Get Even More Visitors To Your Blog, Upgrade To A Business Listing >>

ಗುತ್ತಿಗೆ ಸಿಬ್ಬಂದಿಗಳ ವರ್ಗಾವಣೆ, ಬ್ರಹ್ಮಾವರದಲ್ಲಿ ಪ್ರತಿಭಟನೆ

brahma

ಉಪನೋಂದಾವಣೆ ಕಚೇರಿಗಳಲ್ಲಿರುವ ಗುತ್ತಿಗೆ ಸಿಬ್ಬಂದಿಗಳ ವರ್ಗಾವಣೆಯನ್ನು ಖಂಡಿಸಿ ಬ್ರಹ್ಮಾವರ ಉಪನೋಂದಾವಣಾಕಾರಿ ಕಚೇರಿಯ ಮುಂಭಾಗ ಸಾರ್ವಜನಿಕರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಉಪನೋಂದಾವಣಾಕಾರಿ ಕಚೇರಿಯಲ್ಲಿರುವ ತಾತ್ಕಾಲಿಕ ಸಿಬ್ಬಂದಿಗಳನ್ನು ವರ್ಗಾಯಿಸಿ ಕಂದಾಯ ಸಚಿವರು ಬೆಳಗ್ಗೆ ದಿಢೀರ್ ಆದೇಶ ಹೊರಡಿಸಿದ್ದರು. ಅದರಂತೆ ಉಡುಪಿ ಜಿಲ್ಲೆಯ ಬ್ರಹ್ಮಾವರ, ಕಾರ್ಕಳ, ಶಂಕರನಾರಾಯಣ, ಬಂದೂರು ಮತ್ತಿತರರ ಉಪನೋಂದಾವಣಾಕಾರಿ ಕಚೇರಿಗಳ ತಾತ್ಕಾಲಿಕ ಸಿಬ್ಬಂದಿಗಳನ್ನು ಪರಸ್ಪರ ವರ್ಗಾವಣೆ ಮಾಡಲಾಗಿತ್ತು.
ಉಡುಪಿ ಜಿ. ಪಂ. ಮಾಜಿ ಅಧ್ಯಕ್ಷ ಬಿ. ಭುಜಂಗ ಶೆಟ್ಟಿ ಅವರು ಮಾತನಾಡಿ, ಆಯಾ ಉಪನೋಂದಾವಣಾಧಿಕಾರಿ ಕಚೇರಿಯಲ್ಲಿ ಕಾರ್‍ಯ ನಿರ್ವಹಿಸುತ್ತಿರುವವರು ಪರಿಸರದವರಾಗಿದ್ದಾರೆ. ಕಡಿಮೆ ವೇತನದೊಂದಿಗೆ ಕರ್ತವ್ಯ ನಿರ್ವಹಿಸುತ್ತಿರುವ ಅವರನ್ನು ದೂರ ದೂರದ ಕಡೆಗೆ ವರ್ಗಾಯಿಸಿರುವುದು ತೀರಾ ಅನ್ಯಾಯ. ಆದೇಶವನ್ನು ಶೀಘ್ರ ಹಿಂಪಡೆಯಬೇಕೆಂದು ಆಗ್ರಹಿಸಿದರು.



This post first appeared on V4news, please read the originial post: here

Share the post

ಗುತ್ತಿಗೆ ಸಿಬ್ಬಂದಿಗಳ ವರ್ಗಾವಣೆ, ಬ್ರಹ್ಮಾವರದಲ್ಲಿ ಪ್ರತಿಭಟನೆ

×

Subscribe to V4news

Get updates delivered right to your inbox!

Thank you for your subscription

×