Get Even More Visitors To Your Blog, Upgrade To A Business Listing >>

ಬಂಟ್ವಾಳ: ಬಂಡೀಪುರ, ನಾಗರಹೊಳೆ ಛಾಯಾಚಿತ್ರೀಕರಣಕ್ಕೆ ಅವಕಾಶ : ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ ಹೇಳಿಕೆ

ವನ್ಯಜೀವಿ ಛಾಯಾಚಿತ್ರಗ್ರಹಣಕ್ಕೆ ಅಂತರ್ರಾಷ್ಟ್ರೀಯ ಮಟ್ಟದ ಮನ್ನಣೆಯಿದ್ದು, ಈ ನಿಟ್ಟಿನಲ್ಲಿ ತಾಲೂಕಿನ ವನ್ಯಜೀವಿ ಛಾಯಾಚಿತ್ರದ ಆಸಕ್ತರಿಗೆ ಬಂಡೀಪುರ ಹಾಗೂ ನಾಗರಹೊಳೆಯಲ್ಲಿ ಛಾಯಾಚಿತ್ರೀಕರಣಕ್ಕೆ ವಿಶೇಷ ಅವಕಾಶ ನೀಡುವುದಾಗಿ  ರಾಜ್ಯ ಅರಣ್ಯ  ಸಚಿವ ಬಿ.ರಮಾನಾಥ ರೈ  ಹೇಳಿದರು.

ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಬಂಟ್ವಾಳ ಪ್ರೆಸ್ ಕ್ಲಬ್ ಹಾಗೂ ಬಂಟ್ವಾಳ ಪತ್ರಕರ್ತರ ಸಂಘದ ರಜತವರ್ಷಾಚರಣಾ ಸಮಿತಿಯ ಆಶ್ರಯದಲ್ಲಿ ರಜತವರ್ಷಾಚರಣೆಯ ಅಂಗವಾಗಿ  ಮಾಧ್ಯಮ ಛಾಯಾಗ್ರಾಹಕ ಕಿಶೋರ್ ಪೆರಾಜೆಯವರ ವಿಶೇಷ ಛಾಯಾಚಿತ್ರಗಳ ಪ್ರದರ್ಶನ “ರಜತನಡೆಯಲ್ಲೊಂದು  ಛಾಯಾಕಿರಣ” ಕಾರ್ಯಕ್ರಮದಲ್ಲಿ  ಶುಕ್ರವಾರ ಬೆಳಿಗ್ಗೆ ಕಿಶೋರ್‌ರವರ ಫೊಟೋಗ್ರಫಿ ಯಶೋಗಾಥೆಯ ಪುರವಣಿಯನ್ನು ಅನಾವರಣ ಗೊಳಿಸಿ ಮಾತನಾಡಿದರು.ಛಾಯಾಚಿತ್ರಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಕಿಶೋರ್ ಸ್ನೇಹಜೀವಿಯಾಗಿದ್ದು, ಇವರ ಛಾಯಾಗ್ರಹಣ ಯುವ ಛಾಯಾಗ್ರಾಹಕರಿಗೆ ಪ್ರೇರಣೆಯಾಗಿದೆ, ಇವರ ಪ್ರತಿಭೆ ಇನ್ನಷ್ಟು ಬೆಳೆಯಲಿ ಎಂದವರು ಹಾರೈಸಿದರು.  ಬಂಟ್ವಾಳ ನಗರ ಯೋಜನಾಪ್ರಾಧೀಕಾರದ ಅಧ್ಯಕ್ಷ ಪಿಯೂಸ್ ಎಲ್ ರೋಡ್ರಿಗಸ್, ಪುರಸಭಾ ಸದಸ್ಯ ಸದಾಶಿವ ಬಂಗೇರ , ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೌನೇಶ ವಿಶ್ವಕರ್ಮ, ರಜತವರ್ಷಾಚರಣಾ ಸಮಿತಿ ಸಂಚಾಲಕ ವೆಂಕಟೇಶ್ ಬಂಟ್ವಾಳ್, ಪ್ರೆಸ್ ಕ್ಲಬ್ ಅಧ್ಯಕ್ಷ ಪ್ರಶಾಂತ್ ಪೂಂಜಾಲಕಟ್ಟೆ, ಕಾನೂನು ಸಲಹೆಗಾರ ರಾಘವೇಂದ್ರ ಬನ್ನಿಂತಾಯ, ಛಾಯಾಗ್ರಾಹಕ ಕಿಶೋರ್ ಪೆರಾಜೆ  ವೇದಿಕೆಯಲ್ಲಿದ್ದರು. ರಜತವರ್ಷಾಚರಣಾ ಸಮಿತಿ ಕಾರ್ಯದರ್ಶಿ ಸಂದೀಪ್ ಸಾಲ್ಯಾನ್ ಸ್ವಾಗತಿಸಿ, ರತ್ನದೇವ್ ಪೂಂಜಾಲಕಟ್ಟೆ ವಂದಿಸಿದರು.

ವರದಿ: ಸಂದೀಪ್ ಸಾಲ್ಯಾನ್, ಬಂಟ್ವಾಳ

The post ಬಂಟ್ವಾಳ: ಬಂಡೀಪುರ, ನಾಗರಹೊಳೆ ಛಾಯಾಚಿತ್ರೀಕರಣಕ್ಕೆ ಅವಕಾಶ : ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ ಹೇಳಿಕೆ appeared first on V4News.This post first appeared on V4news, please read the originial post: here

Share the post

ಬಂಟ್ವಾಳ: ಬಂಡೀಪುರ, ನಾಗರಹೊಳೆ ಛಾಯಾಚಿತ್ರೀಕರಣಕ್ಕೆ ಅವಕಾಶ : ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ ಹೇಳಿಕೆ

×

Subscribe to V4news

Get updates delivered right to your inbox!

Thank you for your subscription

×