Get Even More Visitors To Your Blog, Upgrade To A Business Listing >>

ರಾಷ್ಟ್ರದ ಅಭಿವೃದ್ದಿಗೆ ಯುವ ಸಮೂಹದ ಕೊಡುಗೆ ಅಗತ್ಯ: ಕಾಸರಗೋಡಿನಲ್ಲಿ ಸ್ವಾಮಿ ವಿವಿಕ್ತಾನಂದ ಅಭಿಪ್ರಾಯ

ಕಾಸರಗೋಡು: ರಾಷ್ಟ್ರದ ಸಮಗ್ರ ಅಭಿವೃದ್ದಿಗೆ ಯುವ ಸಮೂಹದ ಕೊಡುಗೆಯನ್ನು ಗುರಿಯಾಗಿಸಿ ಕೇಂದ್ರ ಸರಕಾರ ವಿವಿಧ ಆಯಾಮಗಳಲ್ಲಿ ಯೋಜನೆಗಳಿಗೆ ರೂಪು ನೀಡುತ್ತಿರುವುದು ಸ್ವಾಗತಾರ್ಹವೆಂಬುದಾಗಿ ಕಾಸರಗೋಡು ಚಿನ್ಮಯಾ ಮಿಷನ್ ಅಧ್ಯಕ್ಷ ಸ್ವಾಮಿ ವಿವಿಕ್ತಾನಂದ ಹೇಳಿದರು.

ಕೇಂದ್ರ ಕಾರ್ಮಿಕ ಉದ್ಯೋಗ ಸಚಿವಾಲಯದ ನೇತೃತ್ವದಲ್ಲಿ ಕಾಸರಗೋಡಿನ ವಿವೇಕಾನಂದ ಎಜ್ಯುಕೇಶನಲ್ ಮತ್ತು  ಚ್ಯಾರಿಟೇಬಲ್  ಟ್ರಸ್ಟ್ ಮತ್ತು ಯುವ ಕಿರಣ್ ಸಂಘಟನೆಗಳ ಸಹಕಾರದೊಂದಿಗೆ ವಿದ್ಯಾನಗರದ ಚಿನ್ಮಯಾ ಮಿಷನ್ ಪರಿಸರದಲ್ಲಿ ಆಯೋಜಿಸಲಾಗಿದ್ದ ಬೃಹತ್ ಉದ್ಯೋಗ ಮೇಳವನ್ನು  ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಉದ್ಯೋಗ ಇಂದು ತೀವ್ರ ಕಳವಳಕಾರಿ ಹಂತದಲ್ಲಿ ಹಳ್ಳಿಯವರಿಗೆ ಲಭಿಸದಿರುವ ಸ್ಥಿತಿಯಿದೆ.ಈ ನಿಟ್ಟಿನಲ್ಲಿ ಪ್ರಧಾನಿಗಳು ದೂರದೃಷ್ಟಿಯಿಂದ ಸಂಘಟಿಸುವ ಉದ್ಯೋಗ ಮೇಳಗಳು ಹೊಸ ಆಶಾಕಿರಣವಾಗಿದೆ ಎಂದವರು ತಿಳಿಸಿದರು.ಜೆ‌ಎನ್‌ಯು ವಿವಿ ಹಾಗೂ ಹೈದರಾಬಾದ್ ಘಟನೆಯನ್ನು ನೆನಪಿಸಿದ ಅವರು ಆಂತರಿಕ ರಾಜಕೀಯ ಮಣ್ಣೆರಚಾಟಗಳ ಮೂಲಕ ಸಣ್ಣ ಘಟನೆಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಕೆಟ್ಟದಾಗಿ ಚಿತ್ರಿಸುವಂತೆ ರಾಜಕೀಯ ಪಕ್ಷಗಳು ಯತ್ನಿಸುತ್ತಿರುವುದು ಖಂಡನೀಯ.ಇದರಿಂದ ನಮ್ಮ ದೇಶದ ಮಾನ ಮೂರಾಬಿಟ್ಟಿಯಾಗುವುದನ್ನು ಗಮನಿಸಬೇಕೆಂದು ಅವರು ತಿಳಿಸಿದರು.ದೀರ್ಘ ಕಾಲೀನ ಚಿಂತನೆಗಳ ಮೂಲಕ ನಮ್ಮಿಂದಿನ ಪ್ರಧಾನಿಗಳ ದೂರದರ್ಶಿತ್ವವನ್ನು ಅರ್ಥೈಸಿಕೊಂಡು ಯುವ ಸಮೂಹ ಅಭಿವೃದ್ದಿ  ಯತ್ತ ಮುನ್ನಡೆಯಬೇಕೆಂದು ಅವರು ತಿಳಿಸಿದರು.

ಉದ್ಯೋಗ ಮೇಳದಲ್ಲಿ ಐದು ಸಾವಿರಕ್ಕಿಂತಲೂ ಹೆಚ್ಚು ಆಕಾಂಕ್ಷಿಗಳು ಪಾಲ್ಗೊಂಡರು.ಜಿಲ್ಲೆಯ ವಿವಿಧೆಡೆಗಳ ಸಹಿತ ಹೊರ ಜಿಲ್ಲೆಗಳಿಂದಲೂ ಉದ್ಯೋಗಾರ್ಥಿಗಳ ಮಹಾಪೂರವೇ ಹರಿದು ಬರತೊಡಗಿತು.2100 ಹುದ್ದೆಗಳಿಗೆ 30ಕ್ಕಿಂತಲೂ ಅಧಿಕ ಸಂಸ್ಥೆಗಳು ನೇರ ನೇಮಕಾತಿ ನಡೆಸಿದವು.

ವರದಿ: ರಹಿಮಾನ್ ಉದ್ಯಾವರ

The post ರಾಷ್ಟ್ರದ ಅಭಿವೃದ್ದಿಗೆ ಯುವ ಸಮೂಹದ ಕೊಡುಗೆ ಅಗತ್ಯ: ಕಾಸರಗೋಡಿನಲ್ಲಿ ಸ್ವಾಮಿ ವಿವಿಕ್ತಾನಂದ ಅಭಿಪ್ರಾಯ appeared first on V4News.



This post first appeared on V4news, please read the originial post: here

Share the post

ರಾಷ್ಟ್ರದ ಅಭಿವೃದ್ದಿಗೆ ಯುವ ಸಮೂಹದ ಕೊಡುಗೆ ಅಗತ್ಯ: ಕಾಸರಗೋಡಿನಲ್ಲಿ ಸ್ವಾಮಿ ವಿವಿಕ್ತಾನಂದ ಅಭಿಪ್ರಾಯ

×

Subscribe to V4news

Get updates delivered right to your inbox!

Thank you for your subscription

×