Get Even More Visitors To Your Blog, Upgrade To A Business Listing >>

ಸುಳ್ಯ ತಾಲೂಕು ಭಗೀರಥ ಜಯಂತಿ ಆಚರಣೆ, ಭಗೀರಥ ಪ್ರಯತ್ನಗಳ ಮೂಲಕ ಸಮಾಜ ಪರಿವರ್ತನೆ

bageeratha

ಸಾವಿರ ವರ್ಷಗಳ ಕಾಲ ತಪಸ್ಸು ಆಚರಿಸಿ, ಶಿವನನ್ನು ಒಲಿಸಿ ಧರೆಗೆ ದೇವಗಂಗೆಯನ್ನು ಮಹರ್ಷಿ ಭಗೀರಥ ತರಿಸಿದ್ದಾರೆ. ಅವರ ಈ ಪ್ರಯತ್ನ ಭಗೀರಥ ಪ್ರಯತ್ನ ಎಂದು ನಾಣ್ಣುಡಿಯಾಗಿದೆ. ಅದರಂತೆ ಸಮಾಜದಲ್ಲಿರುವ ಎಲ್ಲರು ಭಗೀರಥರಂತೆ ಸಮಾಜ ಅಭಿವೃದ್ಧಿಗೆ ಪ್ರಯತ್ನಿಸಬೇಕು ಎಂದು ನಿವೃತ್ತ ಸಿಡಿಪಿ‌ಒ ನಾರಾಯಣ ನೀರಬಿದರೆ ತಿಳಿಸಿದರು.
ಅವರು ರಾಷ್ಟ್ರೀಯ ಹಬ್ಬಗಳ ದಿನಾಚರಣಾ ಸಮಿತಿ ಸುಳ್ಯ ತಾಲೂಕು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ತಾಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಭಗೀರಥ ಜಯಂತಿ ಆಚರಣಾ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಸಭಾಧ್ಯಕ್ಷತೆಯನ್ನು ತಾ. ಪಂ. ಸದಸ್ಯ ಅಶೋಕ ನೆಕ್ರಾಜೆ ವಹಿಸಿದರು. ಉಪ ತಹಶೀಲ್ದಾರ್ ಲಿಂಗಪ್ಪ ನಾಯ್ಕ, ಇನ್ನೋರ್ವ ಉಪ ತಹಶೀಲ್ದಾರ್ ರಾಮಣ್ಣ ನಾಯ್ಕ ಮತ್ತು ಸಿಬ್ಬಂದಿ ವರ್ಗವರು ಉಪಸ್ಥಿತರಿದ್ದರು. ತಹಶೀಲ್ದಾರ್ ಸಣ್ಣರಂಗಯ್ಯ ಸ್ವಾಗತಿಸಿ, ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ ನಿರೂಪಿಸಿದರು.



This post first appeared on V4news, please read the originial post: here

Share the post

ಸುಳ್ಯ ತಾಲೂಕು ಭಗೀರಥ ಜಯಂತಿ ಆಚರಣೆ, ಭಗೀರಥ ಪ್ರಯತ್ನಗಳ ಮೂಲಕ ಸಮಾಜ ಪರಿವರ್ತನೆ

×

Subscribe to V4news

Get updates delivered right to your inbox!

Thank you for your subscription

×