Get Even More Visitors To Your Blog, Upgrade To A Business Listing >>

ಭಯದ ವಾತಾವರಣ ಸೃಷ್ಟಿಸಿದ ಮಾನಸಿಕ ಯುವತಿ. ಸಾಮಾಜಿಕ ಕಾರ್ಯಕರ್ತರಿಂದ ರಕ್ಷಣೆ.

ಉಡುಪಿ ಜಿಲ್ಲೆಯ ಹಿರಿಯಡ್ಕದ ಪರಿಸರದಲ್ಲಿ ಸುಮಾರು 26 ವರ್ಷದ ಮಾನಸಿಕ ಅಸ್ವಸ್ಥಗೊಂಡು ನಾಗರಿಕ ಸಮಾಜದಲ್ಲಿ ಅನಾಗರಿಕ ಬದುಕು ಸಾಗಿಸುತ್ತಿದ್ದ ಯುವತಿಯೊರ್ವಳನ್ನು ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ರಕ್ಷಿಸಿ ಕಾಸರಗೋಡು ದೈಗೋಳಿ ಇಲ್ಲಿಯ ಶ್ರೀಸಾಯಿ ಸೇವಾ ಮಹಿಳಾ ಪುರ್ನವಸತಿ ಕೇಂದ್ರದಲ್ಲಿ ನೆಲೆ ಕಲ್ಪಿಸಿದ ಘಟನೆ ನಡೆದಿದೆ.ಯುವತಿ ಒಂತಿಬೆಟ್ಟು ಪರಿಸರದವಳೆಂದು ತಿಳಿದು ಬಂದಿದೆ. ಕೆಲವು ವರ್ಷಗಳಿಂದ ಮಾನಸಿಕ ವ್ಯಾಧಿಗೆ ತುತ್ತಾದ ಯುವತಿ ಸಾರ್ವಜನಿಕ ಸ್ಥಳಗಳಲ್ಲಿ ನೆಲೆಕಂಡಿದ್ದಳು. ಅರೆ ಬರೆ ಬಟ್ಟೆಯಲ್ಲಿ ಹಗಲು ರಾತ್ರಿ ಸುತ್ತಾಡಿ ಕೊಂಡಿದ್ದಳು. ಆಕೆಯಿಂದ ಶಾಂತಿಭಂಗ ಪ್ರಕ್ರಿಯೆಗಳು ನಡೆಯುತಿತ್ತು. ಪರಿಸರದಲ್ಲಿ ಭಯದ ವಾತಾವರಣವು ಎದುರಾಗಿತ್ತು. ಈ ಬಗ್ಗೆ ಸ್ಥಳಿಯರು, ಕಾಲೇಜು ವಿದ್ಯಾರ್ಥಿಗಳು ಸಮಸ್ಯೆಯನ್ನು ವಿಶು ಶೆಟ್ಟಿ ಅವರಲ್ಲಿ ಕೆಲವು ದಿನಗಳ ಹಿಂದೆ ಹೇಳಿಕೊಂಡಿದ್ದರು. ಎಂದು ಮಾಹಿತಿ ಲಭ್ಯವಾಗಿದೆ.ಸ್ಥಳಿಯರ ದೂರುಗಳಿಗೆ ಸ್ಪಂದಿಸಿದ ವಿಶು ಶೆಟ್ಟಿ ಅವರು ಸ್ಥಳಕ್ಕೆ ಭೇಟಿ ನೀಡಿ, ಸಮಸ್ಯೆಯನ್ನು ಪರಿಶೀಲಿಸಿದ್ದಾರೆ. ಮಾಹಿತಿ ದೂರನ್ನು ಮಹಿಳಾ ರಕ್ಷಣಾ ಘಟಕದ ಅಧಿಕಾರಿಗಳಿಗೆ ನೀಡಿದ್ದರು. ಇಲಾಖೆಯವರು ಸ್ಪಂದಿಸುವುದಾಗಿ ಹೇಳಿದ್ದರೆಂದು ವಿಶು ಶೆಟ್ಟಿ ಅವರು ತಿಳಿಸಿದ್ದಾರೆ.ಅಗಸ್ಟ್ 15 ರಂದು ಹಿರಿಯಡ್ಕದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ವಿಶು ಶೆಟ್ಟಿ ಅವರು ಭಾಗವಹಿಸಿ ಬರುವಾಗ, ಅವರಿಗೆ ಯುವತಿ ಹಿರಿಯಡ್ಕ ಪರಿಸರದಲ್ಲಿ ಉಗ್ರರೀತಿಯಲ್ಲಿ ವರ್ತಿಸುವುದು ಕಂಡು ಬಂದಿದೆ. ಯುವತಿಯ ಬಗ್ಗೆ ನೀಡಿದ ದೂರಿಗೂ ಮಹಿಳಾ ರಕ್ಷಣಾ ಘಟಕ ಸ್ಪಂದಿಸಿಲ್ಲ ಎಂದು ವಿಶು ಶೆಟ್ಟಿ ಅವರಿಗೆ ತಿಳಿದು ಬಂದಿದೆ.