Get Even More Visitors To Your Blog, Upgrade To A Business Listing >>

ಎಸ್‌ಕೆಡಿಆರ್‌ಡಿಪಿ ಮೂಡಬಿದಿರೆ ವಲಯದಿಂದ ಗೇರು ಸಸಿ. ಪ್ರತಿಬಂಧು ಮತ್ತು ಸ್ವಸಹಾಯ ತಂಡದ ಫಲಾನುಭವಿಗಳಿಗೆ ವಿತರಣೆ.

ಮೂಡುಬಿದಿರೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಡುಬಿದಿರೆ ವಲಯ ಇದರ ವತಿಯಿಂದ ಪ್ರತಿಬಂಧು ಮತ್ತು ಸ್ವಸಹಾಯ ತಂಡದ ಫಲಾನುಭವಿಗಳಿಗೆ ಲಾಡಿಗುತ್ತು ಪಾರ್ಶ್ವನಾಥ್ ಬಲ್ಲಾಳ್ ಅವರ ಮನೆಯಲ್ಲಿ ಗೇರು ಸಸಿಗಳನ್ನು ವಿತರಿಸಲಾಯಿತು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೇಂದ್ರ ಸಮಿತಿ ಉಪಾಧ್ಯಕ್ಷ ಸತೀಶ್ ಕೋಟ್ಯಾನ್ ಗೇರು ಸಸಿಗಳನ್ನು ವಿತರಿಸಿದರು.

ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಕೃಷಿ ಅಧಿಕಾರಿ ಶಶಿಕಿರಣ್ ಗೇರುಕೃಷಿಯ ಬಗ್ಗೆ ಮಾಹಿತಿ ನೀಡಿ ಲಾಭದಾಯಕ ಕೃಷಿಯಾಗಿದೆ. ಕಡಿಮೆ ಸಮಯದಲ್ಲಿ ಹೆಚ್ಚಿನ ಇಳುವರಿಯನ್ನು ಗೇರು ಕೃಷಿಯಿಂದ ಪಡೆಯಬಹುದಾಗಿದ್ದು ಇದರಿಂದ ಕೃಷಿಕರು ಅಭಿವೃದ್ಧಿಯನ್ನು ಹೊಂದಲು ಸಾಧ್ಯವಿದೆ ಎಂದರು. ಮೂಡುಬಿದಿರೆ ಒಕ್ಕೂಟದ ಅಧ್ಯಕ್ಷ ಸೋಮನಾಥ ಪೂಜಾರಿ, ಮೂಡುಬಿದಿರೆ ಒಕ್ಕೂಟದ ಸೇವಾ ಪ್ರತಿನಿಧಿ ಅನಿತಾ ಪಿ. ಬಲ್ಲಾಳ್, ಕೊಡಂಗಲ್ಲು ಒಕ್ಕೂಟದ ಸೇವಾ ಪ್ರತಿನಿಧಿ ಮಮತ, ತಾಂತ್ರಿಕ ತರಬೇತುದಾರ ರವಿ ಸುವರ್ಣ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.



This post first appeared on V4news, please read the originial post: here

Share the post

ಎಸ್‌ಕೆಡಿಆರ್‌ಡಿಪಿ ಮೂಡಬಿದಿರೆ ವಲಯದಿಂದ ಗೇರು ಸಸಿ. ಪ್ರತಿಬಂಧು ಮತ್ತು ಸ್ವಸಹಾಯ ತಂಡದ ಫಲಾನುಭವಿಗಳಿಗೆ ವಿತರಣೆ.

×

Subscribe to V4news

Get updates delivered right to your inbox!

Thank you for your subscription

×