Get Even More Visitors To Your Blog, Upgrade To A Business Listing >>

ಮಂಗಳೂರು ಮಹಾನಗರ ಪಾಲಿಕೆ ಸಾಮಾನ್ಯ ಸಭೆ, ಒಳಗೆ ಪಕ್ಷಗಳ ವಾಗ್ವಾದ, ಹೊರಗೆ ಜನರ ಪ್ರತಿಭಟನೆ

mccmeet

mccco
ರೆಡ್ ಬಿಲ್ಡಿಂಗ್ ಪ್ರದೇಶದ ರಸ್ತೆ ವಿಸ್ತರಣೆ ವಿಷಯವು ಪಾಲಿಕೆ ಸಭಾಂಗಣದಲ್ಲಿ ಆಡಳಿತ ಪಕ್ಷದ ಹಾಗೂ ವಿರೋಧ ಪಕ್ಷದ ಸದಸ್ಯರ ನಡುವೆ ವಾಗ್ವಾದಕ್ಕೆ ಕಾರಣವಾಯ್ತು. ಇದೇ ವೇಳೆ ಮತ್ತೊಂದು ಕಡೆಯಲ್ಲಿ ರೆಡ್ ಬಿಲ್ಡಿಂಗ್ ನಿವಾಸಿಗಳು ಪ್ರತಿಭಟನೆ ನಡೆಸುತ್ತಿದ್ದರು. ಮಂಗಳೂರು ಮಹಾನಗರಪಾಲಿಕೆ ಸಾಮಾನ್ಯ ಸಭೆಯಲ್ಲಿ ರಗಳೆಗಳು ಮುಂದುವರಿದವು. ಹೊರಗಡೆ ರೆಡ್ ಬಿಲ್ಡಿಂಗ್ ಪ್ರದೇಶದ ರಸ್ತೆ ವಿಸ್ತರಣೆ ವಿರೋಧಿಸಿ ಅಲ್ಲಿನ ನಿವಾಸಿಗಳು ಪ್ರತಿಭಟನೆ ನಡೆಸಿದರು. ಅತ್ತ ಪಾಲಿಕೆ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಪಕ್ಷ ನಾಯಕರು ವಿಷಯವನ್ನು ಪ್ರಸ್ತಾಪಿಸಿದರು. ಈ ವೇಳೆ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ನಾಯಕರ ನಡುವೆ ಮಾತಿನ ಚಕಮಕಿ ಜೋರಾಗಿ ನಡೆಯಿತು.
ಮೇಯರ್ ಕವಿತಾ ಸನಿಲ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಪಕ್ಷ ಸದಸ್ಯೆ ರೂಪಾ ಡಿ. ಬಂಗೇರ ವಿಷಯವನ್ನು ಪ್ರಸ್ತಾಪಿಸಿ, ರೆಡ್ ಬಿಲ್ಡಿಂಗ್ ಪ್ರದೇಶದ ರಸ್ತೆ ವಿಸ್ತರಣೆ ಜನರಿಗೆ ಪೂರಕವಾಗಿಲ್ಲ, ಜನರಿಗೆ ಅವಶ್ಯಕತೆ ಇಲ್ಲದ ಅಭಿವೃದ್ಧಿ ಕೆಲಸವವನ್ನು ಯಾಕೆ ಮಾಡಲಾಗುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು. ಆಡಳಿತ ಪಕ್ಷದ ಸದಸ್ಯರು, ಈಗಾಗಲೇ ಪಾಲಿಕೆ ಅಧಿಕಾರಿಗಳು ಸರ್ವೇ ಮಾಡಲು ಹೋದಾಗ ತಡೆದಿರುವುದು ಸರಿಯಲ್ಲ ಅಂತಾ ವಾದ ಮಂಡಿಸಿದರು.



This post first appeared on V4news, please read the originial post: here

Share the post

ಮಂಗಳೂರು ಮಹಾನಗರ ಪಾಲಿಕೆ ಸಾಮಾನ್ಯ ಸಭೆ, ಒಳಗೆ ಪಕ್ಷಗಳ ವಾಗ್ವಾದ, ಹೊರಗೆ ಜನರ ಪ್ರತಿಭಟನೆ

×

Subscribe to V4news

Get updates delivered right to your inbox!

Thank you for your subscription

×