Get Even More Visitors To Your Blog, Upgrade To A Business Listing >>

ಇದು ಉತ್ತರ ಕರ್ನಾಟಕ ಅಲ್ಲ..ಬುದ್ದಿವಂತರ ನಾಡು ಉಡುಪಿ. ಕೀಕೀ ಚಾಲೆಂಜ್ ಗಿಂತಲೂ ಅಪಾಯಕಾರಿ ಈ ಮಕ್ಕಳ ಪ್ರಯಾಣ. ವಿದ್ಯಾರ್ಥಿಗಳ ಭವಿಷ್ಯ ಪುಟ್ ಬೋರ್ಡಿನಲ್ಲಿ.

 ಬಸ್ಸು ತುಂಬಾ ಜನ..ವಿದ್ಯಾರ್ಥಿಗಳು ಸೀಟಿನಲ್ಲಿರದೇ ಫುಟ್ ಬೋರ್ಡ್ ನಲ್ಲಿ ನೇತಾಟ…ಇದು ಕೀಕೀ ಚಾಲೆಂಜ್ ಗಿಂತಲೂ ಅಪಯಾಕಾರಿ..ಸ್ವಲ್ಪ ಆಯ ತಪ್ಪಿದರೆ ಪ್ರಾಣ ಹೋಗೂದು ಗ್ಯಾರಂಟಿ.ಇಂತಹ ಒಂದು ಅಪಾಯಕಾರಿ ಮಕ್ಕಳ ಶಾಲೆಯ ಪ್ರಯಾಣ ಎಲ್ಲಿ ಅಂತೀರಾ? ಇಲ್ಲಿದೆ ನೋಡಿ ವರದಿಈ ದೃಶ್ಯ ನೋಡ್ತಾ ಇದ್ರೆ ಯಾವ ಮಕ್ಕಳ ಹೆತ್ತಂದರಿಗೂ ಕರಳು ಚುರುಕ್ ಎನ್ನದೇ ಇರಲಿಕ್ಕಿಲ್ಲ. ಬಸ್ ನಲ್ಲಿ ಮಕ್ಕಳು ಹೋಗ್ತಾ ಇದ್ದಾರೆ ಅಂತ ಪೋಷಕರು ಆರಾಮವಾಗಿದ್ದರೆ ಒಮ್ಮೆ ಇಲ್ಲಿ ಗಮನಿಸಿ.

