Get Even More Visitors To Your Blog, Upgrade To A Business Listing >>

ಏರುತ್ತಿರುವ ಬಿಸಿಲಿನ ಧಗೆ : ರಸ್ತೆ ಬದಿಗಳಲ್ಲಿ ಕಬ್ಬಿನಹಾಲಿನ ವ್ಯಾಪಾರ ಜೋರು

ಮಂಜೇಶ್ವರ: ಬಿಸಿಲಿನ ಧಗೆ ಏರುತ್ತಿರುವಂತೆ ಅನ್ಯರಾಜ್ಯದ ಹಾಗೂ ಸ್ಥಳೀಯ ಪ್ರದೇಶವಾಸಿ ವ್ಯಾಪಾರಿಗಳ ರಸ್ತೆಬದಿ ತಂಪು ಪಾನೀಯ ಮಾರಾಟ ಬಿರುಸುಗೊಳ್ಳಲಾರಂಭಿಸಿದೆ. ಪೇಟೆ, ನಗರ ಪ್ರದೇಶದಲ್ಲಿ ಲಭ್ಯವಾಗುತ್ತಿರುವ ಕಬ್ಬಿನ ಜ್ಯೂಸ್ ಇದೀಗ ರಸ್ತೆ ಬದಿ ಅಲ್ಲಲ್ಲಿ ಮಾರಾಟವಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ತಲಪ್ಪಾಡಿಯಿಂದ ತೊಡಗಿ ಕಾಲಿಕ್ಕಡವು ವರೆಗೆ ಮಾತ್ರವಲ್ಲ ರಾಜ್ಯ ಹೆದ್ದಾರಿ ಬದಿಯಲ್ಲೂ ಈ ರೀತಿಯ ಕಬ್ಬಿನ ಹಾಲು ಹಿಂಡುವ ಯಂತ್ರಗಳು ಧಾರಾಳವಾಗಿ ಅಳವಡಿಸಲಾಗಿದೆ.

ವಿಲ್ಲಿಯರ್ಸ್ ಇಂಜಿನ್ ಅಳವಡಿಸಿದ ಯಂತ್ರಗಳಿಂದ ಕಬ್ಬಿನ ರಸ ತೆಗೆದು ಗ್ರಾಹಕರಿಗೆ ವಿತರಿಸಲಾಗುತ್ತಿದೆ. ಉತ್ತರ ಭಾರತದ ಹಿಂದಿ ಭಾಷಿಗರೇ ಹೆಚ್ಚಾಗಿ ಈ ರೀತಿಯ ವ್ಯಾಪಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.  ಕಬ್ಬಿನ ಹಾಲು ತೆಗೆಯುವ ಯಂತ್ರಗಳನ್ನು ಕೈಯಿಂದ ಹ್ಯಾಂಡಲ್ ಉಪಯೋಗಿಸಿ ತಿರುಗಿಸುವುದರ ಬದಲು ಸೀಮೆ ಎಣ್ಣೆ ಅಥವಾ ಡೀಸೆಲ್‌ನಿಂದ ಚಾಲನೆಯಾಗುವ ಯಂತ್ರಗಳನ್ನು ಅಳವಡಿಸಿ, ಸುಲಭ ರೀತಿಯಲ್ಲಿ ಕಬ್ಬಿನ ಹಾಲು ಸಂಗ್ರಹಿಸಲಾಗುತ್ತಿದೆ. ರಸ್ತೆಬದಿ ವ್ಯಾಪಕವಾಗಿ ಅಲ್ಲಲ್ಲಿ ಕಬ್ಬಿನಹಾಲಿನ ಯಂತ್ರಗಳನ್ನು ಅಳವಡಿಸಿರುವುದರಿಂದ ಇವರಿದ್ದಲ್ಲಿಗೆ ಲಾರಿಗಳಲ್ಲಿ ಕಬ್ಬು ಪೂರೈಸಲಾಗುತ್ತಿದೆ. ಒಂದೊಂದು ಪ್ರದೇಶದಲ್ಲಿ ಹಲವು ಯಂತ್ರಗಳು  ಕಾರ್ಯಾಚರಿಸುತ್ತಿದ್ದು, ಇವೆಲ್ಲವೂ ಒಬ್ಬ ಮಾಲಿಕನ ಅಧೀನದಲ್ಲಿ ಕಾರ್ಯಾಚರಿಸುತ್ತಿದೆ. ಅದೇ ರೀತಿ ಪಾಲಕ್ಕಾಡ್ ಕುಲುಕ್ಕಲ್ ಸರ್ಬತ್ ಎಂಬ ಹೆಸರಿನಲ್ಲೂ ರಸ್ತೆ ಬದಿಗಳಲ್ಲಿ ಜ್ಯೂಸ್ ಸ್ಟಾಲ್ ಗಳು ತಲೆ ಎತ್ತಿ ನಿಂತಿವೆ.

