Get Even More Visitors To Your Blog, Upgrade To A Business Listing >>

ಮೂಲ್ಕಿ: ಟೋಲ್‌ಗೇಟ್ ಸಂಬಂಧಿತ ವಿಚಾರ ಹಿನ್ನಲೆ : ಹೆಜಮಾಡಿ ಗ್ರಾ.ಪಂ. ಸದಸ್ಯನಿಗೆ ಮಾರಣಾಂತಿಕ ಹಲ್ಲೆ

ರಾಷ್ಟ್ರೀಯ ಹೆದ್ದಾರಿಯಲ್ಲಿ ಎನ್‌ಐಟಿಕೆ ಬಳಿಯ ಟೋಲ್‌ಗೇಟ್‌ನ ಮೆನೇಜರ್ ಹಾಗೂ ಹೆಜಮಾಡಿ ಗ್ರಾಮ ಪಂಚಾಯತ್‌ನ ಸದಸ್ಯ ಶೈಲೇಶ್ ಕುಂದರ್ ಮೇಲೆ ಮಾರಾಕಾಸ್ತ್ರಗಳಿಂದ ಅಪರಿಚಿತರು ಗಂಭೀರ ರೀತಿಯ ಹಲ್ಲೆ ನಡೆಸಿ, ಕೊಲೆಗೆ ಯತ್ನಿಸಿದ ಘಟನೆ ಹಳೆಯಂಗಡಿ ಬಳಿ ನಡೆದಿದೆ.

ಕೆಲವು ತಿಂಗಳ ಹಿಂದೆಯಷ್ಟೇ ಆರಂಭವಾಗಿರುವ ಎನ್‌ಐಟಿಕೆ ಟೋಲ್‌ಗೇಟ್‌ನಲ್ಲಿ ಆರಂಭದ ದಿನಗಳಿಂದಲೂ ನಿರ್ವಹಣೆ ಮಾಡುತ್ತಿರುವ ಶೈಲೇಶ್ ಕುಂದರ್ ರಾತ್ರಿ ಪಾಳಿಯಲ್ಲಿ ಕೆಲಸ ಮುಗಿಸಿ ಹೆಜಮಾಡಿಯ ತಮ್ಮ ಮನೆಗೆ ಬೈಕ್‌ನಲ್ಲಿ ಹಿಂದಿರು ಗುತ್ತಿದ್ದಾಗ ಸ್ವಿಫ್ಟ್ ಕಾರಿನಲ್ಲಿ ಬಂದ ನಾಲ್ಕು ಜನರ ತಂಡವು ಬೈಕನ್ನು ಹಳೆಯಂಗಡಿ ಬಳಿಯ ಬಿಲ್ಲವ ಸಮಾಜ ಸೇವಾ ಸಂಘದ ಮುಂಭಾಗದ ಪೆಟ್ರೋಲ್ ಪಂಪ್‌ನ ಬಳಿ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದರು ಎಂದು ಮೂಲ್ಕಿ ಪೊಲೀಸ್ ಠಾಣೆಗೆ ನೀಡಲಾದ ದೂರಿನಲ್ಲಿ ತಿಳಿಸಲಾಗಿದೆ.

ಕಾರು ಬಂದು ತಮ್ಮ ವಾಹನಕ್ಕೆ ಡಿಕ್ಕಿ ಹೊಡೆದಾಕ್ಷಣ ಅವರು ರಸ್ತೆಗೆ ಅಪ್ಪಳಿಸಿದ್ದು ಕೇವಲ ಒಂದು ಕಾರಿನಲ್ಲಿ ನಾಲ್ಕು ಮಂದಿ ಬಂದಿದ್ದರೇ ಅಥವಾ ಇನ್ನಷ್ಟು ಮಂದಿ ಹಲ್ಲೆಯಲ್ಲಿ ಭಾಗಿಯಾಗಿದ್ದರೇ ಎಂಬ ಬಗ್ಗೆ ಶೈಲೇಶ್ ಸ್ಪಷ್ಟವಾಗಿ ತಿಳಿಸಿಲ್ಲ ಎಂದು ತಿಳಿದುಬಂದಿದೆ.

