Get Even More Visitors To Your Blog, Upgrade To A Business Listing >>

ಭಾರತೀಯ ಸೇನಾ ಪಡೆ ಮತ್ತು ಉಗ್ರರ ನಡುವೆ ನಡೆದ ಗುಂಡಿನ ಕಾಳಗ: ಇಬ್ಬರು ಯೋಧರು, ನಾಲ್ವರು ಉಗ್ರರು ಸಾವು

ಭಾರತೀಯ ಸೇನಾ ಪಡೆ ಮತ್ತು ಉಗ್ರರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಇಬ್ಬರು ಯೋಧರು, ನಾಲ್ವರು ಉಗ್ರರು ಮೃತಪಟ್ಟಿರುವ ಘಟನೆ ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ನಡೆದಿದೆ.

ಚೌಕಿಬಾಲ್ ಗಡಿ ಪ್ರದೇಶದಲ್ಲಿರುವ ಮರ್ಸಾರಿ ಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಉಗ್ರರು ಒಳ ನುಸುಳುತ್ತಿರುವ ಮಾಹಿತಿ ತಿಳಿದ ಯೋಧರು, ಕಾರ್ಯಾಚರಣೆಗೆ ಮುಂದಾದಾಗ ಉಗ್ರರು ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಇಬ್ಬರು ಯೋಧರು ಮೃತಪಟ್ಟಿದ್ದು, ಇನ್ನು ನಾಲ್ವರು ಯೋಧರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಭಾರತದ ಸೇನೆಯೂ ಪ್ರತಿ ದಾಳಿ ನಡೆಸಿದಾಗ ನಾಲ್ವರು ಉಗ್ರರು ಸಾವನ್ನಪ್ಪಿದ್ದಾರೆ. ಮರ್ಸಾರಿ ಹಳ್ಳಿಯ ಮನೆಯಲ್ಲಿ ಉಗ್ರರ ತಂಡವೊಂದು ಬೀಡುಬಿಟ್ಟಿದೆ ಎಂಬ ಮಾಹಿತಿ ತಿಳಿದು ಬಂದ ಹಿನ್ನಲೆಯಲ್ಲಿ ರಾಷ್ಟ್ರೀಯ ರೈಫಲ್ಸ್ ದಳ, ವಿಶೇಷ ಕಾರ್ಯಚರಣೆ ತಂಡ ಮತ್ತು ರಾಜ್ಯ ಮತ್ತು ಕೇಂದ್ರ ಮೀಸಲು ಪಡೆ ಮನೆಯನ್ನು ಸುತ್ತುವರೆದವು. ಈ ವೇಳೆ ಉಗ್ರರು ಗುಂಡು ಹಾರಿಸಿದ್ದಾರೆ. ಉಗ್ರರು ಮತ್ತು ಭಾರತೀಯ ಸೇನಾಪಡೆ ಸತತ 12 ಗಂಟೆಗಳ ಕಾಲ ಗುಂಡಿನ ಕಾಳಗ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

The post ಭಾರತೀಯ ಸೇನಾ ಪಡೆ ಮತ್ತು ಉಗ್ರರ ನಡುವೆ ನಡೆದ ಗುಂಡಿನ ಕಾಳಗ: ಇಬ್ಬರು ಯೋಧರು, ನಾಲ್ವರು ಉಗ್ರರು ಸಾವು appeared first on V4News.



This post first appeared on V4news, please read the originial post: here

Share the post

ಭಾರತೀಯ ಸೇನಾ ಪಡೆ ಮತ್ತು ಉಗ್ರರ ನಡುವೆ ನಡೆದ ಗುಂಡಿನ ಕಾಳಗ: ಇಬ್ಬರು ಯೋಧರು, ನಾಲ್ವರು ಉಗ್ರರು ಸಾವು

×

Subscribe to V4news

Get updates delivered right to your inbox!

Thank you for your subscription

×