ನಿಮ್ಮ ಮಕ್ಕಳ ಭವಿಷ್ಯ ಪುಸ್ತಕದಲ್ಲಿಲ್ಲ. ಬಸ್ ನ ಫುಟ್ ಬೋರ್ಡ್ ನಲ್ಲಿ ಇದೆ ಅಂದ್ರೆ ನಿಮಗೆ ಆಶ್ಚರ್ಯವಾಗುದಂತೂ ಇಂತಹ ದೃಶ್ಯಗಳು ಯಾವುದೋ ಉತ್ತರ ಕರ್ನಾಟಕದ್ದಲ್ಲ. ಸುಶಿಕ್ಷಿತರ ನಾಡು ಎಂದು ಕರೆಯಲ್ಪಡುವ ಉಡುಪಿಯದ್ದು.ಇತ್ತೀಚಿಗೆ ಬಂದಿರುವ ಕೀಕೀ ಚಾಲೆಂಜಂತೂ ಇದಲ್ಲ. ಆದ್ರೆ ವಿದ್ಯಾರ್ಥಿಗಳ ಭವಿಷ್ಯದ ಚಾಲೆಂಜಂತೂ ಸತ್ಯ. ಸ್ವಲ್ಪ ಯಾಮಾರಿದ್ರೆ ವಿದ್ಯಾರ್ಥಿಗಳು ಬಸ್ಸಿನಡಿ ಬಿದ್ದು ಪ್ರಾಣ ಕಳೆದುಕೊಳ್ಳುವುದಂತೂ ಸತ್ಯ. ಬೆಳಗ್ಗೆ ಶಾಲೆಗೆ ಹೋಗುವ ಸಮಯದಲ್ಲಿ ಇಂತಹ ದೃಶ್ಯಗಳು ಉಡುಪಿಯಲ್ಲಿ ಮಾಮೂಲಾಗಿದೆ. ಖಾಸಗೀ ಬಸ್ ನಲ್ಲಿ ಬಸ್ ನವರ ನಿರ್ಲಕ್ಷ್ಯ ತನವೂ ಇದಕ್ಕೆ ಕಾರಣವಾಗಿದೆ. ಜನ್ ರಶ್ ಆದ್ರೂ ಸಹ ಮತ್ತೆ ಮತ್ತೆ ಜನರನ್ನ ಬಸ್ ಗೆ ಆಹ್ವಾನಿಸುತ್ತಾರೆ. ನಗರ ಪ್ರದೇಶದಲ್ಲಿ ಮಾತ್ರವಲ್ಲ ಗ್ರಾಮೀಣ ಪ್ರದೇಶದಲ್ಲೂ ಈ ಸಮಸ್ಯೆ ಹೆಚ್ಚಾಗಿದೆ. ಕಾರಣ ಸಮಯ ಸಮಯಕ್ಕೆ ಬಸ್ ಇಲ್ಲದೇ ಇರುವುದು. ಮಿತಿ ಮೀರಿ ಬಸ್ ನಲ್ಲಿ ಪ್ರಯಾಣಿಕರನ್ನು ತುಂಬಿಸಿವುದು ಮಕ್ಕಳ ಪಾಲಿಗೆ ಅಪಾಯಕಾರಿಯಾಗಿದೆ. ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿಗಳ ಕಣ್ಣ ಎದುರೇ ನಡೆಯುತ್ತಿದ್ದರೂ ಅವರು ಸುಮ್ಮನೆ ಕುಳಿತಿದ್ದಾರೆ. ಬಸ್ ರೂಟ್ ಹೆಚ್ಚಿಸುವುದು ಮತ್ತು ಗ್ರಾಮೀಣ ಭಾಗಕ್ಕೆ ಸರಕಾರಿ ಬಸ್ ಗಳನ್ನು ಓಡಿಸುವುದು ಇದಕ್ಕಿರುವ ಮಾರ್ಗವಾಗಿದೆ. ಇನ್ನು ವಿದ್ಯಾರ್ಥಿಗಳು ಸಹ ಮೋಜಿಗಾಗಿ ಫುಟ್ ಬೋರ್ಡ್ ನಲ್ಲಿ ನಿಲ್ಲುವ ಪ್ರಸಂಗವೂ ಎದುರಾಗಿದೆ. ಈ ಬಗ್ಗೆ ಮಕ್ಕಳಿಗೆ ತಿಳಿಹೇಳುವ ಕೆಲಸನೂ ಆಗಬೇಕಿದೆ. ಮಕ್ಕಳ ಭೈವಿಷ್ಯಕ್ಕಾಗಿ ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳಬೇಕು ಎಂಬುದು ಸಾಮಾಜಿಕ ಕಾರ್ಯಕರ್ತರ ಆಗ್ರಹವಾಗಿದೆ.This post first appeared on V4news, please read the originial post: here

Share the post

ಇದು ಉತ್ತರ ಕರ್ನಾಟಕ ಅಲ್ಲ..ಬುದ್ದಿವಂತರ ನಾಡು ಉಡುಪಿ. ಕೀಕೀ ಚಾಲೆಂಜ್ ಗಿಂತಲೂ ಅಪಾಯಕಾರಿ ಈ ಮಕ್ಕಳ ಪ್ರಯಾಣ. ವಿದ್ಯಾರ್ಥಿಗಳ ಭವಿಷ್ಯ ಪುಟ್ ಬೋರ್ಡಿನಲ್ಲಿ.

×

Subscribe to V4news

Get updates delivered right to your inbox!

Thank you for your subscription

×