Get Even More Visitors To Your Blog, Upgrade To A Business Listing >>

ಬಿಸಿಎಂ ಹಾಸ್ಟೆಲ್‌ಗಲಿಗೆ ಶಾಸಕರ ದಿಢೀರ್ ಭೇಟಿ, ಪರಿಶೀಲನೆ. ಅವ್ಯವಸ್ಥೆಗಳನ್ನು ಕೂಡಲೇ ಸರಿಪಡಿಸುವಂತೆ ಸೂಚನೆ.

Tags: agravesup

ಶಾಸಕ ಉಮಾನಾಥ ಕೋಟ್ಯಾನ್ ಅವರು ಮೂಡಬಿದಿರೆಯ ಪ್ರಾಂತ್ಯ ಹಾಗೂ ಲಾಡಿಯಲ್ಲಿರುವ ಹಿಂದುಳಿದ ವರ್ಗಗಳ ಮತ್ತು ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ, ವಿದ್ಯಾರ್ಥಿನಿಲಯಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿದ್ಯಾರ್ಥಿನಿಯರ ಹಾಸ್ಟೆಲ್‌ನ ಒಳಗಡೆ ಮಲಗುವ ಕೋಣೆಯಲ್ಲಿ ಮಳೆ ನೀರು ಸುರಿಯುತ್ತಿರುವುದು ಕಂಡು ಬಂತು. ಜೊತೆಗೆ ಬೆಳಗಿನ ತಿಂಡಿ ಕಳಪೆ ಗುಣಮಟ್ಟದಲ್ಲಿದೆ ಎಂದು ದೂರಿದಾಗ ಅಲ್ಲಿದ್ದ ಸಿಬಂದಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕರು ಎಲ್ಲಾ ಅವ್ಯವಸ್ಥೆಗಳನ್ನು ಕೂಡಲೇ ಸರಿಪಡಿಸುವಂತೆ ವಾರ್ಡನ್‌ಗೆ ಸೂಚಿಸಿದ ಅವರು ಈ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಹೇಳಿದರು.

ನಂತರ ವಿದ್ಯಾರ್ಥಿಗಳ ಹಾಸ್ಟೆಲ್‌ಗೆ ಭೇಟಿ ನೀಡಿದ್ದು ಸ್ವಚ್ಛತೆಯನ್ನು ಕಾಪಾಡುವಂತೆ ಮೇಲ್ವಿಚಾರಕರಿಗೆ ಸೂಚನೆ ನೀಡಿದರು.
ಹಾಸ್ಟೆಲ್‌ನಲ್ಲಿ ನೀರಿನ ಕೊರತೆ ಹಾಗೂ ಟಿ.ವಿ ಕೆಟ್ಟು ಹೋಗಿದ್ದು ಹೊಸ ಟಿ.ವಿ ಒದಗಿಸುವಂತೆ ವಾರ್ಡನ್ ಬೇಡಿಕೆ ಸಲ್ಲಿಸಿದರು. ಇದಕ್ಕೂ ಮೊದಲು ಪ್ರಾಂತ್ಯದಲ್ಲಿರುವ ಬಾಲಕರ ಹಾಸ್ಟೆಲ್‌ಗೆ ಭೇಟಿ ನೀಡಿದ್ದು ಅಲ್ಲಿನ ಶುಚಿತ್ವ ಹಾಗೂ ವಿದ್ಯಾರ್ಥಿಗಳನ್ನು ನೋಡಿಕೊಳ್ಳುತ್ತಿರುವ ರೀತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪುರಸಭಾ ಸದಸ್ಯರಾದ ದಿನೇಶ್ ಪೂಜಾರಿ, ಪ್ರಸಾದ್ ಕುಮಾರ್, ಸ್ಥಳೀಯರಾದ ಮೇಘನಾಥ ಶೆಟ್ಟಿ, ಜೋಯ್ಲಸ್ ಡಿಸೋಜ ತಾಕೋಡೆ ಮತ್ತಿತರರು ಈ ಸಂದರ್ಭದಲ್ಲಿದ್ದರು.



This post first appeared on V4news, please read the originial post: here

Share the post

ಬಿಸಿಎಂ ಹಾಸ್ಟೆಲ್‌ಗಲಿಗೆ ಶಾಸಕರ ದಿಢೀರ್ ಭೇಟಿ, ಪರಿಶೀಲನೆ. ಅವ್ಯವಸ್ಥೆಗಳನ್ನು ಕೂಡಲೇ ಸರಿಪಡಿಸುವಂತೆ ಸೂಚನೆ.

×

Subscribe to V4news

Get updates delivered right to your inbox!

Thank you for your subscription

×