Get Even More Visitors To Your Blog, Upgrade To A Business Listing >>

ಸ್ಥಳೀಯ ಸಂಸ್ಥೆಗಳ ಕಚೇರಿಗಳ ವರ್ಗಾವಣೆ : ಡಿ ವೈ ಎಫ್ ಐ ಯಿಂದ ಪ್ರತಿಭಟನೆ : ಮಂಜೇಶ್ವರದಲ್ಲಿ ಇಂಜಿನಿಯರಿಂಗ್ ಕಚೇರಿ

ಸ್ಥಳೀಯಾಡಳಿತ ಸಂಸ್ಥೆಗಳ ಅಧೀನದಲ್ಲಿರುವ ಎರಡು ಕಚೇರಿಗಳನ್ನು ಪಾಲಕ್ಕಾಡ್ ಹಾಗೂ ಮಂಜೇರಿಗೆ ವರ್ಗಾವಣೆಗೊಳಿಸುವುದನ್ನು ವಿರೋಧಿಸಿ ಕಾಸರಗೋಡು ಬ್ಲಾಕ್ ಪಂ. ಡಿ ವೈ ಎಫ್ ಐ ಕಾರ್ಯಕರ್ತರು ಮಂಜೇಶ್ವರ ನಗರದಲ್ಲಿರುವ ಎಕ್ಸ್ ಕ್ಯೂಟಿವ್ ಇಂಜಿನಿಯರ್ ಕಚೇರಿಗೆ ಮುತ್ತಿಗೆ ಹಾಕಿದ ಘಟನೆ ನಡೆದಿದೆ.

ಬಳಿಕ ಎಕ್ಸಿ ಕ್ಯೂಟಿವ್ ಹಾಗೂ ಮೇಲಾಧಿಕಾರಿಗಳು ನಡೆಸಿದ ಚರ್ಚೆಯ ಹಿನ್ನೆಲೆಯಲ್ಲಿ ಡಿ ವೈ ಎಫ್ ಐ ಪ್ರತಿಭಟನೆ ಫಲ ಕಂಡಿದೆ. ಸ್ಥಳೀಯಾಡಳಿತ ಸಂಸ್ಥೆಗಳ ಅಧೀನದಲ್ಲಿರುವ ಎರಡು ಕಚೇರಿಗಳ 16 ಉದ್ಯೋಗಸ್ಥರನ್ನು ಪಾಲಕ್ಕಾಡ್ ಹಾಗೂ ಮಂಜೇರಿಗೆ ವರ್ಗಾವಣೆಯನ್ನು ಹಿಂಪಡೆಯುವ ರೇಖಾ ಸಹಿತ ದಾಖಲೆಗಳನ್ನು ಪ್ರತಿಭಟನಾ ನಿರತರಿಗೆ ತೋರ್ಪಡಿಸಿದ ಬಳಿಕ ಪ್ರತಿಭಟನಾಕಾರರು ಪ್ರತಿಭಟನೆಯಿಂದ ಹಿಂದಕ್ಕೆ ಸರಿದಿದ್ದಾರೆ. ಬಹಳ ಹಿಂದುಳಿದ ಜಿಲ್ಲೆಯಾಗಿರುವ ಕಾಸರಗೋಡು ಜೆಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ಕಚೇರಿಗಳನ್ನು ಒಂದು ಸಲ ಎತ್ತಂಗಡಿ ಮಾಡಿದ ಬಳಿಕ ಅದನ್ನು ಮರಳಿ ತರಲು ಅಸಾಧ್ಯದ ಮಾತು ಎಂಬುದಾಗಿ ಪ್ರತಿಭಟನೆಯಲ್ಲಿ ನಿರತರಾಗಿದ್ದ ಡಿ ವೈ ಎಫ್ ಐ ಕಾರ್ಯಕರ್ತರು ಆರೋಪಿಸಿದ್ದರು. ಅದರೆ ಜಿಲ್ಲೆಯಲ್ಲಿ ಬೇಕಾದ ರೀತಿಯಲ್ಲಿ ಎರಡು ಕಚೇರಿಗಳು ಕರ್ಯಾಚರಿಸುವುದಿಲ್ಲವಾದ ಹಿನ್ನೆಲೆಯಲ್ಲಿ ಆ ಎರಡು ಕಚೇರಿಗಳನ್ನು ವರ್ಗಾವಣೆ ಮಾಡಲು ಮುಂದಾಗಿರುವುದಾಗಿ ಎಕ್ಸ್ ಕ್ಯೂಟಿವ್ ಇಂಜಿನಿಯರ್ ತಿಳಿಸಿದ್ದಾರೆ. ಮಂಜೇಶ್ವರ ಗೋವಿಂದ ಪೈ ಕಾಲೇಜು ಕಟ್ಟಡ, ಮೂನಾಡ್ ಜಿ ಎಚ್ ಎಸ್ ಎಸ್ ಕಟ್ಟಡ ಸೇರಿದಂತೆ ಇಂತಹ ಹಲವು ಯೋಜನೆಗಳು ಬಾಕಿ ಉಳಿದಿರುವ ಮಧ್ಯದಲ್ಲಿ ಕಟ್ಟಡ ನಿರ್ಮಾಣ ಹಂತದಲ್ಲಿರುವ ಎರಡು ಕಚೇರಿಗಳನ್ನು ಸ್ಥಳಾಂತರಿಸುವ ಯತ್ನ ನಡೆದಿರುವುದೆಂದು ಹೇಳಲಾಗಿದೆ.

ವರದಿ: ರೆಹಮಾನ್ ಉದ್ಯಾವರ, ಮಂಜೇಶ್ವರ

The post ಸ್ಥಳೀಯ ಸಂಸ್ಥೆಗಳ ಕಚೇರಿಗಳ ವರ್ಗಾವಣೆ : ಡಿ ವೈ ಎಫ್ ಐ ಯಿಂದ ಪ್ರತಿಭಟನೆ : ಮಂಜೇಶ್ವರದಲ್ಲಿ ಇಂಜಿನಿಯರಿಂಗ್ ಕಚೇರಿಗೆ ಮುತ್ತಿಗೆ appeared first on V4News.



This post first appeared on V4news, please read the originial post: here

Share the post

ಸ್ಥಳೀಯ ಸಂಸ್ಥೆಗಳ ಕಚೇರಿಗಳ ವರ್ಗಾವಣೆ : ಡಿ ವೈ ಎಫ್ ಐ ಯಿಂದ ಪ್ರತಿಭಟನೆ : ಮಂಜೇಶ್ವರದಲ್ಲಿ ಇಂಜಿನಿಯರಿಂಗ್ ಕಚೇರಿ

×

Subscribe to V4news

Get updates delivered right to your inbox!

Thank you for your subscription

×