Get Even More Visitors To Your Blog, Upgrade To A Business Listing >>

ಮುಸ್ಲಿಂ ಚಿಣ್ಣರಿಗೆ ಸಾಮೂಹಿಕ ಮುಂಜಿ,  ಅಲ್ ಬಿಲಾಲ್ ವೆಲ್ಪೇರ್‌ನಿಂದ ಕಾರ್ಯಕ್ರಮ

Tags: agravesup

munji

mungi
ಮಂಜೇಶ್ವರ ವಾಮಂಜೂರು ಪ್ರದೇಶದಲ್ಲಿ ಆರ್ಥಿಕವಾಗಿ ಹಿಂದುಳಿದ ಸುಮಾರು ೫೦ ಮಕ್ಕಳಿಗೆ ವಾಮಂಜೂರು ಅಲ್ ಬಿಲಾಲ್ ವೆಲ್ಫೇರ್ ಅಸೋಸಿಯೇಶನ್ ವತಿಯಿಂದ ಉಚಿತ ಸಾಮೂಹಿಕ ಮುಂಜಿ ಮಾಡಲಾಯಿತು.
ಮುಸ್ಲಿಂ ಸಮುದಾಯದಲ್ಲಿ ಮುಂಜಿ ಸಂಪ್ರದಾಯವಾಗಿದ್ದು, ಧಾರ್ಮಿಕ ಕೈಂಕರ್ಯಗಳನ್ನು ಆಚರಿಸಲಾಗದೆ ಕಡು ಬಡತನದಲ್ಲಿ ಜೀವನವನ್ನು ನಡೆಸುತ್ತಿರುವ ಮಂದಿಯನ್ನು ಗುರುತಿಸಿ ಅವರಿಗೆ ಸಹಕಾರಿಯಾಗಲೆಂದು ಅಸೋಸಿಯೆಶನ್ ಕಾರ್ಯಕರ್ತರು ಇಂತಹ ಒಂದು ಕಾರ್ಯಕ್ರಮವನ್ನು ಹಮ್ಮಿ ಕೊಂಡಿದ್ದಾರೆ. ಮುಸ್ಲಿಂ ಸಮುದಾಯದಲ್ಲಿ ಮಕ್ಕಳು ಹುಟ್ಟಿದರೂ ಸುನ್ನತಿಯ ಅಂದ್ರೆ ಮುಂಜಿಯ ನಂತರವೇ ಇಸ್ಲಾಮಿನಲ್ಲಿ ಮುದ್ರೆ ಪಡೆದುಕೊಳ್ಳುವುದರಿಂದ ಸದರಿ ಧಾರ್ಮಿಕ ಕೈಂಕರ್ಯಕ್ಕೆ ಹೆಚ್ಚಿನ ಮಹತ್ವ ಇದೆ.
ಮುಂದಿನ ದಿನಗಳಲ್ಲಿ ಉಚಿತ ಸಮೂಹ ವಿವಾಹವನ್ನು ನಡೆಸಲು ಈ ಸಂಘಟನೆ ತೀರ್ಮಾನಿಸಿದೆ. ಮುಂಜಿ ನಡೆಸಿದ ಚಿಣ್ಣರಿಗೆ ಹೊಸ ಉಡುಪುಗಳನ್ನು ನೀಡಿ ಮೆರವಣಿಗೆಯಲ್ಲಿ ವಾಮಂಜೂರು ಮಸೀದಿಗೆ ತಂದು ಅಲ್ಲಿ ಸುಮಾರು ೧೦೦೦ ಮಂದಿಗೆ ಔತಣದೂಟವನ್ನು ನೀಡಲಾಗಿದೆ. ಈ ಸಂದರ್ಭ ಸಂಘಟನೆಯ ನೇತಾರರಾದ ಅಬ್ದುಲ್ಲ ಕಜೆ, ವಿ. ಕೆ. ಫಾರೂಕ್ ಹಾಜಿ, ಅಬ್ದುಲ್ಲ ಸುಪ್ರಿಂ, ಖಾಲಿದ್ ರಜಾಕ್, ಮಹ್ಮೂದ್ ಮುನೀರ್ ಸೇರಿದಂತೆ ಹಲವರು ನೇತೃತ್ವ ನೀಡಿದರು.



This post first appeared on V4news, please read the originial post: here

Share the post

ಮುಸ್ಲಿಂ ಚಿಣ್ಣರಿಗೆ ಸಾಮೂಹಿಕ ಮುಂಜಿ,  ಅಲ್ ಬಿಲಾಲ್ ವೆಲ್ಪೇರ್‌ನಿಂದ ಕಾರ್ಯಕ್ರಮ

×

Subscribe to V4news

Get updates delivered right to your inbox!

Thank you for your subscription

×