Get Even More Visitors To Your Blog, Upgrade To A Business Listing >>

ಟೋಲ್ ಗೇಟ್ ಮ್ಯಾನೇಜರ್ ಮೇಲೆ ಹಲ್ಲೆ : ನಾಲ್ವರು ಆರೋಪಿಗಳ ಸೆರೆ: ಮೂಲ್ಕಿ ಪೊಲೀಸರಿಂದ ಬಂಧನ

Tags: zwnj zwnj zwnj

ಮಂಗಳೂರು: ಸುರತ್ಕಲ್ ಎನ್‌ಐಟಿಕೆ ಟೋಲ್‌ಗೇಟ್ ಮ್ಯಾನೇಜರ್ ಶೈಲೇಶ್ ಕುಂದರ್ ಎಂಬವರ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಮುಲ್ಕಿ ಪೊಲೀಸರು ಬಂಧಿಸಿದ್ದಾರೆ.

ಶರಣ್, ಲೋಧಿ, ಚಿತ್ತರಂಜನ್ ಮತ್ತು ಮನೀಶ್ ಬಂಧಿತ ಆರೋಪಿಗಳಾಗಿದ್ದಾರೆ. ಶನಿವಾರ ಬೆಳಗ್ಗೆ ಟೋಲ್‌ಗೇಟ್‌ನಲ್ಲಿ ಕರ್ತವ್ಯ ನಿರ್ವಹಿಸಿ ಮನೆಯತ್ತ ಬೈಕ್‌ನಲ್ಲಿ ಸಾಗುತ್ತಿದ್ದ ಶೈಲೇಶ್ ಕುಂದರ್ ಹಳೆಯಂಗಡಿ ಸಾಗ್ ಬಳಿ ತಲುಪಿದಾಗ ಸ್ಪಿಫ್ಟ್ ಕಾರ್‌ನಲ್ಲಿ ಬಂದ ನಾಲ್ವರು ಅವರ ಮೇಲೆ ಹಲ್ಲೆ ನಡೆಸಿದ್ದರು. ಅವರ ಎರಡೂ ಕಾಲುಗಳ ಮೂಳೆ ಮುರಿದಿತ್ತು. ಇದನ್ನು ಗಮನಿಸಿದ್ದ ಸ್ಥಳೀಯರು ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಿದ್ದರು.

ಹಲ್ಲೆ ಪ್ರಕರಣಕ್ಕೆ ಸಂಬಂಧಿದಂತೆ ಅವರ ಹೇಳಿಕೆಯ ಆಧಾರದಲ್ಲಿ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರತಿಭಟನೆ: ಶೈಲೇಶ್ ಕುಂದರ ಮೇಲೆ ನಡೆದ ಹಲ್ಲೆ ಪ್ರಕರಣದ ನೈಜ ಮತ್ತು ಪ್ರಮಖ ಆರೋಪಿಗಳನ್ನು ಮರೆಮಾಚಿ ಡಮ್ಮಿ ಆರೋಪಿಗಳ ವಶಕ್ಕೆ ಪಡೆಯಲಾಗಿದೆ. ಬಂಧಿತರಿಗೆ ಪೊಲೀಸ್ ಠಾಣೆಯಲ್ಲಿ ರಾಜ ಮರ್ಯಾದೆ ನೀಡಲಾಗುತ್ತಿದೆ ಎಂದು ಆರೋಪಿಸಿ ಹೆಜಮಾಡಿ ಮತ್ತು ಪಡುಬಿದ್ರೆ ಆಸುಪಾಸಿನ ನಾಗರಿಕರು ಮುಲ್ಕಿ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿದರು. ನೈಜ ಆರೋಪಿಗಳನ್ನು ಬಂಧಿಸಿ ಎಂದು ಒತ್ತಾಯಿಸಿದರು.

ವರದಿ: ಆರ್.ಎ ಲೋಹಾನಿ ಮಂಗಳೂರು

The post ಟೋಲ್ ಗೇಟ್ ಮ್ಯಾನೇಜರ್ ಮೇಲೆ ಹಲ್ಲೆ : ನಾಲ್ವರು ಆರೋಪಿಗಳ ಸೆರೆ: ಮೂಲ್ಕಿ ಪೊಲೀಸರಿಂದ ಬಂಧನ appeared first on V4News.



This post first appeared on V4news, please read the originial post: here

Share the post

ಟೋಲ್ ಗೇಟ್ ಮ್ಯಾನೇಜರ್ ಮೇಲೆ ಹಲ್ಲೆ : ನಾಲ್ವರು ಆರೋಪಿಗಳ ಸೆರೆ: ಮೂಲ್ಕಿ ಪೊಲೀಸರಿಂದ ಬಂಧನ

×

Subscribe to V4news

Get updates delivered right to your inbox!

Thank you for your subscription

×