Get Even More Visitors To Your Blog, Upgrade To A Business Listing >>

ಅಕಾಡೆಮಿಗಳ ನೇಮಕಕ್ಕೆ ವಿಶ್ವಕನ್ನಡ ಸಮ್ಮೇಳನದ ಅದೃಷ್ಟ, ಮೂರು ಅಕಾಡೆಮಿಗಳು ಮೂವರು ಸಚಿವರ ಕೈಗೆ

ಮಂಗಳೂರು: ತುಳು, ಬ್ಯಾರಿ, ಕೊಂಕಣಿ ಅಕಾಡೆಮಿಗಳ ಸಹಿತ ರಾಜ್ಯದ ಯಾವುದೇ ಅಕಾಡೆಮಿಗಳಿಗೆ ಹೊಸ ಅಧ್ಯಕ್ಷರು ಮತ್ತು ಸದಸ್ಯರು ನೇಮಕ ಮಾಡದಿರುವ ಬಗ್ಗೆ ನಿರ್ಧರಿಸಲಾಗಿತ್ತು. ಆದರೆ ವಿಶ್ವ ಕನ್ನಡ ಸಮ್ಮೇಳನ ನಡೆಸುವ ಉದ್ದೇಶದಿಂದ ಈಗ ನೇಮಕಾತಿ ಪ್ರಕ್ರಿಯೆಗಳಿಗೆ ಚಾಲನೆ ನೀಡಲಾಗಿದೆ ಎಂಬ ಮಾಹಿತಿಯೊಂದು ಹೊರಬಿದ್ದಿದೆ.
ಕಳೆದ ಫೆಬ್ರುವರಿಯಲ್ಲಿಯೇ ಅಕಾಡೆಮಿಗಳ ಅಧ್ಯಕ್ಷರ ಅಧಿಕಾರ ಅವ ಮುಗಿದಿದೆ. ಹೊಸ ನೇಮಕಾತಿಯ ಪ್ರಕ್ರಿಯೆಗಳೂ ಕೂಡ ಆಗಲೇ ಆರಂಭವಾಗಿದ್ದವು. ವಿವಿಧ ರಾಜಕೀಯ ಕಾರಣಗಳಿಂದಾಗಿ ನೇಮಕಾತಿಯ ಆದೇಶ ಹೊರಡಿಸಿರಲಿಲ್ಲ. ಇನ್ನೇನು ವಿಧಾನಸಭೆ ಚುನಾವಣೆಯ ಹತ್ತಿರ ಬರುತ್ತಿದೆ ಮತ್ತೇಕೆ ನೇಮಕ ಎಂದು ಆಡಳಿತಗಾರರು ಜಾಣ ಮರೆವು ಪ್ರದರ್ಶಿಸುತ್ತಿದ್ದರು. ಆದರೆ ತಮ್ಮ ಆಡಳಿತ ಅವಧಿಯಲ್ಲಿಯೇ ವಿಶ್ವಕನ್ನಡ ಸಮ್ಮೇಳನ ನಡೆಸಲು ಸಿದ್ದರಾಮಯ್ಯ ನಿರ್ಧರಿಸಿದ್ದು, ಇದಕ್ಕೆ ಪೂರಕವಾಗುವಂತೆ ಅಕಾಡೆಮೆಗಳ ಅಧ್ಯಕ್ಷರು ಮತ್ತು ಸದಸ್ಯರನೂ ನೇಮಿಸಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ. ವಿಶ್ವಕನ್ನಡ ಸಮ್ಮೇಳನ ಯಶಸ್ವಿಗೊಳಿಸಲು ಜವಾಬ್ದಾರಿಯುತ ಜನರ ಆವಶ್ಯಕತೆ ಇದೆ. ಎಲ್ಲವನ್ನೂ ಒಂದು ಇಲಾಖೆ ಮತ್ತು ಕೆಲವೆ ಅಧಿಕಾರಿಗಳು ನಿಭಾಯಿಸಲು ಸಾಧ್ಯವಿಲ್ಲ. ಜವಾಬ್ದಾರಿಯನ್ನು ಹಂಚಿ ಕೊಡಬೇಕಾಗುತ್ತದೆ. ಯಾರ‍್ಯಾರಿಗೋ ಜವಾಬ್ದಾರಿ ಹಂಚುವುದಕ್ಕಿಂತ ಸರಕಾರಿ ಆಧಿನದಲ್ಲಿರುವವರಿಗೆ ಜವಾಬ್ದ್ದಾರಿ ಹಂಚುವುದು