Get Even More Visitors To Your Blog, Upgrade To A Business Listing >>

ಲೋಕಪಾಲ ಜಾರಿ ತಡವೇಕೆ ಸುಪ್ರೀಂ ಕೋರ್ಟ್ ಪ್ರಶ್ನೆ, ಸಾಕು ಪೋಕು ಕಾರಣ ನೀಡಿದ ಮೋದಿ ಸರಕಾರ

yogendra-yadav_647_030917033407

ಲೋಕಪಾಲ ಮತ್ತು ಲೋಕಾಯುಕ್ತಗಳ ಕಾಯ್ದೆ-೨೦೧೩, ಅನುಷ್ಠಾನ ಸಾಧ್ಯವಿರುವ ಕಾಯ್ದೆಯಾಗಿದೆ. ಅದನ್ನು ಅನುಷ್ಠಾನ ಮಾಡದೇ ಇರುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಲೋಕಪಾಲರನ್ನು ನೇಮಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿ ಎಂದು ಕಾಮನ್ ಕಾಸ್ ಎಂಬ ಸ್ವಯಂಸೇವಾ ಸಂಸ್ಥೆ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಕಾಮನ್ ಕಾಸ್ ಪರ ಹಾಜರಿದ್ದ ವಕೀಲ ಶಾಂತಿ ಭೂಷಣ್, ಲೋಕಪಾಲ ಮಸೂದೆಗೆ ೨೦೧೩ರಲ್ಲೇ ಸಂಸತ್ತಿನ ಅನುಮೋದನೆ ದೊರೆತಿದೆ. ಜತೆಗೆ ೨೦೧೪ರಲ್ಲೇ ಕಾಯ್ದೆಯಾಗಿದೆ. ಆದರೆ ಸರ್ಕಾರ ಉದ್ದೇಶಪೂರ್ವಕವಾಗಿ ಲೋಕಪಾಲರ ನೇಮಕವನ್ನು ಮೋದಿ ಸರಕಾರ ಮುಂದೂಡುತ್ತಿದೆ ಎಂದು ಆರೋಪಿಸಿದರು.
ಸರ್ಕಾರದ ಪರ ಹಾಜರಿದ್ದ ಅಟಾರ್ನಿ ಜನರಲ್ ಮುಕುಲ್ ರೋಹಟಗಿ, ಲೋಕಪಾಲರ ನೇಮಕಾತಿ ಸಮಿತಿಯಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕರೂ ಇರಬೇಕು ಎಂದು ಕಾಯ್ದೆ ಹೇಳುತ್ತದೆ. ಆದರೆ ಈಗ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರೇ ಇಲ್ಲ. ಲೋಕಪಾಲ ಕಾಯ್ದೆಯಲ್ಲಿ, ವಿರೋಧ ಪಕ್ಷದ ನಾಯಕನ ವ್ಯಾಖ್ಯಾನಕ್ಕೆ ತಿದ್ದುಪಡಿ ತರುವ ಪ್ರಕ್ರಿಯೆ ಇನ್ನೂ ಮುಗಿದಿಲ್ಲ. ಹೀಗಾಗಿ ಈಗ ಲೋಕಪಾಲರ ನೇಮಕ ಸಾಧ್ಯವಿಲ್ಲ ಎಂದು ವಿವರಣೆ ನೀಡಿದರು.



This post first appeared on V4news, please read the originial post: here

Share the post

ಲೋಕಪಾಲ ಜಾರಿ ತಡವೇಕೆ ಸುಪ್ರೀಂ ಕೋರ್ಟ್ ಪ್ರಶ್ನೆ, ಸಾಕು ಪೋಕು ಕಾರಣ ನೀಡಿದ ಮೋದಿ ಸರಕಾರ

×

Subscribe to V4news

Get updates delivered right to your inbox!

Thank you for your subscription

×