Get Even More Visitors To Your Blog, Upgrade To A Business Listing >>

ಮಂಗಳೂರಿನ ಮೇರಿಹಿಲ್‌ನಲ್ಲಿರುವ ವಿಕಾಸ್ ಕಾಲೇಜಿನಲ್ಲಿ ಮಂಗಳೂರು ನಗರ ಪೋಲೀಸ್ ಮತ್ತು ವಿಜಯ ಕರ್ನಾಟಕ ಇದರ ಸಹಭಾಗಿತ್ವದಲ್ಲಿ “ಮಾದಕ ವ್ಯಸನ ಮುಕ್ತ” ದಿನವನ್ನು ಆಚರಿಸಲಾಯಿತು.

ಆಸರೆ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷೆ ಡಾ. ಆಶಾಜ್ಯೋತಿ ರೈ ರವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಾ ಪ್ರಗತಿಪರ ದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ ಮಾದಕದ್ರವ್ಯಗಳ ವ್ಯಸನವು ಸಮಾಜದ ಅಭಿವೃದ್ಧಿಗೆ ಮಾರಕವಾಗಿ ಪರಿಣಮಿಸುತ್ತಿದೆ. ಮಾದಕವ್ಯಸನಿಗಳನ್ನು ರೋಗಿಗಳಾಗಿ ಗುರುತಿಸಬೇಕೇ ಹೊರತು ಅಪರಾಧಿಗಳನ್ನಾಗಿ ನೋಡಬಾರದು. ಇದನ್ನು ಹತ್ತಿಕ್ಕಲು ದೇಶದ ಪ್ರತಿಯೊಬ್ಬ ಪ್ರಜೆಯು ಸೇ ನೋ ಟು ಡ್ರಗ್ಸ್, ಸೇ ಎಸ್ ಟು ಲೈಫ಼್ ಎಂದು ಹೇಳಿ ವಿದ್ಯಾರ್ಥಿಗಳೊಂದಿಗೆ ಸಂವಾದ ಮಾಡಿದರು.

ಶ್ರೀ ಕೆ ರಾಮರಾವ್ ಅಸಿಸ್ಟೆಂಟ್ ಕಮಿಷನರ್ ಆಫ಼್ ಪೋಲೀಸ್ ದಕ್ಷಿಣ ವಲಯ ಮಂಗಳೂರು ಇವರು ಮಾತನಾಡಿ ಮಾದಕ ವ್ಯಸನವು ಸಮಾಜದ ಬುನಾದಿಯನ್ನು ಶಿಥಿಲ ಗೊಳಿಸುತ್ತಿದೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಕರನ್ನು ಪಾಲಕರಂತೆ ಪರಿಗಣಿಸಿ ವ್ಯಸನಮುಕ್ತರಾಗಿ ಸಂತೋಷದ ಜೀವನವನ್ನು ಸಾಗಿಸಬೇಕೆಂದು ಹೇಳಿದರು.ಕಾಲೇಜಿನ ಸಂಚಾಲಕರಾದ ಡಾ. ಡಿ. ಶ್ರೀಪತಿರಾವ್, ಟ್ರಸ್ಟಿ ಜೆ ಕೊರಗಪ್ಪ, ಕಂಕನಾಡಿ ಆರಕ್ಷಕ ಠಾಣೆಯ ಸಬ್ ಇನ್ಸ್ ಪೆಕ್ಟರ್ ಪ್ರದೀಪ್ ಟಿ.ಆರ್, ವಿಜಯಕರ್ನಾಟಕ ಪತ್ರಿಕೆಯ ಉಪ ಸಂಪಾದಕರಾದ ಶ್ರೀ ರವೀಂದ್ರ, ಕಾಲೇಜಿನ ಪ್ರಾಂಶುಪಾಲ ಪ್ರೊ. ಟಿ ರಾಜಾರಾಮ್ ರಾವ್, ಉಪನ್ಯಾಸಕ ಶ್ರೀ ಲಕ್ಷ್ಮೀಶ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.This post first appeared on V4news, please read the originial post: here

Share the post

ಮಂಗಳೂರಿನ ಮೇರಿಹಿಲ್‌ನಲ್ಲಿರುವ ವಿಕಾಸ್ ಕಾಲೇಜಿನಲ್ಲಿ ಮಂಗಳೂರು ನಗರ ಪೋಲೀಸ್ ಮತ್ತು ವಿಜಯ ಕರ್ನಾಟಕ ಇದರ ಸಹಭಾಗಿತ್ವದಲ್ಲಿ “ಮಾದಕ ವ್ಯಸನ ಮುಕ್ತ” ದಿನವನ್ನು ಆಚರಿಸಲಾಯಿತು.

×

Subscribe to V4news

Get updates delivered right to your inbox!

Thank you for your subscription

×