ಸೂಕ್ತ ಎಂಬ ಕಾರಣಕ್ಕೆ ಅಕಾಡೆಮಿಗಳ ಅಧ್ಯಕ್ಷ ನೇಮಕಾತಿ ಪ್ರಕ್ರಿಯೆಗೆ ಮತ್ತೆ ಚಾಲನೆ ನೀಡಲಾಗಿದೆ. ಬಂದ ಮಾಹಿತಿಯನ್ನು ನಂಬುವುದಾದರೆ ಈ ವಾರದಲ್ಲಿಯೇ ಅಕಾಡೆಮಿಗಳ ಅಧ್ಯಕ್ಷ ಮತ್ತು ಸದಸ್ಯರ ನೇಮಕದ ಆದೇಶ ಹೊರಬೀಳುವ ಸಾಧ್ಯತೆ ಇದೆ.
ಹಳಬರ ಅಧಿಕಾರ ಅವಧಿ ಮುಗಿದ ಕೂಡಲೇ ಹೊಸ ನೇಮಕಾತಿ ಮಾಡಿದ್ದರೆ ಇಷ್ಟೊತ್ತಿಗಾಗಲೇ ಹೊಸಬರು ಅಧಿಕಾರ ಸ್ವೀಕರಿಸಿ ಮೂರು ತಿಂಗಳು ಕಳೆದಿರುತ್ತಿದ್ದವು. ಅಕಾಡೆಮಿಗಳಿಗೆ ನೇಮಕ ಪ್ರಕ್ರಿಯೆಗೆ ಹಿಂದೇಟು ಹಾಕಲು ಮತ್ತೊಂದು ಕಾರಣ ಡಿಸೆಂಬರ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಸುವ ಸಾದ್ಯತೆಯ ಚರ್ಚೆ. ರಾಜ್ಯ ಕಾಂಗ್ರೆಸ್ ನಾಯಕರು ಮತ್ತು ಸಿದ್ಧರಾಮಯ್ಯ ಬರುವ ಡಿಸೆಂಬರ್ ಬಳಿಕ ಚುನಾವಣೆಗೆ ಹೋಗಲು ಸಿದ್ದರಾಗಿದ್ದರು. ಆದರೆ ಈಗ ಈ ನಿರ್ಧಾರದಿಂದ ಹಿಂದೆ ಸರಿಯಲಾಗಿದೆ. ನಿಗದಿತ ಅವಧಿ ಮುಗಿಸಿಯೇ ಚುನಾವಣೆಗೆ ಹೋಗಲು ನಿರ್ಧರಿಸಲಾಗಿದೆ. ಆದುದರಿಂದ ಮುಂದಿನ ಒಂದು ವರ್ಷದ ಅವಧಿಗಾದರೂ ಹೊಸ ಅಧ್ಯಕ್ಷರು ಕಾರ್ಯ ನಿರ್ವಹಿಸಲಿ ಎಂಬ ಅಭಿಲಾಶೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆ ಉಮಾಶ್ರೀ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಡಿಸೆಂಬರ್ ಚುನಾವಣೆ ಯೋಚನೆ ಇದ್ದುದರಿಂದಲೇ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ತೆರವಾಗಿರುವ ಸ್ಥಾನಗಳ ಭರ್ತಿಗೂ ಕೂಡ ಆಸಕ್ತಿ ತೋರಿರಲಿಲ್ಲ. ಆದರೀಗ ಸಂಪುಟ ವಿಸ್ತರಣೆಯ ಬಗ್ಗೆಯೋ ಯೋಚಿಸುತ್ತಿರುವುದು ಅವಧಿ ಮುಗಿದ ಬಳಿಕ ಚುನಾವಣೆಗೆ ಹೋಗುವ ಉದ್ದೇಶದಿಂದಲೆ. ಸಂಪುಟ ವಿಸ್ತರಣೆ ಮತ್ತು ಅಕಡೆಮಿಗಳಿಗೆ ನೇಮಕದ ಬಗ್ಗೆ ಯೋಚಿಸಲಾಗಿದೆ. ಸಚಿವ ಸಂಪುಟದಲ್ಲಿ ಮೂರು ಸ್ಥಾನಗಳು ತೆರವಾಗಿವೆ.