ಪ್ರತಿ ಗ್ಲಾಸ್‌ಗೆ 20 ರಿಂದ 30 ರೂ. ದರ  ನಿಗದಿಪಡಿಸಲಾಗುತ್ತಿದೆ. ಬಿಸಿಲಿನ ಧಗೆ ಏರಿಕೆಯಾಗುತ್ತಿದ್ದಂತೆ ತಂಪಾದ ಹಾಲಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಇದಕ್ಕಾಗಿ ಮಂಜುಗಡ್ಡೆ ಮಿಶ್ರಣ ಮಾಡಿ ವಿತರಿಸಲಾಗುತ್ತಿದೆ. ಮೇಲ್ನೋಟಕ್ಕೆ  ಕಬ್ಬಿನ ಹಾಲು ವಿತರಿಸುವ ಈ ಕೇಂದ್ರಗಳು ಶುಚಿಯಾಗಿ  ಕಂಡುಬರುತ್ತಿದ್ದರೂ, ಇದಕ್ಕೆ ಬಳಸುವ ಮಂಜುಗಡ್ಡ ಮಾತ್ರ ಕಳಪೆ ಗುಣಮಟ್ಟದ್ದೆಂದು ದೂರು ಕೇಳಿಬರಲಾರಂಭಿಸಿದೆ. ಶುಚಿತ್ವವಿಲ್ಲದ ನೀರನ್ನು ಬಳಸಿ ತಯಾರಿಸುವ ಮಂಜುಗಡ್ಡೆಯನ್ನು ಮೀನು ಕೆಡದಂತೆ ಇರಿಸಲು ವ್ಯಾಪಕವಾಗಿ ಬಳಸಲಾಗುತ್ತಿದ್ದು, ಇದೇ ಐಸನ್ನು ಕಬ್ಬಿನಹಾಲಿಗೂ ಬಳಸುತ್ತಿರುವುದಾಗಿ ದೂರುಗಳಿವೆ. ಈ ಬಗ್ಗೆ ಆರೋಗ್ಯ ಇಲಾಖೆ ತಪಾಸಣೆ ನಡೆಸಲು ಮೂದಾಗಬೇಕಾದ ಅನಿವಾರ್ಯತೆಯಿದೆ. ಇದೇ ರೀತಿ ರಸ್ತೆಬದಿ ನಾನಾ ರೀತಿಯ ತಂಪು ಪಾನೀಯ, ಉಪ್ಪುನೀರಲ್ಲಿ ಬೆರೆಸಿಡುವ ಮಾವು, ನೆಲ್ಲಿಕಾಯಿ, ತೆರೆದ ಸ್ಥಿತಿಯಲ್ಲಿ ಹಣ್ಣು ವ್ಯಾಪಾರ ವ್ಯಾಪಕವಾಗಿ ನಡೆದುಬರುತ್ತಿದ್ದರೂ, ಈ ಬಗ್ಗೆ ಆರೋಗ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕಾನೂನು ರೀತಿಯಲ್ಲಿ ಇಂತಹ ವ್ಯಾಪಾರದಿಂದ ಸುಲಭವಾಗಿ ರೋಗ ಹರಡಲು ಕಾರಣವಾಗುತ್ತಿದೆ. ನಗರ ಪ್ರದೇಶ ಸಹಿತ ರಸ್ತೆಬದಿಯಲ್ಲೆ‌ಇ ಈ ರೀತಿಯ ವ್ಯಾಪಾರ ನಡೆದುಬರುತ್ತಿದ್ದರೂ, ಆರೋಗ್ಯ ಇಲಾಖೆ ಕಂಡೂ ಕಾಣದಂತೆ ವರ್ತಿಸುತ್ತಿರುವುದು ಮಾರಕ ರೋಗಗಳ ಹರಡುವಿಕೆಗೂ ಕಾರಣವಾಗುವ ಸಾಧ್ಯತೆಯಿದೆ.

ರಹಿಮಾನ್ ಉದ್ಯಾವರ

The post ಏರುತ್ತಿರುವ ಬಿಸಿಲಿನ ಧಗೆ : ರಸ್ತೆ ಬದಿಗಳಲ್ಲಿ ಕಬ್ಬಿನಹಾಲಿನ ವ್ಯಾಪಾರ ಜೋರು appeared first on V4News.



This post first appeared on V4news, please read the originial post: here

Share the post

ಏರುತ್ತಿರುವ ಬಿಸಿಲಿನ ಧಗೆ : ರಸ್ತೆ ಬದಿಗಳಲ್ಲಿ ಕಬ್ಬಿನಹಾಲಿನ ವ್ಯಾಪಾರ ಜೋರು

×

Subscribe to V4news

Get updates delivered right to your inbox!

Thank you for your subscription

×