ಶೈಲೇಶ್ ಕುಂದರ್‌ರನ್ನು ಕೊಲೆ ಮಾಡಲೆಂದೇ ತಲವಾರು ಗಳನ್ನು ಬೀಸಿದ ದುಷ್ಕರ್ಮಿಗಳು ಅವರ ಎರಡೂ ಕಾಲಿಗೆ, ಭುಜಕ್ಕೆ ಹಾಗೂ ಕೈಗೆ ಬಲವಾದ ಏಟನ್ನು ನೀಡಿದ್ದಾರೆ. ಹಲ್ಲೆಗೆ ಅವರ ಎರಡೂ ಕಾಲುಗಳ ಮತ್ತು ಎಡಗೈಯ ಮೂಳೆ ಮುರಿತಕ್ಕೊಳಗಾಗಿದೆ. ಹಲ್ಲೆ ನಡೆಸುವಾಗ ಶೈಲೇಶ್ ಬೊಬ್ಬೆ ಹೊಡೆದಿದ್ದರಿಂದ ದುಷ್ಕರ್ಮಿಗಳು ಬಂದ ಕಾರಿನಲ್ಲಿಯೇ ಉಡುಪಿಯತ್ತ ಪರಾರಿಯಾ ಗಿದ್ದಾರೆ ಎಂದು ತಿಳಿದು ಬಂದಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಶೈಲೇಶ್‌ರನ್ನು ಸ್ಥಳೀಯರು ತಕ್ಷಣ ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಟೋಲ್‌ಗೇಟ್ ಪ್ರಾರಂಭವಾದಾಗಿನಿಂದ ಇಂದಿನವರೆಗೂ ಒಂದಿಲ್ಲೊಂದು ಕಲಹ, ಗಲಾಟೆ ಇತ್ಯಾದಿ ಇಲ್ಲಿ ನಡೆಯುತ್ತಲೇ ಇದೆ. ಅಲ್ಲದೆ ಟೋಲ್‌ಗೇಟ್ ಕಲೆಕ್ಷನ್‌ನ ಗುತ್ತಿಗೆ ಕೂಡಾ ಹೊರ ರಾಜ್ಯದ ಸಂಸ್ಥೆಗೆ ನೀಡಲಾಗಿದೆ. ಈ ಹಿಂದೆ ಇಲ್ಲಿ ಕಲೆಕ್ಷನ್ ನಡೆಸಲು ಸ್ಥಳೀಯ ಅದೆಷ್ಟೋ ಹಿಂದೂ ಸಂಘಟನೆಗಳಿಗೆ ಸೇರಿದ ನಾಯಕರು ಮುಂದಾಗಿದ್ದರು. ಆದರೆ ಈ ಗುತ್ತಿಗೆ ತಮಗೆ ಸಿಗಬೇಕು ಎಂದು ಒಂದಿಲ್ಲೊಂದು ಸಮಸ್ಯೆಗಳನ್ನು ಇಲ್ಲಿ ಸೃಷ್ಠಿಸುತ್ತಿದ್ದಾರೆ. ಇದೀಗ ಈ ಹಲ್ಲೆ ತಮ್ಮ ಗ್ಯಾಂಗ್ ಕೂಡಾ ಈ ಪರಿಸರದಲ್ಲಿ ಸಕ್ರಿಯವಾಗಿದೆ ಎಂದು ತೋರಿಸಿಕೊಳ್ಳಲು ನಡೆಸಲಾಗಿದೆ ಎಂಬ ಮಾತು ಕೂಡಾ ಕೇಳಿಬಂದಿದೆ.

ಆದರೆ ಮತ್ತೊಂದು ಮೂಲದಿಂದ ಬಂದ ಮಾಹಿತಿ ಪ್ರಕಾರ ಇದು ಆಂತರಿಕ ಕಲಹಕ್ಕಾಗಿ ನಡೆದ ಹಲ್ಲೆ ಎಂಬ ಮಾಹಿತಿ ಕೂಡಾ ಲಭಿಸಿದೆ.

