಮ ಮತ್ತು ಸಂಸ್ಕೃತಿಗಳು ಒಂದೇ ನಾಣ್ಯದ ಎರಡು ಮುಖಗಳಾಗಿದ್ದು,ದೈವಸ್ಥಾನ,ದೇಗುಲಗಳೇ ಅದರ ಶಕ್ತಿಕೇಂದ್ರಗಳು.ಸಂಸ್ಕೃತಿಯೆಂಬ ಜಲಾಶಯದಲ್ಲಿ ನಾವೆಲ್ಲ ಮೀನುಗಳಂತೆ,ಜಲಾಶಯದಲ್ಲೆಲ್ಲಾ ಈಜಿ ನೀರಿನಲ್ಲಿರುವ ಕೊಳೆ,ಕಲ್ಮಶಗಳನ್ನು ಶುದ್ಧಿಗೊಳಿಸಿದರೆ ನೆಮ್ಮದಿಯ ಬದುಕು ನಮ್ಮದಾಗುವುದೆಂದು ಹಿತವಚನ ನುಡಿದರು.

ಕ್ಷೇತ್ರ ನಿರ್ಮಾಣ ಕಾರ್ಯದಲ್ಲಿ ಅವಿರತ ಸೇವೆ ಸಲ್ಲಿಸಿದ ತಲಪಾಡಿ ದುರ್ಗಾಪರಮೇಶ್ವರೀ ದೇವಸ್ಥಾನದ ಪ್ರದಾನ ಅರ್ಚಕರಾದ ವೇದಮೂರ್ತಿ ಬಾಲಕೃಷ್ಣ ಭಟ್ ಪಂಜಾಲ,ಶ್ರೀ ಮಲರಾಯ ಧೂಮಾವತಿ ಬಂಟ ದೈವಗಳ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಬಾಬು ಶಾಸ್ತ ಕಿನ್ಯ, ಕಾಂಙಗಾಡ್ ಬೆಳ್ಳಿಕೋತ್‌ನ ಶ್ರೀಧರ್ ಜೋತಿಷ್ಯ,ಮುಳ್ಳೇರಿಯದ ಜ್ಯೋತಿಷ್ಯರಾದ ಉನ್ನಿಕೃಷ್ಣನ್,ವಾಸ್ತುಶಿಲ್ಪಿ ರಮೇಶ್ ಕಾರಂತ ಬೇದ್ರಡ್ಕ,ಲೋಹ ಶಿಲ್ಪಿ ವಿ.ನಾರಾಯಣ್,ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.

ಅಖಿಲ ಭಾರತ ಬಿಲ್ಲವರ ಯೂನಿಯನ್ ಕುದ್ರೋಳಿ ಮಂಗಳೂರಿನ ಅಧ್ಯಕ್ಷ ಡಿ.ನವೀನ್‌ಚಂದ್ರ ಸುವರ್ಣ ಸಭಾಧ್ಯಕ್ಷತೆ ವಹಿಸಿದ್ದರು.ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಪ್ರಧಾನ ಅರ್ಚಕರಾದ ಬ್ರಹ್ಮಶ್ರೀ ಅನಂತಪದ್ಮನಾಭ ಅಸ್ರಣ್ಣ,ಹೊಸದಿಗಂತದ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಪಿ.ಎಸ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸಂತೋಷ್ ಕುಮಾರ್ ರೈ ಬೋಳಿಯಾರು, ವಿಶ್ವ ಹಿಂದೂ ಪರಿಷತ್ ಪ್ರಾಂತ್ಯಾಧ್ಯಕ್ಷ ಪ್ರೊ.ಯಂ.ಬಿ ಪುರಾಣಿಕ್,.ಶ್ರೀ ಮಲರಾಯ ಧೂಮಾವತಿ ಬಂಟ ದೈವಗಳ ಚಾರಿಟೇಬಲ್ ಟ್ರಸ್ಟ್‌ನ ಗೌರವಾಧ್ಯಕ್ಷ ಕೆ.ಟಿ ಸುವರ್ಣ, ದಂತ ತಜ್ನ ಡಾ.ಕೃಷ್ಣ ಭಟ್ ಗಂಗರಮಜಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವರದಿ: ದಿನೇಶ್ ತೊಕ್ಕೊಟ್ಟು

The post ಭೂತಾರಾಧನೆ,ನಾಗಾರಾಧನೆ ತುಳುವರ ಕೃಷಿಪ್ರದಾನ ಆರಾಧನೆ: ಕಿನ್ಯ-ಬೆಳರಿಂಗೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ appeared first on V4News.This post first appeared on V4news, please read the originial post: here

Share the post

ಭೂತಾರಾಧನೆ,ನಾಗಾರಾಧನೆ ತುಳುವರ ಕೃಷಿಪ್ರದಾನ ಆರಾಧನೆ: ಕಿನ್ಯ-ಬೆಳರಿಂಗೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್

×

Subscribe to V4news

Get updates delivered right to your inbox!

Thank you for your subscription

×