ನೊಂದ ಯುವತಿಗೆ ಮಹಿಳಾ ರಕ್ಷಣಾ ಘಟಕ ಸ್ಪಂದಿಸದೇ ಇದ್ದ ಕಾರಣದಿಂದ, ಸ್ವತಃ ಸಮಾಜಸೇವಕ ವಿಶು ಶೆಟ್ಟಿ ಅವರೇ ಯುವತಿಯ ರಕ್ಷಣಾ ಕಾರ್ಯಚರಣೆಗೆ ಮುಂದಾಗಿದ್ದಾರೆ. ಮೊದಲು ನಗರ ಮಹಿಳಾ ಠಾಣೆಗೆ ಮಾಹಿತಿ ನೀಡಿದ್ದಾರೆ. ಖಾಸಗಿ ಅಂಬುಲೇನ್ಸ್ ಸ್ಥಳದಲ್ಲಿ ನಿಯೋಜನೆಗೊಳಿಸಿದ್ದಾರೆ. ಯುವತಿಯನ್ನು ವಶಕ್ಕೆ ಪಡೆಯಲು ಮುಂದಾದಾಗ ಹಲ್ಲೆಗೆ ಮುಂದಾಗಿದ್ದಾಳೆ. ಮಹಿಳಾ ಪೊಲೀಸರ ಮೂಲಕ ಕೊನೆಗೂ ಆಕೆಯನ್ನು ವಶಕ್ಕೆ ಪಡೆದು ಅಂಬುಲೇನ್ಸ್ ಹತ್ತಿಸಿದ್ದಾರೆ. ಎ.ಎಸ್.ಐ ಮುಕ್ತ, ಹೆಡ್ ಕಾನ್ಸೇಟೆಬಲ್ ಪದ್ಮ, ವರದಿಗಾರ ಶ್ರೀಕಾಂತ್ ಶೆಟ್ಟಿ, ಅಣ್ಢಪ್ಪ, ಸಹಕರಿಸಿದ್ದಾರೆ.ಯುವತಿಯನ್ನು ಪೊಲೀಸರ ಉಪಸ್ಥಿತಿಯಲ್ಲಿ ವಿಶು ಶೆಟ್ಟಿ ಅವರು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಕರೆತಂದಿದ್ದಾರೆ. ಡಾ.ನಾಗೇಶ್ ಅವರ ಮೂಲಕ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಆ ಬಳಿಕ ಮಂಜೇಶ್ವರ ದೈಗುಳಿಯಲ್ಲಿ ಇರುವ ಮಹಿಳಾ ಪುರ್ನವಸತಿ ಕೇಂದ್ರಕ್ಕೆ ಕರೆದುಕೊಂಡು ಹೋಗಿ ದಾಖಲು ಪಡಿಸಿದ್ದಾರೆ.ಯುವತಿಯ ರಕ್ಷಣಾ ಕಾರ್ಯಚರಣೆಗೆ ಬಂದ ಅಣ್ಣಪ್ಪ ಇವರಿಗೆ ಯುವತಿಯು ಕಚ್ಚಿ ಗಾಯಗೊಳಿಸಿರುತ್ತಾರೆ.ಎರಡು ವರ್ಷಗಳಲ್ಲಿ ಅಸಹಾಯಕ ಯುವತಿಯರ ರಕ್ಷಣೆಯ ಬಗ್ಗೆ ಬಹಳಷ್ಟು ದೂರುಗಳು ನೀಡಿದರೂ ಇಲಾಖೆಯಿಂದ ಸ್ಪಂದನೆ ದೊರೆತಿಲ್ಲ. ಎರಡು ವರ್ಷದಲ್ಲಿ ನೂರಕ್ಕೂ ಅಧಿಕ ಯುವತಿಯರನ್ನು ಮಹಿಳೆಯರನ್ನು ರಕ್ಷಿಸಲಾಗಿದೆ. ಮಹಿಳಾ ಪೊಲೀಸ್ ಹಾಗೂ ಮಹಿಳಾ ಸಹಾಯವಾಣಿ ನಮ್ಮ ಸಹಾಯಕ್ಕೆ ಬಂದಿದೆ. ಉಡುಪಿಯ ಮಹಿಳಾ ರಕ್ಷಣಾ ಘಟಕ ನಿರ್ಜೀವ ಸ್ಥಿತಿಯಲ್ಲಿದೆ ಎಂದು ವಿಶು ಶೆಟ್ಟಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ.ವಿಶುಶೆಟ್ಟಿಯವರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮುಕ್ತ ಶ್ಲಾಘನೆ ವ್ಯಕ್ತವಾಗಿದೆ. ಅಸಹಾಯಕ ಯುವತಿಗೆ ಆಶ್ರಯ ನೀಡಿದ ಆಶ್ರಮಕ್ಕೆ ವಿಶುಶೆಟ್ಟಿಯವರ ಅಭಿಮಾನಿ ಉಡುಪಿಯ ಅಂಬಲಪಾಡಿಯ ಕಾಲೆಜು ವಿಧ್ಯಾರ್ಥಿನಿ ಶಿವಾನಿಯವರು 10,000ರೂ.ಯನ್ನು ನೀಡಿ ಮಾನವಿಯತೆ ಮೆರೆದಿದ್ದಾರೆ.ಜಿಲ್ಲೆಯಲ್ಲಿ ಇಂತಹ ಅನೇಕ ಅಸಹಾಯಕ ಯುವತಿಯರು ಜೀವನದಲ್ಲಿ ನೊಂದು ಬೆಂದು ಬೀದಿಯಲ್ಲಿ ಕಂಡು ಬರುತ್ತಿದ್ದಾರೆ. ಪ್ರತಿಯೊಂದು ಸಮಸ್ಯೆಗೂ ಸ್ಪಂದಿಸಲು ಸರಕಾರದ ಇಲಾಖೆಗಳಿವೆ. ಯಾವೊಂದು ಸಮಸ್ಯೆಗಳಿಗೂ ಸ್ಪಂದಿಸದೆ ಸರಕಾರದಿಂದ ಪುಕ್ಕಟ್ಟೆ ವೇತನ ಪಡೆಯುವ ಅಧಿಕಾರಿಗಳು ಇಲಾಖೆಯಲ್ಲಿ ಹೆಚ್ಚಾಗಿದ್ದಾರೆ. ಪ್ರಮಾಣಿಕ ಅಧಿಕಾರಿಗಳ ಸಂಖ್ಯೆ ಕುಸಿದಿದೆ. ಸರಕಾರವು ಇಲಾಖಾ ಅವ್ಯವಸ್ಥೆಗಳನ್ನು ಸುವ್ಯವಸ್ಥೆಗೊಳಿಸಬೇಕಾಗಿದೆ. ಜಿಲ್ಲೆಯಲ್ಲಿ ನೆಲೆಸಿರುವ ಅಸಹಾಯಕ ಮಹಿಳೆಯರಿಗೆ ಇಂತಹ ಪರಿಸ್ಥಿತಿಯಾದರೆ ಇನ್ನು ಹೊರ ಜಿಲ್ಲೆ , ರಾಜ್ಯಗಳಿಂದ ಬರುವ ಅಸಹಾಯಕ ಮಹಿಳೆಯರ ಪರಿಸ್ಥಿತಿ ಏನು? ಇನ್ನು ಮುಂದಾದರು ಜಿಲ್ಲೆಯಲ್ಲಿ ಇಂತಹ ಸಮಸ್ಯೆಗಳು ಕಂಡುಬಂದಾಗ ಶೀಘ್ರವಾಗಿ ಸ್ಪಂದಿಸುವ ವ್ಯವಸ್ಥೆಗಳು ಬರಲಿ. ಜೋತೆಗೆ ನಮ್ಮ ಜಿಲ್ಲೆಯಗೆ ಬೇಕಾಗುವ ಮೂಲಭೂತ ಸೌಲಭ್ಯಗಳು ಜಿಲ್ಲೆಯಲ್ಲಿಯೇ ದೊರೆಯುವಂತಾಗಲಿ.This post first appeared on V4news, please read the originial post: here

Share the post

ಭಯದ ವಾತಾವರಣ ಸೃಷ್ಟಿಸಿದ ಮಾನಸಿಕ ಯುವತಿ. ಸಾಮಾಜಿಕ ಕಾರ್ಯಕರ್ತರಿಂದ ರಕ್ಷಣೆ.

×

Subscribe to V4news

Get updates delivered right to your inbox!

Thank you for your subscription

×