ಏಳು ಅಕಾಡೆಮಿಗಳು ಮತ್ತು ಎರಡು ಪ್ರಾಧಿಕಾರಿಗಳಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಿಸಬೇಕಿದೆ. ಅಕಾಡೆಮಿಗಳಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಿಸುವ ಅಧಿಕಾರವನ್ನು ಸಚಿವರ ಸುಪರ್ದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಸಿದ್ದಾರೆ.
ರಾಜ್ಯದಲ್ಲಿ ೧೬ ಅಕಾಡೆಮಿಗಳಿದ್ದರೆ ಅವುಗಳಲ್ಲಿ ನಾಲ್ಕು ದ.ಕ. ಜಿಲ್ಲೆಯಲ್ಲಿಯೇ ಇವೆ. ದ.ಕ. ಜಿಲ್ಲೆಯ ವ್ಯಾಪ್ತಿಯ ಕೊಂಕಣಿ, ತುಳು ಮತ್ತು ಬ್ಯಾರಿ ಭಾಷಾ ಅಕಾಡೆಮಿಗಳ ಅಧ್ಯಕ್ಷರು ಮತ್ತು ಸದಸ್ಯರ ನೇಮಕಾತಿಗಾಗಿ ಭಾರೀ ಪೈಪೋಟಿ ಇದೆ. ತುಳು ಸಾತ್ಯ ಅಕಾಡೆಮಿಯ ನೇಮಕದ ಜವಾಬ್ದಾರಿ ರಮಾನಾಥ ರೈಯವರದ್ದಾಗಿದ್ದರೆ, ಬ್ಯಾರಿ ಸಾಹಿತ್ಯ ಅಕಾಡೆಮಿ ಯು.ಟಿ.ಖಾದರ್ ಕೈಯಲ್ಲಿದೆ. ಕೊಂಕಣಿ ಸಾಹಿತ್ಯ ಅಕಾಡೆಮಿ ಉತ್ತರ ಕನ್ನಡ ಜಿಲ್ಲೆಯ ಪ್ರಭಾವಿ ರಾಜಕಾರಣಿ ಆರ್.ವಿ.ದೇಶಪಾಂಡೆಯವರು ಸುಪರ್ದಿಗೆ ಹೋಗಿದೆ.
ನಿಗದಿಯಾಗಿರುವಂತೆ ತುಳು ಸಾತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಎ.ಸಿ.ಭಂಡಾರಿಯವರು ನೇಮಕವಾಗುವುದು ಖಚಿತವಾಗಿದೆ. ಸದಸ್ಯತ್ವಕ್ಕಾಗಿ ಈಗಾಗಲೇ ಮೂರು ಸಾರ ಅರ್ಜಿಗಳು ಬಂದಿವೆ.This post first appeared on V4news, please read the originial post: here

Share the post

ಅಕಾಡೆಮಿಗಳ ನೇಮಕಕ್ಕೆ ವಿಶ್ವಕನ್ನಡ ಸಮ್ಮೇಳನದ ಅದೃಷ್ಟ, ಮೂರು ಅಕಾಡೆಮಿಗಳು ಮೂವರು ಸಚಿವರ ಕೈಗೆ

×

Subscribe to V4news

Get updates delivered right to your inbox!

Thank you for your subscription

×