ಈ ಟೋಲ್‌ಗೇಟ್ ವಿಚಾರದಲ್ಲಿ ಇಷ್ಟೊಂದು ಕಲಹ, ಗಲಾಟೆಗಳು ನಡೆಯುತ್ತಿದ್ದರೂ ಕೂಡಾ ಪೊಲೀಸ್ ಇಲಾಖೆ ಮಾತ್ರ ಕಂಡೂ ಕಾಣದಂತೆ, ವರ್ತಿಸುತ್ತಿರುವುದು ಪೊಲೀಸ್ ಇಲಾಖೆಯ ವೈಫಲ್ಯ ಎಂಬಂತೆ ಕಂಡುಬರುತ್ತಿದೆ. ಇಷ್ಟೇ ಅಲ್ಲದೆ ಇಂತಹ ಕಾಣದ ಕೈಗಳ ಅಟ್ಟಹಾಸದ ಹಿಂದೆ ಪೊಲೀಸ್ ಬೆಂಬಲ ಕೂಡಾ ಹೆಚ್ಚಾಗಿ ಕಾಣುತ್ತಿದೆ. ಪೊಲೀಸ್ ಆಯುಕ್ತರು ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡು ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಬೇಕಾಗಿದೆ. ಅಲ್ಲದೆ ಈ ಪರಿಸರ ಕೋಮು ಸೂಕ್ಷ್ಮ ಪ್ರದೇಶವಾದ್ದರಿಂದ ಆಯುಕ್ತರು ಇಲ್ಲಿಗೆ ಹೆಚ್ಚಿನ ಒತ್ತು ಕೊಡಬೇಕಾದ ಅಗ್ಯ ಕೂಡಾ ಹೆಚ್ಚಾಗಿ ಕಂಡುಬಂದಿದೆ.

ಶೈಲೇಶ್ ಕೇವಲ ಬಿಜೆಪಿ ಬೆಂಬಲಿತ ಪಂಚಾಯತ್ ಸದಸ್ಯನಷ್ಟೇ ಅಲ್ಲದೆ ಮೊಗವೀರ ಯುವ ಸಂಘಟನೆ ನಾಯಕ ಕೂಡಾ. ಈ ಕೊಲೆ ಯತ್ನವನ್ನು ಮೊಗವೀರ ಸಮಾಜ ತೀವ್ರವಾಗಿ ಖಂಡಿಸಿದ್ದು,  ಇಂದು ನಡೆಯುವ ಬೆಣ್ಣೆಕುದ್ರು ಜಾತ್ರೆಯಲ್ಲಿ ಮೊಗವೀರ ಮುಖಂಡರು ಗಂಗಾಧರ್ ಹೊಸಬೆಟ್ಟು ಅವರ ಮುಂದಾಳುತ್ವವದಲ್ಲಿ ಒಟ್ಟಾಗಿ ಸೇರಿ ಹೋರಾಟದ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲಿದ್ದಾರೆ ಎಂದು ತಿಳಿದು ಬಂದಿದೆ.

The post ಮೂಲ್ಕಿ: ಟೋಲ್‌ಗೇಟ್ ಸಂಬಂಧಿತ ವಿಚಾರ ಹಿನ್ನಲೆ : ಹೆಜಮಾಡಿ ಗ್ರಾ.ಪಂ. ಸದಸ್ಯನಿಗೆ ಮಾರಣಾಂತಿಕ ಹಲ್ಲೆ appeared first on V4News.This post first appeared on V4news, please read the originial post: here

Share the post

ಮೂಲ್ಕಿ: ಟೋಲ್‌ಗೇಟ್ ಸಂಬಂಧಿತ ವಿಚಾರ ಹಿನ್ನಲೆ : ಹೆಜಮಾಡಿ ಗ್ರಾ.ಪಂ. ಸದಸ್ಯನಿಗೆ ಮಾರಣಾಂತಿಕ ಹಲ್ಲೆ

×

Subscribe to V4news

Get updates delivered right to your inbox!

Thank you for your subscription

×