Get Even More Visitors To Your Blog, Upgrade To A Business Listing >>

ಮೊಬೈಲ್ ಟವರ್ ಹಾಕಿಸುವ ನೆಪದಲ್ಲಿ ವಂಚನೆ. ವಂಚಿಸುತ್ತಿದ್ದ ವ್ಯಕ್ತಿ ಪೊಲೀಸ್ ಬಲೆಗೆ. ಬಣ್ಣ ಬಣ್ಣದ ಮಾತುಗಳನ್ನಾಡಿ ಜನರನ್ನು ವಂಚಿಸುತ್ತಿದ್ದ ಭೂಪ.

ನಿಮ್ಮ ಜಾಗದಲ್ಲಿ ಮೊಬೈಲ್ ಟವರ್ ನಿರ್ಮಾಣ ಮಾಡುತ್ತೇನೆ. ತಿಂಗಳಿಗೆ 15ರಿಂದ 20ಸಾವಿರ ಹಣ ಮನೆಯಲ್ಲಿ ಕುಳಿತು ಸಂಪಾದನೆ ಮಾಡಲು ಅವಕಾಶವಿದೆ ಎಂದು ಬಣ್ಣದ ಮಾತುಗಳಾಡಿ ಜನರನ್ನು ವಂಚಿಸುತ್ತಿದ್ದ ಆರೋಪಿಯನ್ನು ಕುಂದಾಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಬೆಳಗಾಮ್ ಮೂಲದ ಇಲಿಯಾಸ್ ಪಾಟಾನ್ (55) ಬಂಧಿತ ಆರೋಪಿಯಾಗಿದ್ದು ಈತ ಖಾಸಗಿ ಟವರ್ ಕಂಪೆನಿಯ ಅಧಿಕಾರಿಯೆಂದು ಹಲವೆಡೆ ಜನರನ್ನು ವಂಚಿಸಿದ್ದು ಕುಂದಾಪುರದಲ್ಲಿನ ಒಂದು ಪ್ರಕರಣದಲ್ಲಿ ಆತನನ್ನು ಮಂಗಳವಾರ ಬಂಧಿಸಲಾಗಿದೆ. ಬಂಧಿತ ಆರೋಪಿಯಿಂದ ಆಲ್ಟೋ ಕಾರು, 20ಸಿಮ್, 3.880ರೂ. ನಗದು, ಒಂದು ಮೊಬೈಲ್ ಫೋನ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಕನ್ಯಾನದ ಕಲ್ಲುಕಂಬ ನಿವಾಸಿ ಹಸೈನಾರ್ ಎಂಬ ವೃದ್ಧರೋರ್ವರ ಮನೆಗೆ ಬಂದ ಇಲಿಯಾಸ್ ಪಾಟಾನ್ ತನ್ನನ್ನು ತಾನು ಟವರ್ ಕಂಪೆನಿ ಅಧಿಕಾರಿಯೆಂದು ಪರಿಚಯಿಸಿಕೊಂಡು ತಮ್ಮ ಮನೆಯ ಜಾಗದಲ್ಲಿ ಟವರ್ ನಿರ್ಮಾಣಕ್ಕೆ ಅನುಮತಿ ಕೊಟ್ಟಲ್ಲಿ ಟವರ್ ನಿರ್ಮಿಸಲಿದ್ದು ಇದರಿಂದ ಮಾಸಿಕ ತಮಗೆ15 ಸಾವಿರ ಆದಾಯ ಬರಲಿದೆ.  ತಾವು ಒಪ್ಪಿದಲ್ಲಿ ತಹಶಿಲ್ದಾರ್ ಕಚೇರಿಯಲ್ಲಿ ಜಾಗದ ರಿಜಿಸ್ಟ್ರೇಶನ್ ಕೆಲಸ ಮಾಡುವೆ, ಇದಕ್ಕೆ ಸ್ವಲ್ಪ ಹಣ ಖರ್ಚಾಗಲಿದೆ ಎಂದು ಜಾಗದ ಆರ್.ಟಿ.ಸಿ. ಸಮೇತ ಕುಂದಾಪುರದ ಮಿನಿ ವಿಧಾನಸೌಧಕ್ಕೆ ಅವರನ್ನು ಕರೆತಂದಿದ್ದ. ಇದೇ ವೇಳೆ ರಿಜಿಸ್ಟ್ರೇಶನ್ ಖರ್ಚಿಗೆ 7 ಸಾವಿರ ಹಣ ಹಾಗೂ ಕರೆ ಮಾಡಿಕೊಡುವುದಾಗಿ ಹಸೈನಾರ್ ಮೊಬೈಲ್ ಫೋನ್ ಪಡೆದು ದಾಖಲೆಗಳನ್ನು ಟೈಪ್ ಮಾಡಿಸಿ ತರುವುದಾಗಿ ನಂಬಿಸಿ ಅವರನ್ನು ಅಲ್ಲಿಯೇ ಬಿಟ್ಟು ತೆರಳಿದ್ದ. ಕೆಲವು ಗಂಟೆಯಾದರೂ ಆ ಅಪರಿಚಿತನ ಪತ್ತೆಯಾಗದ ಹಿನ್ನೆಲೆ ತಾನು ಮೋಸ ಹೋಗಿದ್ದು ತಿಳಿದ ಹಸೈನಾರ್ ಮನೆಗೆ ವಾಪಾಸ್ಸಾಗಿದ್ದು ವೃದ್ಧರಾದ ಹಿನ್ನೆಲೆ ದೂರು ದಾಖಲಿಸಿರಲಿಲ್ಲ. ಕುಂದಾಪುರ ಡಿವೈಎಸ್ಪಿ ದಿನೇಶ್ ಕುಮಾರ್ ಬಿ.ಪಿ. ಮಾರ್ಗದರ್ಶನದಲ್ಲಿ ಸಿಪಿಐ ಮಂಜಪ್ಪ ನೇತೃತ್ವದಲ್ಲಿ ಠಾಣಾಧಿಕಾರಿ ಹರೀಶ್ ಆರ್. ನಾಯ್ಕ್., ಕ್ರೈಮ್ ವಿಭಾಗದ ಪಿಎಸ್‌ಐ ರಮೇಶ್ ಪವಾರ್, ಎ.ಎಸ್.ಐ ಸುಧಾಕರ, ಹೆಡ್‌ಕಾನ್ಸ್‌ಟೇಬಲ್‌ಗಳಾದ ವೆಂಕಟರಮಣ, ಚಂದ್ರಶೇಖರ್, ಸುಬ್ಬಣ್ಣ ಶೆಟ್ಟಿ, ಜಗನ್ನಾಥ, ಜೋಸೆಫ್, ಸಿಬ್ಬಂದಿಗಳಾದ ಚೇತನ್, ಪ್ರಸನ್ನ, ಮಂಜುನಾಥ, ನಾಗರಾಜ್, ಪ್ರವೀಣ್ ಮೊದಲಾದವರು ಈ ಕಾರ್ಯಾಚರಣೆಯಲ್ಲಿದ್ದರು.This post first appeared on V4news, please read the originial post: here

Share the post

ಮೊಬೈಲ್ ಟವರ್ ಹಾಕಿಸುವ ನೆಪದಲ್ಲಿ ವಂಚನೆ. ವಂಚಿಸುತ್ತಿದ್ದ ವ್ಯಕ್ತಿ ಪೊಲೀಸ್ ಬಲೆಗೆ. ಬಣ್ಣ ಬಣ್ಣದ ಮಾತುಗಳನ್ನಾಡಿ ಜನರನ್ನು ವಂಚಿಸುತ್ತಿದ್ದ ಭೂಪ.

×

Subscribe to V4news

Get updates delivered right to your inbox!

Thank you for your subscription

×